HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಮಾಜ ಸೇವೆಯಲ್ಲಿ ಯಂ.ಕೆ ಬಾಲಕೃಷ್ಣರ ಆದರ್ಶಗಳು ಯುವ ಜನತೆಗೆ ಮಾದರಿ-ಬಿ.ವಿ.ರಾಜನ್
   ಪೆರ್ಲ: ದೀರ್ಘಕಾಲ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯರಾಗಿ,ಉಪಾಧ್ಯಕ್ಷರಾಗಿ,ಸಾಂಸ್ಕೃತಿಕ  ಹಾಗೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ತನ್ನ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಯಂ.ಕೆ ಬಾಲಕೃಷ್ಣರ ಜೀವನವು ಯುವ ಜನತೆಗೆ ಮಾದರಿ ಎಂದು ಸಿ.ಪಿ.ಐ ಜಿಲ್ಲಾ ಸಹ ಕಾರ್ಯದಶರ್ಿ ಬಿ.ವಿ ರಾಜನ್ ನುಡಿದರು.
  ಅವರು ಎ.ಐ.ವೈ.ಎಪ್ ವಾಣಿನಗರ ಘಟಕದ ಆಶ್ರಯದಲ್ಲಿ  ಯಂ.ಕೆ ಬಾಲಕೃಷ್ಣ ಸ್ಮರಣಾರ್ಥವಾಗಿ ಭಾನುವಾರ ಔಆನೀನಗರದಲ್ಲಿ ನಡೆದ ಅಂತರಾಜ್ಯ ಮಟ್ಟದ ಮಹಿಳೆಯರ ಮತ್ತು ಪುರುಷರ  ಬೃಹತ್ ಹಗ್ಗ ಜಗ್ಗಾಟವನ್ನು ಉದ್ಘಾಟಿಸಿ ಮಾತಾಡಿದರು.
  ಸಭೆಯ ಅಧ್ಯಕ್ಷತೆಯನ್ನು ಸಿ.ಪಿ.ಐ ಹಿರಿಯ ನೇತಾರ ಪಿ.ಯಸ್ ಕಡಂಬಳಿತ್ತಾಯ ವಹಿಸಿದರು.ಸಭೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಚಂದ್ರಾವತಿ ಯಂ,ಸಿ.ಪಿ.ಐ ವಾಣಿನಗರ ಬ್ರಾಂಚ್ ಕಾರ್ಯದಶರ್ಿ ಯಸ್.ಬಿ ನರಸಿಂಹ ಪೂಜಾರಿ,ಎ.ಐ.ವೈ.ಎಪ್ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಅಖಿಲ್ ಮಾಥ್ಯೂ ,ಎ.ಐ.ವೈ.ಎಪ್ ವಾಣಿನಗರ ಘಟಕದ ಅಧ್ಯಕ್ಷ ನವೀನ್ ಚಂದ್ರ ಕೊಲ್ಲಮಜಲು ಉಪಸ್ಥಿತರಿದ್ದರು.
  ಈ ಸಂದರ್ಭದಲ್ಲಿ ಕೇರಳ ರಾಜ್ಯ ಮಟ್ಟದ ವಿಜ್ಞಾನ ಮೇಳದ ವಕರ್ಿಂಗ್ ಮೋಡೆಲ್ ನಲ್ಲಿ ಎ ಗ್ರೇಡ್ ಪಡೆದ ಜಿ.ಯಚ್.ಯಸ್.ಯಸ್.ಪಡ್ರೆ ಶಾಲಾ ವಿಧ್ಯಾಥರ್ಿಗಳಾದ ಚೈತ್ರ.ಬಿ ಬೈರಡ್ಕ ಮತ್ತು ಆಶ್ರಿತಾ .ಬಿ ಇವರನ್ನು ಅಭಿನಂದಿಸಲಾಯಿತು. ಎ.ಐ.ವೈ.ಎಪ್ ವಾಣಿನಗರ ಘಟಕದ ಕಾರ್ಯದಶರ್ಿ ರವಿ ವಾಣಿನಗರ ಸ್ವಾಗತಿಸಿ, ಶಶಿಕಲಾ ಕೆ ಕಾರ್ಯಕ್ರಮ ನಿರೂಪಿಸಿದರು.ತಿಲಕ್ ರಾಜ್ ವಂದಿಸಿದರು.
    ಸಮಾರೋಪ ಸಮಾರಂಭದ ಅಧಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಚಂದ್ರಾವತಿ ಯಂ ವಹಿಸಿದರು. ವಿಜೇತ ತಂಡಗಳಿಗೆ ಬಹುಮಾನವನ್ನು ಎ.ಐ.ವೈ.ಎಪ್ ಬದಿಯಡ್ಕ ಮಂಡಲ ಕಾರ್ಯದಶರ್ಿ ಸನೋಜ್ ಕಾಡಗಂ ವಿತರಿಸಿದರು.ಸಭೆಯಲ್ಲಿ ಸಿ.ಪಿ.ಯಂ ಕುಂಬಳೆ ಏರಿಯ ಸದಸ್ಯ ರಾಮಕೃಷ್ಣ ರೈ ,ಸಿ.ಪಿ.ಐ ವಾಣಿನಗರ ಬ್ರಾಂಚ್ ಕಾರ್ಯದಶರ್ಿ ಯಸ್.ಬಿ ನರಸಿಂಹ ಪೂಜಾರಿ ಉಪಸ್ಥಿತರಿದ್ದರು. ಎ.ಐ.ವೈ.ಎಪ್ ಅಧ್ಯಕ್ಷ ನವೀನ್ ಚಂದ್ರ ಕೊಲ್ಲಮಜಲು ಸ್ವಾಗತಿಸಿ, ವಿನಯ್ ಕೊಲ್ಲಮಜಲು ವಂದಿಸಿದರು.ಹಗ್ಗ ಜಗ್ಗಾಟದ ಪುರುಷ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸ್ಪಾಕರ್್ ಪಾಲಾರ್, ದ್ವೀತಿಯ ಬಹುಮಾನವನ್ನು ಬ್ರದಸರ್್ ಮಾಲೂರ್ ಕಾಯಂ, ತೃತೀಯ ಬಹುಮಾನವನ್ನು ಷಣ್ಮುಖ ಬಳಗ ಆರ್ಲಪದವು ,ಚತುರ್ಥ ಬಹುಮಾನವನ್ನು ಸ್ಕಂದಶ್ರೀ ತೂಂಬಡ್ಕ ಪಡೆಯಿತು.ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅನುಸ್ವರಮ್ ನಂಬಿರಡ್ಕಂ ,ದ್ವಿತೀಯ ಬಹುಮಾನವನ್ನು ಚಿರಮಾರನಲ್ ಪ್ರಾದೇಶಿಕ ಮಾತೃ ಸಮಿತಿ ಪಡೆಯಿತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries