ಹೆದ್ದಾರಿಯಲ್ಲಿ ಅಪಘಾತ-ಓರ್ವ ಗಂಭೀರ
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಉಪ್ಪಳ ಗೇಟ್ ಬಳಿ ಶುಕ್ರವಾರ ಸಂಜೆ ಅಟೋ ಹಾಗೂ ಖಾಸಗೀ ಬಸ್ ಪರಸ್ಪರ ಡಿಕ್ಕಿಹೊಡೆದು ಅಟೋ ಚಾಲಕ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾದ ಗಟನೆ ನಡೆದಿದೆ.
ಉಪ್ಪಳ ಗೆಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಳದಿಂದ ಮಂಜೇಶ್ವರದತ್ತವ ಸಾಗುತ್ತಿದ್ದ ಅಟೋ ಮಂಜೇಶ್ವರ ಭಾಗದಿಂದ ಕಾಸರಗೋಡಿನತ್ತ ಸಾಗುತ್ತಿದ್ದ ಖಾಸಗೀ ಬಸ್ (ಮಜರ್ಾನಾ ಟ್ರಾವೆಲ್ಸ್) ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಟೋಚಾಲಕ ಖಸಾಯಿ ಇಸ್ಮಾಯಿಲ್ (42) ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಅಟೋ ಸಂಪೂರ್ಣ ಹಾನಿಗೊಂಡು ಶೇ.95 ರಷ್ಟು ನಜ್ಜುಗುಜ್ಜಾಗಿದೆ. ಅಪಘಾತದ ಕಾರಣ ರಾ.ಹೆದ್ದಾರಿ ಅರ್ಧ ಗಂಟೆಗೂ ಹೆಚ್ಚು ಕಾಲ ಸ್ತಬ್ದಗೊಂಡಿತು. ಅಪಘಾತದಿಂದ ಹೆದ್ದಾರಿಯಲ್ಲಿ ಮಡುಗಟ್ಟಿದ್ದ ರಕ್ತವನ್ನು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳದವರು ನೀರು ಹಾಯಿಸಿ ಶುಚಿಗೊಳಿಸಿದರು. ಪೋಲೀಸರು ದೂರು ದಾಖಲಿಸಿದ್ದಾರೆ.