ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುವ ಧನುಸಂಕ್ರಮಣ ಶ್ರೀ ಭೂತಬಲಿ ಮಹೋತ್ಸವವು ಶನಿವಾರ ಮಧ್ಯಾಹ್ನ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ ಸಂಪನ್ನವಾಯಿತು.
ಎರಡು ದಿನಗಳಲ್ಲಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಶುಕ್ರವಾರ ರಾತ್ರಿ ಶ್ರೀ ಭೂತಬಲಿ ಉತ್ಸವ, ಬೆಡಿಸೇವೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಡಾ. ವಿನಯಾ ಪದ್ಯಾಣ ಅವರಿಂದ ಸಂಗೀತ ಕಛೇರಿ, ಕು. ನಿಯತಿ ನವಕಾನ ಬೆಂಗಳೂರು ಅವರಿಂದ ಭರತನಾಟ್ಯ, ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಮತ್ತು ಬಳಗದವರಿಂದ `ನೃತ್ಯಾಕರ್ಷಣಾ' ಪ್ರದರ್ಶನಗೊಂಡಿತು.
ಶ್ರೀಭೂತ ಬಲಿ ಉತ್ಸವ ಸಂದರ್ಭದಲ್ಲಿ ಪೆರಡಾಲದ ವಿಶೇಷ ಆಕರ್ಷಣೆಯ `ಬೇತಾಳ'ದ ಚೆಂಡೆ, ವಾದ್ಯಘೋಷಕ್ಕೆ ತಕ್ಕುದಾದ ನೃತ್ಯ ಪುಟ್ಟ ಮಕ್ಕಳನ್ನು ಹಾಗೂ ಭಕ್ತರನ್ನು ತನ್ನತ್ತ ಸೆಳೆಯುತ್ತಿತ್ತು.




