HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಎಡನೀರು ಮಠದಲ್ಲಿ ಆರಾಧನೋತ್ಸವ
   ಬದಿಯಡ್ಕ: ದೃಢ ವಿಸ್ವಾಸದಿಂದ ಶಕ್ತಿ ಪ್ರಾಪ್ತಿಯಾಗುತ್ತದೆ. ಜಗತ್ತಿನಲ್ಲಿ ಗುರುತ್ವದ ಶಕ್ತಿ ಅತ್ಯಧಿಕವಾಗಿದ್ದು, ಗುರುವಿನ ಅನುಗ್ರಹದ ಹೊರತು ಯಶಸ್ಸು ಲಭಿಸದು ಎಂದು ಪ್ರಸಿದ್ದ ಜ್ಯೋತಿಷಿ ವಿದ್ವಾನ್.ಬೇಳ ಪದ್ಮನಾಭ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
   ಶ್ರೀಮದ್ ಎಡನೀರು ಮಠದಲ್ಲಿ ಗುರುವಾರ ನಡೆದ ಶ್ರೀಮದೀಶ್ವರಾನಂದ ಭಾರತೀ ಶ್ರೀಪಾದಂಗಳ ಆರಾಧನಾ ಮಹೋತ್ಸವದ ಅಂಗವಾಗಿ ಸಂಜೆ ನಡೆದ ಆರಾಧನಾ ಮಹೋತ್ಸವ ಸಭೆಯಲ್ಲಿ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.
   ಅಜ್ಞಾನದ ಕೂಪದಿಂದ ಮೇಲೆತ್ತಿ ಜ್ಞಾನದ ಬೆಳಕು ನೀಡುವ ಗುರುವಿಗೆ ಭಾರತೀಯ ಪರಂಪರೆಯಲ್ಲಿ ಮಹತ್ವಪೂರ್ಣ ಸ್ಥಾನ ಕಲ್ಪಿಸಲಾಗಿದ್ದು, ಅದು ಪರಿಪೂರ್ಣ ಬದುಕಿನ ಸಮಗ್ರತೆಗೆ ಕೈದೀವಿಗೆ ಎಂದು ಅವರು ತಿಳಿಸಿದರು. ಇಂದಿನ ಆಧುನಿಕತೆಯಲ್ಲಿ ಪರಂಪರೆಯ ನಂಬಿಕೆ, ನಡವಳಿಕೆಗಳ ಮೇಲೆ ವಿಶ್ವಾಸ ಕಡಿಮೆಗೊಳ್ಳುತ್ತಿರುವುದರಿಂದ ಅಶಾಂತಿ, ಅಸುರಕ್ಷಿತತೆಯ ಭಾವ ಅಡ್ಡಾಡಿಸುತ್ತಿದೆ. ಆದರೆ ಗುರುವಿನ ಅನುಗ್ರಹವಿದ್ದವನಿಗೆ ಅಂತಹ ವಿಕಲ್ಪತೆ ಎದುರಾಗದು ಎಂದು ತಿಳಿಸಿದ ಅವರು, ಆರಾಧನೋತ್ಸವದ ಮೂಲಕ ಪರಂಪರೆಯನ್ನು ಮುಂದುವರಿಸುತ್ತಿರುವ ಎಡನೀರು ಶ್ರೀಗಳು ಎಲ್ಲಾ ದೃಷ್ಟಿಯಿಂದಲೂ ಮಹಾನ್ ಗುರುಗಳಾಗಿ ಸಮಾಜವನ್ನು ಮುನ್ನಡೆಸುತ್ತಿರುವುದು ಪುಣ್ಯಕರ ಎಂದು ತಿಳಿಸಿದರು.
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭರತೀ ಶ್ರೀಗಳು ದಿವ್ಯ ಉಪಸ್ಥಿತರಿದ್ದ ಸಭೆಯಲ್ಲಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀನರಸಿಂಹಾಶ್ರಮ ಸ್ವಾಮೀಜಿ ಉಪಸ್ಥಿತರಿದ್ದು ಮಾತನಾಡಿ, ಗುರುವಿನ ಅನುಗ್ರಹದಿಂದ ಧೀಶಕ್ತಿಯು ಪ್ರಭಲಗೊಂಡು ಸವಾಲುಗಳಿಗೆದುರಾಗಿ ಗೆಲ್ಲಲು ಕಾರಣವಾಗುತ್ತದೆ. ಅಂತಃಕರಣದೊಳಗಿನ ಭಗವದರ್ಶನ ನೀಡುವ ಶಕ್ತಿ ಗುರುವಿಗೊಬ್ಬನಿಗಿದ್ದು, ಅಚಲ ವಿಶ್ವಾಸ, ಶ್ರದ್ದಾ ಭಕ್ತಿಗಳಿಂದ ಗಟ್ಟಿಗೊಳ್ಳುವ ಬಲ ಎಲ್ಲರಿಗೂ ಪ್ರಾಪ್ತಿಯಾಗಲಿ ಎಂದು ಹರಸಿದರು.
   ಕನರ್ಾಟಕ ಬ್ಯಾಂಕಿನ ನಿದರ್ೇಶಕ ಅನಂತಕೃಷ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸ್ಕೃತ ವಿದ್ವಾನ್ ಗೋವಿಂದ ಭಟ್ ಬಳ್ಳಾರಿ,ಪ್ರಸಿದ್ದ ವಾಸ್ತುತಜ್ಞ ಮುನಿಯಂಗಳ ಕೃಷ್ಣಪ್ರಸಾದ್ ರವರನ್ನು ವಿಶೇಷ ಆದಾರಭಿಮಾನಗಳಿಂದ ಗೌರವಿಸಲಾಯಿತು. ಡಾ.ರಮಾನಂದ ಬನಾರಿ ಅಭಿನಂದನಾ ಭಾಷಣಗೈದರು.
  ಕೆ.ಎಸ್ ಮಂಜುನಾಥ್, ರಾಂ.ಪ್ರಸಾದ್ ಕಾಸರಗೋಡು, ಮಹಾಲಿಂಗ ಭಟ್ ಎಡನೀರು, ರವೀಂದ್ರ ಭಟ್ ಎಡನೀರು, ಸತೀಶ್ ಕುಮಾರ್ ಎಡನೀರು, ಜಯರಾಮ ಮಂಜತ್ತಾಯ ಎಡನೀರು ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಐ.ವಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ವಂದಿಸಿದರು. ಡಾ.ಮಹಾಲಿಂಗ ಭಟ್ ಬಿಲ್ಲಂಪದವು ಕಾರ್ಯಕ್ರಮ ನಿರೂಪಿಸಿದರು.
   ಆರಾಧನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ಮೆರವಣಿಗೆ, ಮಹಾಪೂಜೆ, ವೃಂದಾವನ ಪೂಜೆ, ತೀರ್ಥಪ್ರಸಾದ ಕಾರ್ಯಕ್ರಮಗಳು ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಅರವಿಂದ ಹೆಬ್ಬಾರ್ ಮತ್ತು ವಸಂತಲಕ್ಷ್ಮೀ ಹೆಬ್ಬಾರ್ ಶಿಷ್ಯವೃಂದದವರಿಂದ ದೇವರ ನಾಮಗಳ ಆಲಾಪನೆ ನಡೆಯಿತು. ಹಿಮ್ಮೇಳದಲ್ಲಿ ವಿದ್ವಾನ್ ಗಣರಾಜ ಕಾಲರ್ೆ(ವಯಲಿನ್), ವಿದ್ವಾನ್ ಪುರುಷೋತ್ತಮ ಪುಣಿಚಿತ್ತಾಯ(ಮೃದಂಗ), ವಿದ್ವಾನ್. ಮಾಧವ ಆಚಾರ್ಯ(ತಬಲಾ)ದಲ್ಲಿ ಸಹಕರಿಸಿದರು. ಗಾಗರ್ಿ ಶಬರಾಯ, ಅರ್ಚನಾ ಮತ್ತು ಸಮನ್ವಿ ಗಾಯನ ಕರ್ಯಕ್ರಮ ನಡೆಸಿಕೊಟ್ಟರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries