HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಮೊಗೇರ ಸಂಸ್ಕೃತಿ-ಸಂವಹನ ವಿಚಾರಗೋಷ್ಠಿ
    ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ನಡೆಯುತ್ತಿರುವ ಭೀಮ ವಷರ್ಾಚರಣೆಯ ಅಂಗವಾಗಿ ಮೊಗೇರ ಸಂಸ್ಕೃತಿ-ಸಂವಹನ ವಿಚಾರಗೋಷ್ಠಿಯು ಡಿ.23ರಂದು ಬೆಳಗ್ಗೆ 10.30ರಿಂದ ಸಂಜೆ 3.30ರ ತನಕ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆಯಲಿರುವುದು.
   ಮೊಗೇರ ಸಂಸ್ಕೃತಿಯ ನೆಲೆ ಬೆಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೊಗೇರ ಸಂಸ್ಕೃತಿಯನ್ನು ಪುಸ್ತಕ ರೂಪದಲ್ಲಿ ದಾಖಲಾತಿ ನಡೆಸುವ ಮಹತ್ತರವಾದ ಯೋಜನೆಗೆ ಈ ವಿಚಾರಗೋಷ್ಠಿ ಪೂರಕವಾಗಲಿದೆ. ಅಂಬೇಡ್ಕರ್ ವಿಚಾರ ವೇದಿಕೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದು ಸಂಸ್ಕೃತಿ ದಾಖಲೀಕರಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಮೂಡಿಸಲಿದೆ.
  ಮೊಗೇರರ ಹುಟ್ಟು-ಬೆಳವಣಿಗೆ-ಆಚಾರ-ವಿಚಾರಗಳು ಎಂಬ ವಿಷಯದಲ್ಲಿ ಕಾಸರಗೋಡು ಸರಕಾರೀ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾಲತಾ ಚೇವಾರು, ಮೊಗೇರರ ವೈವಾಹಿಕ - ಮರಣ ಮತ್ತು ಮರಣಾನಂತರ ವಿಧಿ ವಿಧಾನಗಳು ಎಂಬ ವಿಷಯದಲ್ಲಿ ಜಿಎಂಆರ್ಎಸ್ ವೆಳ್ಳಚ್ಚಾಲ್ನ ಪ್ರಬಂಧಕ ಹಾಗೂ ತರಬೇತುದಾರ ರಾಜನ್ ಇರಿಯಣ್ಣಿ ಹಾಗೂ ಸಮನ್ವಯಕಾರರಾಗಿ ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಭಾಗವಹಿಸಲಿದ್ದಾರೆ. ಸಮುದಾಯದ ಹಿರಿಯ ವ್ಯಕ್ತಿಗಳು, ಅನುಭವ ಸಂಪನ್ನರು ಈಗಾಗಲೇ ಈ ವಿಷಯದಲ್ಲಿ ಅಧ್ಯಯನ ಕೈಗೊಂಡ ವಿದ್ವಾಂಸರು, ಮೊಗೇರ ಸಂಘಟನೆಗಳ ಪದಾಧಿಕಾರಿಗಳು, ಸಮುದಾಯ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಬೇಕಾಗಿ ಸಂಬಂಧಪಟ್ಟವರು ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries