HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಡಿ.17ರಂದು ಮವ್ವಾರಿನಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ
    ಮುಳ್ಳೇರಿಯ : ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಮುಜುಂಗಾವು ಹಾಗೂ
ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಶ್ರೀ ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯ ಮವ್ವಾರು ಹಾಗೂ ಕೇರಳ ಹಿರಿಯ ನಾಗರಿಕರ ವೇದಿಕೆ ಮವ್ವಾರು ಘಟಕ,  ಇವರ ಸಂಯುಕ್ತ ಸಹಯೋಗದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವು  ಮವ್ವಾರು ಷಡಾನನ ಯುವಕ ಸಂಘದ ಕಾಯರ್ಾಲಯದಲ್ಲಿ ಡಿ. 17 ಭಾನುವಾರದಂದು  ಬೆಳಿಗ್ಗೆ 10ರಿಂದ 1ರ ತನಕ ಜರಗಲಿರುವುದು.
ಮುಜುಂಗಾವು  ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಡಾ. ಆನಂದ ಉದ್ಘಾಟಿಸಲಿರುವರು.  ಕುಂಬ್ಡಾಜೆ ಸೇವಾ ಸಹಕಾರಿ ಬೇಂಕು, ಮವ್ವಾರು ಇದರ ಅಧ್ಯಕ್ಷ  ಎಂ.ಸಂಜೀವ ಶೆಟ್ಟಿ, ಅಧ್ಯಕ್ಷತೆ ವಹಿಸಲಿದ್ದಾರೆ.
ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ನೇತ್ರ ತಜ್ಞರಾದ ಡಾ. ಪ್ರಶಾಂತ ಕುಮಾರ್ ಆಚಾರ್,  ಮವ್ವಾರು ಷಡಾನನ ಯುವಕ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ, ಹಿರಿಯ ನಾಗರಿಕರ ವೇದಿಕೆ ಮವ್ವಾರು ಘಟಕದ ಕಾರ್ಯದಶರ್ಿ ವೆಂಕಟ್ರಮಣ ಭಟ್ ಶ್ರೀಕುಂಜ ಮೊದಲಾದವರು ಶುಭ ಹಾರೈಸುವರು. 
ಆರ್ಹ ಬಡರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. .ಶಸ್ತ್ರಚಿಕಿತ್ಸೆಗೆ ಒಳಪಡುವವರು ಒಂದು ಜೊತೆ ಹೊಸಬಟ್ಟೆ ಅಥವಾ ಸ್ವಚ್ಛವಾಗಿ ತೊಳೆದ ಬಟ್ಟೆಯನ್ನು ತರಬೇಕು. ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಿಗೆ ಮಾತ್ರ ಆಹಾರದ ವ್ಯವಸ್ಥೆ ಮಾಡಲಾಗುವುದರೊಂದಿಗೆ ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘಾಟಕರು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries