ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 22, 2017
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಅಧಿಕಾರಿಗಳಿಗಿಂತ ಕಡಿಮೆ ಸಂಬಳ
ದೆಹಲಿ: `ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನವು ಇನ್ನೂ ಕೇಂದ್ರ ಸಕರ್ಾರದ ಸಂಪುಟ ಕಾರ್ಯದಶರ್ಿ ಮತ್ತು ಕಾರ್ಯದಶರ್ಿಗಳ ವೇತನಕ್ಕಿಂತ ಕಡಿಮೆಯೇ ಇದೆ. 7ನೇ ವೇತನ ಆಯೋಗ ಜಾರಿಯಾಗಿದ್ದರೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನ ಹೆಚ್ಚಳಕ್ಕೆ ಸಂಪುಟ ಕಾಯರ್ಾಲಯ ಅನುಮೋದನೆ ನೀಡಿಲ್ಲ. ಅಲ್ಲದೆ ದೇಶದ ಪ್ರಥಮ ಪ್ರಜೆಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಮಗಳಿಗೆ ಇನ್ನೂ ಅಗತ್ಯ ತಿದ್ದುಪಡಿ ತಂದಿಲ್ಲ' ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.
`ಇದಕ್ಕೆ ಸಂಬಂಧಿಸಿದ ಕಡತವನ್ನು ಗೃಹ ಸಚಿವಾಲಯವು ಒಂದು ವರ್ಷದ ಹಿಂದೆಯೇ ಸಂಪುಟ ಕಾಯರ್ಾಲಯಕ್ಕೆ ತಲುಪಿಸಿದೆ. ಆದರೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ' ಎಂದು ಮೂಲಗಳು ಹೇಳಿವೆ.

