HEALTH TIPS

ಯಾವುದೇ ಶೀರ್ಷಿಕೆಯಿಲ್ಲ

    ಮತ್ತೆ ಕಾಡಾನೆಗಳ ಉಪಟಳ ಆರಂಭ-ವ್ಯಾಪಕ ನಾಶ-ಜೀವ ಭಯದಲ್ಲಿ ಗ್ರಾಮೀಣ ಜನತೆ
  ಮುಳ್ಳೇರಿಯ: ಜನಜೀವನವನ್ನು ತೀವ್ರ ಅಸ್ವಸ್ಥಗೊಳಿಸುವ ಮತ್ತು ವ್ಯಾಪಕ ನಾಶನಷ್ಟಗಳಿಗೆ ಕಾರಣವಾಗುವ ಕಾಡಾನೆಗಳ  ಈ ಸೀಸನ್ ನ ಧಾಳಿ ಆರಂಭಿಸಿದ್ದು, ಜನರು ಆತಂಕಿತರಾಗಿದ್ದಾರೆ.
   ಸೋಮವಾರ ರಾತ್ರಿ ಕಾನತ್ತೂರು ಪರಿಸರದ ಕೃಷಿ ತೋಟಗಳಿಗೆ ಧಾಳಿ ನಡೆಸಿದ್ದು ಲಕ್ಷಾಂತರ ರೂಗಳ ಕೃಷಿಗಳನ್ನು ನಾಶಗೊಳಿಸಿದೆ. ಇಲ್ಲಿಯ ದಿ.ಕುಂಞಿರಾಮನ್ ನಾಯರ್ ರವರ ರಬ್ಬರ್ ತೋಟಕ್ಕೆ ಧಾಳಿ ನಡೆಸಿ ಭಾರೀ ಹಾನಿಗೆ ಕಾರಣವಾಗಿದೆ. ಸಮೀಪದ ಮೋಹನನ್ ನಾಯರ್ ರವರ ತೆಂಗು ಕಂಗಿನ ತೋಟಗಳನ್ನು ಹೊಕ್ಕು ಮರಗಳನ್ನು ಕಿತ್ತೆಗೆದು ನಾಶಗೊಳಿಸಿದೆ.
   ಕಾಡಾನೆಗಳು ಸುಳಿಯುತ್ತಿರುವ ಬಗ್ಗೆ ಭಾನುವಾರದಿಂದ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ.  ಮಂಗಳವಾರ ರಾತ್ರಿಯಿಂದ ಮುಂಜಾನೆಯ ತನಕ ಸ್ಥಳೀಯ ಕೆಲವರು ಬೆಂಕಿ ಉರಿಸುವ ಮೂಲಕ ಕೆಲವೆಡೆಗಳಲ್ಲಿ ಕಾಡಾನೆಗಳು ಊರಾಚೆ ಬಾರದಂತೆ ತಡೆಹಿಡಿದು ಮುಂಜಾನೆ ವೇಳೆ ಕಾಡೊಳಗೆ ದಾಟಿಸುವಲ್ಲಿ ಯಶಸ್ವಿಯಾದರು. ಸೋಮವಾರ ಕುಂಡಂಗುಳಿಯಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು ಕೃಷಿ ನಾಶಗೊಳಿಸಿತ್ತು.
   ಕುಂಡಂಗುಳಿ, ಕಾನತ್ತೂರು ಪರಿಸರದಲ್ಲಿ ಮಂಗಳವಾರ ಮುಂಜಾನೆಯೂ ಕಾಡಾನೆಗಳು ಅಲ್ಲಲ್ಲಿ ಕಂಡುಬಂದಿರುವುದರಿಂದ ಬೆಳಿಗ್ಗಿನ ಹೊತ್ತು ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಹೆತ್ತವರು ತಿಣುಕಾಡಿದ ಬಗ್ಗೆ ಮಾಹಿತಿ ಲಭಿಸಿದೆ.ಸೋಮವಾರ ರಾತ್ರಿ ಧಾಳಿಗೈದ ಹಿಂಡಿನಲ್ಲಿ 6 ಕ್ಕಿಂತ ಮೇಲ್ಪಟ್ಟು ಕಾಡಾನೆಗಳಿದ್ದವೆಂದು ತಿಳಿದುಬಂದಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries