ಪೆರ್ಲ ವಿದ್ಯುತ್ ಬಿಲ್ಲು ಪಾವತಿ ಸಮಯ ಬದಲಾವಣೆ : ಕಾಂಗ್ರೆಸ್ ಖಂಡನೆ
ಪೆರ್ಲ: ಪೆರ್ಲ ವಿದ್ಯುತ್ ವಿಭಾಗೀಯ ಇಲಾಖೆಯಲ್ಲಿ ಡಿಸೆಂಬರ್ ತಿಂಗಳಿಂದ ವಿದ್ಯುತ್ ಬಿಲ್ಲು ಪಾವತಿಸುವ ಸಮಯ ಬೆಳಗ್ಗೆ 8 ರಿಂದ ಅಪರಾಹ್ನ 6 ರ ವರೆಗೆ ಇರುವ ವ್ಯವಸ್ಥೆಗೆ ಬದಲಾಗಿ ಬೆಳಗ್ಗೆ 9 ರಿಂದ ಅಪರಾಹ್ನ 3 ರ ವರೆಗೆ ಬಿಲ್ಲು ಪಾವತಿಸುವ ವ್ಯವಸ್ಥೆಮಾಡಿರುವ ತೀಮರ್ಾನವನ್ನು ಎಣ್ಮಕಜೆ ಮಂಡಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಬಿಲ್ಲು ಪಾವತಿಸುವ ಎಲ್ಲಾ ವ್ಯವಸ್ಥೆಯು ಕಂಪ್ಯೂಟರೀಕರಣ ಆದ ಮೇಲೆ ಸಿಬ್ಬಂದಿಗಳಿಗೆ ಕೆಲಸ ಕಡಿಮೆ ಇರುವುದರಿಂದ ಹೆಚ್ಚಿನ ಹಣದ ವ್ಯವಹಾರ ಇರುವ ಬ್ಯಾಂಕ್ಗಳಲ್ಲಿ ಕೂಡಾ ಗ್ರಾಹಕರಿಗೆ ಹೆಚ್ಚಿನ ಸಮಯದ ಅವಕಾಶ ಒದಗಿಸಿ ಕೊಟ್ಟಿರುವುದರಿಂದ ಕೇವಲ ಬಿಲ್ಲು ಪಾವತಿಸುವ ವ್ಯವಸ್ಥೆ ಮಾತ್ರ ಇರುವ ಸರಕಾರಿ ವಿದ್ಯುತ್ ಇಲಾಖೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಸಮಯ ಒದಗಿಸುವ ಅವಶ್ಯಕತೆಯನ್ನು ಎಣ್ಮಕಜೆ ಮಂಡಲ ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ ಐದು ಎಕ್ರೆವರೆಗಿನ ಕೃಷಿಕರಿಗೆ ಪಂಪು ಸೆಟ್ ಬಿಲ್ಲು ಪಾವತಿಸುವ ಹಣಕ್ಕೆ ಸಂಪೂರ್ಣ ರಿಯಾಯಿತಿ ಇದುವರೆಗೆ ಇದ್ದು, ಇದೀಗ ವಿದ್ಯುತ್ ಇಲಾಖೆ ರಿಯಾಯಿತಿಯನ್ನು ತಿರಸ್ಕರಿಸಿ ಗ್ರಾಹಕರೇ ಬಿಲ್ಲು ಹಣವನ್ನು ಪಾವತಿಸುವಂತೆ ನೋಟೀಸು ನೀಡಿರುತ್ತಾರೆ. ಈ ವಿಚಾರವನ್ನು ಕೂಡಾ ಎಣ್ಮಕಜೆ ಮಂಡಲ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.