ಮಾನವೀಯತೆಗೆ ಮತ್ತೊಮ್ಮೆ ಸಾಕ್ಷಿ
ನಿದ್ದೆಯಿಲ್ಲದ ರಾತ್ರಿಯಲ್ಲಿ ಹಾರಿ ಹೋದ ಆಂಬ್ಯುಲೆನ್ಸ್
ಉಪ್ಪಳ: ಬೆಳೆಯುತ್ತಿರುವ ತಂತ್ರಜ್ಞಾನ, ವ್ಯಾವಹಾರಿಕ ಜಗತ್ತು ಯಾಂತ್ರಿಕವಾಗಿ ಭಾವನೆಗಳಿಗೆ ಬೆಲೆ ನೀಡದೆ ನಾಗಾಲೋಟಗೈಯ್ಯುತ್ತಿದೆ ಎಂಬ ಕೂಗಿನ ಮಧ್ಯೆ ಇನ್ನೂ ಮಾನವೀಯತೆ ನೆಲೆಗೊಂಡಿದೆ ಎಂಬುದನ್ನು ಪುಷ್ಠಿಗೊಳಿಸುವ ವಿದ್ಯಮಾನಗಳು ನಮ್ಮ ನಡುವೆ ಅಲ್ಪ ನಿರಮ್ಮಳತೆಗೆ ಕಾರಣವಾಗುತ್ತದೆ. ಇಂತದೇ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರಿನಿಂದ ಎನರ್ಾಕುಳಂಗೆ ರೋಗಿಯನ್ನು ತಲುಪಿಸಿದ್ದು ಬರೇ 6 ತಾಸುಗಳಲ್ಲಿ. ಶುಕ್ರವಾರ ರಾತ್ರಿ ಮಂಗಳೂರಿನಿಂದ ಎನರ್ಾಕುಳಂನ ಲೇಕ್ ಶೋರ್ ಆಸ್ಪತ್ರೆಯುದ್ದಕ್ಕೂ ಆಂಬ್ಯುಲೆನ್ಸ್ ಸಾಗಲು ಝೀರೋ ಟ್ರಾಫಿಕ್ಗೆ ಸಹಕರಿಸಿದ್ದು ಸಾಮಾಜಿಕ ಜಾಲತಾಣವಾದ ವಾಟ್ಸ್ ಅಪ್ ಮತ್ತು ಫೇಸ್ಬುಕ್. ಉಪ್ಪಳ ಬಪ್ಪಾಯಿತೊಟ್ಟಿಯ ನಿವಾಸಿ, ಮಂಗಳೂರಿನ ಪದವಿ ವಿದ್ಯಾಥರ್ಿನಿ ಆಯಿಷತ್ ನುಸುರಾ(19) ಳಿಗೆ ತುತರ್ು ಚಿಕಿತ್ಸೆಗೆ ಇಂತಹ ಮಾನವೀಯ ಮ್ಯಾಜಿಕ್ ನೆರವು ಹರಿದು ಬಂತು.
ಮಂಗಳೂರು ಯೂನಿಟಿ ಆಸ್ಪತ್ರೆಯಿಂದ ಉಪ್ಪಳ ಮೂಲದ ಕಾಲೇಜು ವಿದ್ಯಾಥರ್ಿನಿಯೋರ್ವಳ ಕರುಳು ಸಂಬಂಧಿ ತುತರ್ು ಚಿಕಿತ್ಸೆಗೆ ಎನರ್ಾಕುಳಂ ಲೇಕ್ ಶೋರ್ ಆಸ್ಪತ್ರೆಗೆ ತುತರ್ು ಕೊಂಡೊಯ್ಯಬೇಕಾಗಿತ್ತು. ಈ ಸಂದರ್ಭದಲ್ಲಿ ರೋಗಿಯ ಸಂಬಂಧಿಕರು ಮೊರೆಹೋಗಿದ್ದು ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ಹಾಗೂ ಫೇಸ್ ಬುಕನ್ನು.
ರಾತ್ರಿ 9.30ಕ್ಕೆ ಮಂಗಳೂರಿನಿಂದ ಹೊರಟ ಆಂಬುಲೆನ್ಸ್ ತಲಪಾಡಿ ಗಡಿ ತಲುಪಿದ್ದು 9.45ಕ್ಕೆ.ಅಲ್ಲಿಂದೀಚೆಗೆ ನಡೆದಿದ್ದು ಪವಾಡ. ಆಂಬ್ಯುಲೆನ್ಸ್ನ್ನು ಝೀರೋ ಟ್ರಾಫಿಕ್ ಮೂಲಕ ಕಳುಹಿಸಲು ಯುವಕರ ಗಡಣವೇ ಹೆದ್ದಾರಿಯುದ್ದಕ್ಕೂ ಕೈ ಜೋಡಿಸಿದುವು. ಜೊತೆಗೆ ಕೇರಳ ಷೋಲಿಸರು, ಚೈಲ್ಡ್ ಲೈನ್ ತಂಡವು ಯುವಕರ ಪಡೆಯೊಂದಿಗೆ ಹೆದ್ದಾರಿ ವಾಹನ ಸಂಚಾರ ಸ್ಥಗಿತಗೊಳಿಸಿ ಆಂಬ್ಯುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ತಲಪಾಡಿಯಿಂದ 20 ನಿಮಿಷದಲ್ಲಿ ಕಾಸರಗೋಡು ತಲುಪಿದ ಆಂಬ್ಯುಲೆನ್ಸ್ ಎನರ್ಾಕುಳಂ ಆಸ್ಪತ್ರೆಗೆ ಮುಂಜಾನೆ 3.30ಕ್ಕೆ ತಲುಪಿತು.ಬರೋಬ್ಬರಿ 440 ಕೀ.ಮಿ.ತಲುಪಲು 6 ತಾಸುಗಳನ್ನು ತೆಗೆದುಕೊಂಡ ಆಂಬ್ಯುಲೆನ್ಸ್ ಗೆ ಅಲ್ಲಲ್ಲಿ ಸ್ಥಳೀಯ ಆಂಬುಲೆನ್ಸ್ ಗಳೂ ಪೋಲೀಸರೂ ಬೆಂಗಾವಲಾಗಿ ಅನುವು ಮಾಡಿಕೊಟ್ಟಿತು.
ರಾತ್ರಿಯಲ್ಲಿ ನಿದ್ದೆ ಬಿಟ್ಟು ಸಹಸ್ರಾರು ಜನ ನಾಗರಿಕರು ಕಾಲೇಜು ವಿದ್ಯಾಥರ್ಿನಿಯ ಚಿಕಿತ್ಸೆಗೆ ನೆರವಾದುದು ಇತಿಹಾಸವಾಯಿತು.
ಕಳೆದೊಂದು ತಿಂಗಳಲ್ಲಿ ಎರಡನೇಯದಿದು:
ಕಳೆದ ಒಂದು ತಿಂಗಳಲ್ಲಿ ಶುಕ್ರವಾರ ನಡೆದಿರುವುದು ಎರಡನೇ ಘಟನೆ. ಮೂರು ವಾರಗಳ ಹಿಂದೆ ಕಣ್ಣೂರಿನ ಆಸ್ಪತ್ರೆಯೊಂದರಿಂದ ಇದೇ ರೀತಿ ಮಗುವೊಂದನ್ನು ತಿರುವನಂತಪುರಕ್ಕೆ ಚೈಲ್ಡ್ಲೈನ್, ಪೋಲೀಸ್, ನಾಗರಿಕರ ಸಹಾಯದಿಂದ ಗಂಟೆಗಳಲ್ಲಿ ತಲಪಿಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿತ್ತು.