ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವವು ಪ್ರಥಮದಿನ ಸಂಪನ್ನ
ಮುಳ್ಳೇರಿಯ : ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವವು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾಮರ್ಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಸಂಪನ್ನಗೊಂಡಿತು.
ಪೂವರ್ಾಹ್ನದಿಂದ ಅಭಿಷೇಕ ಪೂಜೆ, ಗಣಹೋಮ, ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ ಇವು ನಿರಂತರವಾಗಿ ಜರಗಿದವು. ಸಂಗೀತ ಉಪಾಸನಾ ಸೇವೆಯ ಅಂಗವಾಗಿ ಕಾಸರಗೋಡು ಪುರಂದರದಾಸ ಸಂಗೀತ ವಿದ್ಯಾಲಯದ ಗುರು ಕೆ ಸದಾಶಿವ ಆಚಾರ್ಯ ಅವರ ಶಿಷ್ಯೆಯರಾದ ಸರಸ್ವತಿ, ಕುಮಾರಿ ವೈ ಯಸ್ ಕಾವ್ಯಾ ಭಟ್ , ಭಾಗ್ಯಶ್ರೀ ಮತ್ತು ಶುಭಾ ಮಂಜುನಾಥ್ ಪುತ್ಯಮೂಲೆ ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಸಂಪನ್ನವಾಯಿತು.
ಮಧ್ಯಾಹ್ನ ಮಾಹಾಪೂಜೆ, ಪ್ರಸಾದ, ಅನ್ನದಾನ ನಡೆಯಿತು. ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರರಾಗಿರುವ ಶ್ರೀ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು.



