ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ತಮಿಳು ತಾರೆ ಸೂರ್ಯ ಮಂಜೇಶ್ವರದಲ್ಲಿ
ಮಂಜೇಶ್ವರ: ಗಡಿ ಗ್ರಾಮ ಮಂಜೇಶ್ವರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಕೇಂದ್ರೀಕರಿಸಿ ಬೃಹತ್ ಬಜೆಟ್ ನಲ್ಲಿ ನಿಮರ್ಾಣಗೊಳ್ಳಲಿರುವ ಐತಿಹಾಸಿಕ ಕಥೆಯಾದರಿಸಿದ ಕಾಯಂಕುಳ ಕೊಚ್ಚುಣ್ಣಿ ಚಲನಚಿತ್ರ ಚಿತ್ರೀಕರಣಕ್ಕೆ ಶನಿವಾರ ಪ್ರಸಿದ್ದ ತಮಿಳು ಚಲನಚಿತ್ರ ತಾರೆ ಸೂರ್ಯ ಸಂದರ್ಶನ ನಡೆಸಿ ಅಚ್ಚರಿ ಮೂಡಿಸಿದರು.
ಶನಿವಾರ ಸಂಜೆ ತಲಪ್ಪಾಡಿ ಸಮೀಪದ ಕಜೆಕ್ಕೋಡಿಗೆ ಭೇಟಿ ನೀಡಿದರು.ಈ ಸಂದರ್ಭ ಎರಡೂ ರಾಜ್ಯಗಳ ಬೃಹತ್ ಸಂಖ್ಯೆಯ ಅಭಿಮಾನಿಗಳು ಕಿಕ್ಕಿರಿದು ನೆರೆದು ವಾದ್ಯಘೋಷಗಳೊಂದಿಗೆ ಸೂರ್ಯ ಅವರಿಗೆ ಸ್ವಾಗತ ನೀಡಿದರು.
ಪ್ರಸಿದ್ದ ಮಲೆಯಾಳ ಚಲನಚಿತ್ರ ನಿದರ್ೇಶಕ ರೋಶನ್ ಆಂಡ್ರೂಸ್ ನಿದರ್ೇಶನದ ಕಾಯಂಕುಳಂ ಕೊಚ್ಚುಣ್ಣಿ ಸಿನಿಮಾದ ಚಿತ್ರೀಕರಣ ಮಂಜೇಶ್ವರ, ಉದ್ಯಾವರ, ಕೊಣಾಜೆ ಕೇಂದ್ರೀಕರಿಸಿ ನಡೆಯುತ್ತಿದ್ದು, ಪ್ರಸಿದ್ದ ನಟ ಲಿವಿನ್ ಪೋಳಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೂರು ಕೋಟಿ ರೂ.ಗಳ ಬೃಹತ್ ಬಜೆಟ್ ನ ಈ ಚಿತ್ರ ಮುಂದಿನ ವರ್ಷ ಓಣಂ ಸಂದರ್ಭ ತೆರೆ ಕಾಣಲಿದ್ದು, ಅಂತರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಟ ಗೋಕುಲಂ ಗೋಪಾಲ್, ಬಾಬು ಆಂಟನಿ ಹಾಗು ಸೂರ್ಯರ ಪತ್ನಿ ಜ್ಯೋತಿಕಾ ಈ ಸಂದರ್ಭ ಜೊತೆಗಿದ್ದರು. ರೋಶನ್ ಆಂಡ್ರೂಸ್ ರೊಂದಿಗೆ ನಿಕಟ ಸಂಪರ್ಕದಲ್ಲಿರುವ ಸೂರ್ಯ ಅವರು, ಅವರ ಕರೆಗೆ ಓಗೊಟ್ಟು ಚಿತ್ರದ ಬಗ್ಗೆ ಸಮಾಲೋಚಿಸಲು ಸೌಹಾರ್ಧ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭ ಕಾಯಂಕುಳಂ ಕೊಚ್ಚುಣ್ಣಿ ಚಿತ್ರದ ಮೊದಲ ಲುಕ್ ಪೋಸ್ಟರ್ ನ್ನು ಸೂರ್ಯ ಹಾಗೂ ರೋಶನ್ ಆಂಡ್ರೂಸ್ ಬಿಡುಗಡೆಗೊಳಿಸಿದರು.ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿ ಬಳಿಕ ತೆರಳಿದರು. ಮಂಜೇಶ್ವರದಲ್ಲಿ ಸೂರ್ಯರಿಗೆ ನೀಡಿದ ಅದಸ್ದೂರಿಯ ಸ್ವಾಗತದ ಬಗ್ಗೆ ಅವರು ಮಾತನಾಡಿ ಈವರೆಗೆ ಇಂತಹ ಸ್ವಾಗತವನ್ನು ನಾನು ಅನುಭವಿಸಿರಲಿಲ್ಲವೆಂದು ತಿಳಿಸಿ, ಅಭಿಮಾನಿಗಳನ್ನು ಅಭಿನಂದಿಸಿದರು.
ಎಳನೀರಿಗೆ ಮಾರುಹೋದ ಚಿತ್ರ ದಿಗ್ಗಜ:
ತಮಿಳು ಸ್ಟಾರ್ ಸೂರ್ಯ ಪತ್ನಿ ಜ್ಯೋತಿಕಾರೊಂದಿಗೆ ಮೊದಲು ಪರಸ್ಪರ ಕೈಹಿಡಿದು ಆಗಮಿಸಿ ನೆರೆದ ಅಭಿಮಾನಿಗಳ ಹರ್ಷಕ್ಕೆ ಕಾರಣರಾದರು. ಬಳಿಕ ನೀಡಲಾದ ಎಳನೀರನ್ನು ಜೊತೆಯಾಗಿ ಸ್ವೀಕರಿಸಿದರು. ಈ ವೇಳೆ ಎಳನೀರಿನ ರುಚಿಗೆ ಮಾರುಹೋದ ಸೂರ್ಯ ಅವರು ಪತ್ನಿಯೊಂದಿಗೆ ತಾನು ಇನ್ನೊಂದು ಎಳನೀರು ಬಯಸುವುದಾಗಿ ತಿಳಿಸಿದರು. ನಗುತ್ತಾ ಪತಿಯ ಇಂಗಿತದಂತೆ ತಾನೂ ಮತ್ತೊಂದು ಎಳನೀರನ್ನು ತರಿಸಿ, ಪತಿಯ ಜೊತೆಗೆ ಸವಿದರು.



