HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               "ಏಯಾ...ಕೊಂಕಣಿ ವಡ್ಡೋವ್ಯ.
      ಕುಂಬಳೆಯಲ್ಲಿ ಗಮನ ಸೆಳೆದ ಕೊಂಕಣಿ ಅಕಡೆಮಿಯ ಗಡಿನಾಡು ಕೊಂಕಣಿ ಸಂಭ್ರಮ.  

   ಕುಂಬಳೆ: ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ಕೊಂಕಣಿ ಭಾಷೆ, ಸಂಸ್ಕ್ರತಿಯ ಪರಂಪರೆಯನ್ನು ಯುವ ಸಮೂಹಕ್ಕೆ ಪರಿಚಯಿಸುವಲ್ಲಿ ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಾರ್ಯಯೋಜನೆಗಳು ಶ್ಲಾಘನೀಯ. ರಾಷ್ಟ್ರದ ಬಹುತೇಕ ಭಾಷೆಗಳ ಮೇಲೆ ಸುಧೀರ್ಘ ಕಾಲಗಳಿಂದ ಪ್ರಭಾವ ಬೀರಿರುವ ಕೊಂಕಣಿ ಭಾಷೆ, ಜನಾಂಗವನ್ನು ಸಂರಕ್ಷಿಸಿ ಬೆಳೆಸುವಲ್ಲಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಹೆಚ್ಚು ಜನ ಮುಂಚೂಣಿಗೆ ಬರಬೇಕೆಂದು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಅಧ್ಯಕ್ಷ ಡಾ.ಅನಂತ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುವ ಕೊಂಕಣಿ ಮಾನ್ಯತಾ ದಿನಾಚರಣೆಯ  ಭಾಗವಾಗಿ ಭಾನುವಾರ ಕುಂಬಳೆಯ ಸಂತ ಮೋನಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಗಡಿನಾಡು ಕೊಂಕಣಿ ಸಂಭ್ರಮ-2017 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ನಿರಂತರ ಚಟುವಟಿಕೆಗಳು ಕ್ರಿಯಾಶೀಲವಾಗಿಸುವುದರ ಜೊತೆಗೆ ಕರ್ತವ್ಯ ನಿರ್ವಹಣೆಯ ಅನಿವಾರ್ಯತೆಯ ಬಗ್ಗೆ ಎಚ್ಚರ ನೀಡುತ್ತದೆ. ಆಂಗ್ಲ ಭಾಷೆಯ ವ್ಯಾಮೋಹದ ಮಧ್ಯೆ ಮಾತೃಭಾಷೆ, ಸಂಸ್ಕೃತಿಯ ನಿರ್ಲಕ್ಷ್ಯ ಸಲ್ಲದೆಂದು ತಿಳಿಸಿದ ಅವರು ಪ್ರಾದೇಶಿಕ ಭಾಷೆಗಳ ಉಳಿಯುವಕೆಯಲ್ಲಿ ಅಕಾಡೆಮಿಗಳ ಜೊತೆಗೆ ಎಲ್ಲರೂ ಜೊತೆಯಾಗಿ ಕೈಜೋಡಿಸಿ ಮುಂದುವರಿಯಬೇಕು ಎಂದು ತಿಳಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯಕ್ ಮಾತನಾಡಿ, ವಿಶ್ವ ವ್ಯಾಪಕಗೊಂಡಿರುವ ಕೊಂಕಣಿ ಭಾಷೆ ಅತ್ಯಂತ ಪ್ರಾಚೀನವಾಗಿದ್ದು, ವಿಭಿನ್ನ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಹೊಂದಿದೆ. ಪ್ರಾದೇಶಿಕವಾಗಿ ಭಿನ್ನತೆಗಳಿರುವ ಕೊಂಕಣಿ ಭಾಷೆ ಸಮಷ್ಠಿಯಲ್ಲಿ ಸಮಗ್ರ ಸಂಸ್ಕೃತಿಯ ಸಂಕೇತ ಎಂದು ತಿಳಿಸಿದರು. ಹೊಸ ತಲೆಮಾರಿನ ಧಾವಂತದ ಬದುಕಿನ ಮಧ್ಯೆ ಸಂಸ್ಕೃತಿ, ಮಣ್ಣಿನ ಸಂವೇದನೆಗಳನ್ನು ನೆನಪಿಸುವಲ್ಲಿ ಅಕಾಡೆಮಿಯ ಮೂಲಕ ವಿಸ್ಕೃತ ನೆಲೆಗಟ್ಟಿನ ಯತ್ನಗಳಾಗುತ್ತಿದೆ. ಈಗಾಗಲೇ ಮುಂಬಯಿ, ಕೋಲ್ಕತ್ತ, ದೆಹಲಿ, ಚೆನ್ನೈ, ಗುಜರಾತ್, ಪಂಜಾಬ್ ಸಹಿತ ಹೆಲವೆಡೆಗಳಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಸಂಸ್ಕೃತಿಯನ್ನು ನೆನಪಿಸಿ ಪುನಃಸ್ಥಾಪಿಸುವ ಯತ್ನದಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಂಬಳೆ ಸಂತಮೋನಿಕಾ ದೇವಾಲಯದ ಧರ್ಮಗುರು ಮಾರ್ಷಲ್ ಸಲ್ದಾನಾ ಮಾತನಾಡಿ, ಭಾಷೆಯೊಂದರ ಬೆಳವಣಿಗೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಕೊಡುಗೆ ಮಹತ್ವದ್ದಾಗಿದ್ದು, ಈ ಹಿನ್ನೆಲೆಯ ಯತ್ನಗಳಾಗಬೇಕು ಎಂದು ತಿಳಿಸಿದರು. ಧಾಮರ್ಿಕವಾಗಿ ಭಿನ್ನ ನೆಲೆಗಟ್ಟಿನ ಜೀವನ ಶೈಲಿಯಾದರೂ ಕೊಂಕಣಿಗರೆಲ್ಲ ಒಂದೆಂಬ ಭಾವ ಗಟ್ಟಿಗೊಳಿಸಿ ಸಮಗ್ರ ಶ್ರೇಯಕ್ಕೆ ಕಾರ್ಯ ವಿಸ್ತರಿಸಬೇಕು ಎಂದರು.
   ಸಮಾಜ ಸೇವಕ ಮೋಹನ್ ಕುಮಾರ್ ಕುಂಬ್ಲೇಕಾರ್,ನಾಯ್ಕಾಪು ಸಾಯಿ ಮಂದಿರದ ಅಧ್ಯಕ್ಷ ಅಂಪಾ ನಾಯಕ್, ಕುಂಬಳೆ ಸಂತಮೋನಿಕಾ ದೇವಾಲಯದ ಉಪಾಧ್ಯಕ್ಷ ಥೋಮಸ್ ಕ್ರಾಸ್ತಾ, ರಂಗಕಿಮರ್ಿ ಫೆಲಿಕ್ಸ್ ಕ್ರಾಸ್ತಾ, ಕೇರಳ ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಫನ್ ಡಿಸೋಜಾ, ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಸುಧಾಕರ ಕಾಮತ್, ಸದಸ್ಯೆ ಪುಷ್ಪಲತಾ, ಮಂಜುನಾಥ ನಾಯಕ್, ದಾಮೋದರ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
  ಕನರ್ಾಟಕ ಕೊಂಕಣಿ ಅಕಾಡೆಮಿ ಸದಸ್ಯ ಸಂಚಾಲಕ ಲಕ್ಷ್ಮಣ ಪ್ರಭು ಕುಂಬಳೆ ಸ್ವಾಗತಿಸಿ, ಥೋಮಸ್ ಕ್ರಾಸ್ತಾ ವಂದಿಸಿದರು. ಸುನಿತಾ ಮಚಾದೋ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಮಕ್ಕಳ ಕವಿತಾ ವಾಚನ ಕಾರ್ಯಕ್ರಮ ನಡೆಯಿತು. ರಿಷಾ ವಿನಲ್ ಮಾಟರ್ಿಸ್, ಶೈನಿ ಶ್ವೇಡಲ್ ಡಿಸೋಜಾ, ಪ್ರಿಯಲ್ ಕ್ರಾಸ್ತಾ ಬೇಳ, ಮೇಲಿಸಾ ಪ್ರಿಟ್ಸಿಟಾ ಕ್ರಾಸ್ತಾ, ಶಿಇವಾನಿ, ಸಾತ್ವಿಕ್ ನಾಯಕ್, ಆಶ್ರಯ್ ನಾಯಕ್, ಪ್ರಿಶಲ್ ವಿನೋಲಾ ಕ್ರಾಸ್ತಾ ಸ್ವರಚಿತ ಕವನಗಳನ್ನು ವಾಚಿಸಿದರು. ಅಕ್ಷತಾ ಪಿ. ಭಟ್ ಕವಿತಾ ವಾಚನ ನಿರ್ವಹಿಸಿದರು. ಬಳಿಕ ರೀಮಾ ಕ್ರಾಸ್ತಾ ಮತ್ತು ತಂಡ, ಲಕ್ಷ್ಮೀ ಬಾಳಿಗ ಮತ್ತು ತಂಡ, ಲೀರಾ ಡಿಸೋಜಾ ತಂಡದವರಿಂದ ಸಮೂಹ ಗಾಯನ, ಐರಿನ್ ರೋಡ್ರಿಗಸ್ ತಂಡದವರಿಂದ ಕೊಂಕಣಿ ಶೋಭಾನೆ, ಸ್ವಾತಿ ಭಟ್, ಅಕ್ಷತಾ ಭಟ್, ಅನುಷಾ ಭಟ್ ರಿಂದ ಏಕ ವ್ಯಕ್ತಿ ನೃತ್ಯ, ಲೀರಾ ಡಿಸೋಜಾ, ಸ್ವಾತಿ ಭಟ್ ಕುಂಬಳೆರ, ದೀಪ್ತಿ ಎಲಿಜಬೆತ್ ಡಿಸೋಜಾ, ಅಹಲ್ಯಾ ಪ್ರಭು, ಮ್ಯಾಕ್ಸಿಂ ಮೆಲ್ವಿನ್ ಕ್ರಸ್ತಾರಿಂದ ಗಾಯನ, ಭಾವನ ನಾಯಕ್ ನಾಯ್ಕಾಪು ರವರಿಂದ ಕೊಂಕಣಿ ಹರಿಕಥಾ ಸಂಕೀರ್ತನೆ, ಸಹೂಹ ನೃತ್ಯಗಳ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
   ಗಮನ ಸೆಳೆದ ಕೊಂಕಣಿ ತಿಂಡಿಗಳ ಪ್ರದರ್ಶನ:
   ಸಮಾರಂಭದಲ್ಲಿ ಆಯೋಜಿಸಲಾದ ಕೊಂಕಣಿ ಆಹಾರ ಪದಾರ್ಥಗಳು ಜನಮನಸೆಳೆದವು. ನಯನಾ ಹೆಗ್ಡೆ ಪುತ್ತೂರು ತಂಡ ಮತ್ತು ಸ್ನೇಹಾ ಪೈ ಪೆರ್ಲ ತಂಡ ವೈವಿಧ್ಯಮಯ ಸಾಂಪ್ರದಾಯಿಕ ಕೊಂಕಣಿ ತಿಂಡಿಗಳನ್ನು ಪ್ರದಶರ್ಿಸಿದರು. ಜೀರ್ಮೀರೆ ಕಡಿ(ಜೀರಿಗೆ-ಕರಿಮೆಣಸು),ಇಂಗಾ ಚಟ್ನಿ(ಇಂಗಿನ ಚಟ್ನಿ), ಕೊಟ್ಟೋ(ಹಲಸಿನ ಎಲೆಯ ಕಡುಬು), ಉಮ್ಮಣ್(ಕೆಸುವನ ಗಡ್ಡೆ ಪದಾರ್ಥ), ಕಶಾರಂಜ್ ನುಂಚೆ(ಉಪ್ಪಿನ ಕಾಯಿ), ಪತ್ತೊಲಿ(ಅರಸಿನ ಎಲೆಯ ಕಡುಬು),ಪತ್ರಡೆ, ದುದ್ದಳಿ, ವಿಟಮಿನ್ ಉಂಡೆ, ಸಾಬಕ್ಕಿ ಉಸ್ಲಿ, ಮಸಾಲಾ ಮಜ್ಜಿಗೆ, ಜುಮ್ಕ(ಕಡಲೆ ಹಿಟ್ಟಿನ ಚಟ್ಲಿ), ಕರಿಬೇವು ಚಟ್ನಿ, ಆಯುವರ್ೇದಿಕ್ ಚಟ್ನಿ(ಐದು ಸಸ್ಯಗಳ ಚಟ್ನಿ), ನೀರು ದೋಸೆ,ಸಿರಿಧಾನ್ಯ ಸಿಹಿ ಲಾಡು ಮೊದಲಾದವುಗಳು ಗಮನ ಸೆಳೆದವು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries