ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ಶ್ರೇಷ್ಠ ಕೃತಿಗಳ ಪ್ರಕಾಶನಕ್ಕೆ ಪ್ರೋತ್ಸಾಹ : ಡಾ.ವಸುಂಧರಾ ಭೂಪತಿ
ಕಾಸರಗೋಡು: ಗಡಿನಾಡು ಕಾಸರಗೋಡಿನ ಲೇಖಕರ ಶ್ರೇಷ್ಠ ಕೃತಿಗಳನ್ನು ಆಯ್ದು ಸಂಕಲನ ಮಾಡಿ ಪ್ರಕಟಿಸಿ ಮಾರಾಟ ಮಾಡುವಂತಹ ಪ್ರಕಾಶಕರು ಅಥವಾ ಪ್ರಕಾಶನಾ ಸಂಸ್ಥೆಯೂ ಇಂದಿನ ಅನಿವಾರ್ಯವಾಗಿದೆ. ಕಾಸರಗೋಡಿನ ಕನ್ನಡ ಲೇಖಕರ ಶ್ರೇಷ್ಠ ಕೃತಿಗಳ ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಲಿದೆ ಎಂದು ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅವರು ಭರವಸೆ ನೀಡಿದರು.
ನಗರದ ಹೊಸ ಬಸ್ನಿಲ್ದಾಣ ಪರಿಸರದ ಸಿಟಿ ಟವರ್ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕಾಸರಗೋಡಿನ ಕನ್ನಡ ಸಾಹಿತಿ-ಲೇಖಕರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಸರಗೋಡಿನ ಶ್ರೇಷ್ಠ ಕೃತಿಗಳ ಜೊತೆಯಲ್ಲಿ ಮಕ್ಕಳು ರಚಿಸಿದ ಕೃತಿಗಳನ್ನು ಮುದ್ರಿಸಿ ಕನರ್ಾಟಕ ರಾಜ್ಯ ಮತ್ತು ಕಾಸರಗೋಡಿನ ಪ್ರತಿ ನಗರ - ಗ್ರಾಮಗಳಲ್ಲಿಯ ಸಾರ್ವಜನಿಕ ಗ್ರಂಥಾಲಯಗಳಿಗೂ, ಶಾಲಾ ಕಾಲೇಜುಗಳಿಗೂ, ಸಂಘಸಂಸ್ಥೆಗಳ ಗ್ರಂಥಾಲಯಗಳಿಗೂ ಒದಗಿಸುವ ವ್ಯವಸ್ಥೆ ಕಲ್ಪಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವ ಜೊತೆಯಲ್ಲಿ ಕನ್ನಡ ಪರ ಹೋರಾಟದಲ್ಲಿ ನಾನೂ ಕನ್ನಡಿಗರ ಜೊತೆ ಇರುವುದಾಗಿ ಹೇಳಿದರು. ವಿಧಾನಸಭೆಯಲ್ಲಿ ಕಾಸರಗೋಡಿನ ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದೇನೆ. ತನ್ನ ಮಾತೃ ಭಾಷೆ ಮಲೆಯಾಳವನ್ನು ಎಷ್ಟು ಪ್ರೀತಿಸುತ್ತೇನೋ ಅದಕ್ಕಿಂತ ಮಿಗಿಲಾಗಿ ಸುಂದರ ಹಾಗೂ ಮನೋಹರ ಭಾಷೆಯಾದ ಕನ್ನಡವನ್ನೂ ಪ್ರೀತಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕನ್ನಡ ಹೋರಾಟಗಾರ ಅಡೂರು ಉಮೇಶ್ ನಾಕ್, ಸಮಾಜ ಸೇವಕ ಬಿ.ಸುಂದರ ರಾವ್, ಸಾಹಿತಿ ಎ.ನರಸಿಂಹ ಭಟ್ ಕಾಸರಗೋಡು, ನಿವೃತ್ತ ಉಪಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ, ಹಿರಿಯ ಪತ್ರಕರ್ತ ಎಂ.ವಿ.ಬಳ್ಳುಳ್ಳಾಯ, ಹಿರಿಯ ವಿದ್ವಾಂಸ ವಿದ್ವಾನ್ ಸುಂದರ ಶೆಟ್ಟಿ ಮತ್ತಿತರರನ್ನು ಗೌರವಿಸಲಾಯಿತು.
ಈ ಸಂಬಂಧವಾಗಿ ನಡೆದ ಚಚರ್ೆಯಲ್ಲಿ ಸುಕಮಾರ ಆಲಂಪಾಡಿ, ವಿಜಯಲಕ್ಷ್ಮೀ ಶ್ಯಾನುಭೋಗ್, ಹುಸೈನ್ ಮಾಸ್ಟರ್, ಬಿ.ವಿ.ಕುಳಮರ್ವ, ಎ.ನರಸಿಂಹ ಭಟ್, ಸನ್ನಿಧಿ ಟಿ.ರೈ, ಪ್ರಭಾವತಿ ಕೆದಿಲಾಯ, ನ್ಯಾಯವಾದಿ ಸುಂದರ ರಾವ್ ಮೊದಲಾದವರು ತಮ್ಮ ಅಭಿಪ್ರಾಯ, ಹಲವು ಬೇಡಿಕೆಗಳನ್ನು ಮುಂದಿರಿಸಿದರು.
ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಂಚಾಲಕ ಕೇಳು ಮಾಸ್ಟರ್ ಅಗಲ್ಪಾಡಿ ಅವರು ಸ್ವಾಗತಿಸಿ, ಕನರ್ಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಕೋಶಾಧಿಕಾರಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಕನರ್ಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಉಪಾಧ್ಯಕ್ಷ ಪ್ರೊ.ಶ್ರೀನಾಥ್ ಕಾಸರಗೋಡು ವಂದಿಸಿದರು.

