ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಪಳ್ಳತ್ತೂರು ಸೇತುವೆಗೆ ಶಿಲಾನ್ಯಾಸ
ಮುಳ್ಳೇರಿಯ : ಕನರ್ಾಟಕ ಗಡಿ ಪ್ರದೇಶವಾದ ದೇಲಂಪಾಡಿ ಗ್ರಾಮ ಪಂಚಾಯತಿಯ ನಿವಾಸಿಗಳ ಬಹು ಕಾಲದ ಬೇಡಿಕೆಯಾದ ಅಪಘಾತ ಭೀತಿಯಲ್ಲಿದ್ದ ಪಳ್ಳತ್ತೂರು ಸೇತುವೆಗೆ ನೂತನ ಸೇತುವೆಯ ಶಿಲಾನ್ಯಾಸವನ್ನು ಶುಕ್ರವಾರ ಸಚಿವ ಜಿ ಸುಧಾಕರನ್ ನೆರವೇರಿಸಿದರು.
ದೇಲಂಪಾಡಿಯನ್ನು ಕನರ್ಾಟಕ ಈಶ್ವರಮಂಗಲ ಮೂಲಕ ಸಂಪರ್ಕ ಕಲ್ಪಿಸುವ ಈ ಸೇತುವೆಯು ಕಿರಿದಾಗಿದ್ದು, ಇಕ್ಕೆಡೆಗಳಲ್ಲಿ ತಡೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಸೇತುವೆ ಮೇಲಿಂದ ನೀರು ಹರಿದು ಹೋಗುವುದರಿಂದ ಅನೇಕ ಮಂದಿಯ ಜೀವಕ್ಕೆ ಹಾನಿಯಾಗಿತ್ತು. ಈ ಬಗ್ಗೆ ನಾಗರಿಕರು ನೂತನ ಸೇತುವೆಗಾಗಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಇದರಂತೆ ಶಾಸಕರಾದ ಕೆ ಕುಂಞಿರಾಮನ್ ಅವರ ಶಿಫಾರಾಸಿನಂತೆ ನೂತನ ಸೇತುವೆ ನಿಮರ್ಿಸುವುದಕ್ಕಾಗಿ 7.58 ಕೋಟಿ ರೂ ವೆಚ್ಚದಲ್ಲಿ ಮಂಜೂರುಗೊಳಿಸಲಾಗಿದೆ. ಎರಡು ವರ್ಷದೊಳಗೆ ಪೂರ್ಣಗೊಳಿಸಲು ಸಚಿವರು ಅದೇಶ ನೀಡಿದ್ದಾರೆ.
ಎರಡು ವಾಹನಗಳು ಸುಗಮವಾಗಿ ಹಾದುಹೋಗಲು ಸಾಧ್ಯವಾಗುವ ರೀತಿಯಲ್ಲಿ ಏಳೂವರೆ ಮೀಟರ್ ಆಗಲದಲ್ಲಿ ಸೇತುವೆ ನಿಮರ್ಿಸಲಾಗುವುದು. ಅಲ್ಲದೆ ಇಕ್ಕೆಡೆಗಳಲ್ಲಿ ಪಾದಚಾರಿಗಳಿಗೆ ಪುಟ್ಪಾತ್ ನಿಮರ್ಿಸಲಾಗುವುದು. ಪಳ್ಳತ್ತೂರು-ಅಡೂರು-ಪಾಂಡಿ ರಸ್ತೆ ನವೀಕರಣಕ್ಕಾಗಿ ಮೂವತ್ತುಕೋಟಿ ರೂ ಮಂಜೂರುಗೊಳಿಸಲಾಗಿದೆ. ಈ ಕೆಲಸ ಒಂಬತ್ತು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ರಾಜ್ಯ ಸರಕಾರದ ಐದು ವರ್ಷ ಪೂರ್ಣವಾಗುವ ಸಂದರ್ಭದಲ್ಲಿ ಐದು ಲಕ್ಷ ಕೋಟಿ ರೂ.ನ ಅಭಿವೃದ್ಧಿ ಯೋಜನೆಗಳಿಗಾಗಿ ನಿಧಿ ಬಿಡುಗಡೆಗೊಳಿಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಜಿ ಸುಧಾಕರನ್ ಹೇಳಿದರು. 18 ತಿಂಗಳಲ್ಲಿ ಮಂಡಿಸಿದ ಎರಡು ಬಜೆಟ್ಗಳಲ್ಲಿ ಮಂಜೂರುಗೊಳಿಸಿದ 75,000 ಕೋಟಿ ರೂ.ನ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತುತ ಜಾರಿಗೊಂಡಿದೆ. ಲೋಕೋಪಯೋಗಿ ಇಲಾಖೆ ಮಾತ್ರ 25,000 ಕೋಟಿ ರೂ. ನ ನಿಮರ್ಾಣ ಕಾಮಗಾರಿ ಪ್ರಗತಿಯಲ್ಲಿರುವುದಾಗಿ ಸಚಿವರು ಹೇಳಿದರು.
ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಮೂಲಕ ಸರಕಾರದ ಬೊಕ್ಕಸದಿಂದ ಹಣ ಪಡೆಯದೆ ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಇತರ ದೊಡ್ಡ ಅಭಿವೃದ್ಧಿ ಯೋಜನೆಗಳಿಗೆ ನಿಧಿಯನ್ನು ವಿನಿಯೋಗಿಸಲಾಗುವುದು. ಗ್ರಾಮ-ನಗರ ಭೇದವಿಲ್ಲದೆ ಸಮಗ್ರ ಅಭಿವೃದ್ಧಿಯೇ ಸರಕಾರದ ಗುರಿ ಸಾರಿಗೆ ಮೂಲ ಸೌಕರ್ಯವನ್ನು ಎಲ್ಲಾ ವಿಭಾಗದ ಜನರಿಗೂ ತಲುಪಿಸಲಾಗುವುದು. ಅಭಿವೃದ್ಧಿಯ ಹೆಸರಲ್ಲಿ ಸರಕಾರಕ್ಕೆ ಯಾವುದೇ ರಾಜಕೀಯವಿಲ್ಲ ಎಂದು ಅವರು ಹೇಳಿದರು.
ಪಳ್ಳತ್ತೂರು ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಂಕರಿ ಭಂಡಾರಿ, ಕಾರಡ್ಕ ಬ್ಲಾಕ್ ಪಂ. ಉಪಾಧ್ಯಕ್ಷ ಸಿ.ಕೆ. ಕುಮಾರನ್, ಜಿಲ್ಲಾ ಪಂ. ಸದಸ್ಯೆ ಎ.ಪಿ ಉಪಾ, ದೇಲಂಪಾಡಿ ಗ್ರಾಮ ಪಂ. ಸದಸ್ಯ ಸುಹೈಬ್, ಕುಂಬಳೆ ಕೋ-ಅಪರೇಟಿವ್ ಹಾಸ್ಪಿಟಲ್ ಅಧ್ಯಕ್ಷ ಎ. ಚಂದ್ರಶೇಖರನ್ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು. ಲೋಕೋಪಯೋಗಿ ಇಲಾಖೆ ಉತ್ತರ ವಲಯ ಅಭಿಯಂತರ ಪಿ. ಕೆ. ಮಿನಿ ವರದಿ ಮಂಡಿಸಿದರು. ದೇಲಂಪಾಡಿ ಗ್ರಾಮ ಪಂ. ಅಧ್ಯಕ್ಷ ಎ ಮುಸ್ತಫ ಹಾಜಿ ಸ್ವಾಗತಿಸಿ ಲೋಕೋಪಯೋಗಿ ಹಿರಿಯ ಅಭಿಯಂತರ ಬಿ ರಿಯಾದ್ ವಂದಿಸಿದರು.


