ಇಂದಿನಿಂದ ಧನುಪೂಜೆ ಆರಂಭ- ಧಾಮರ್ಿಕ ಕಾರ್ಯಕ್ಕೊಂದು ತಿಂಗಳು
ಕಿರಣ್ ಕಲಾಂಜಲಿ:
(ಶನಿವಾರ (ಇಂದು)ದಿಂದ ಕರಾವಳಿ ಸಹಿತ ರಾಷ್ಟ್ರದ ಬಹುತೇಕ ದೇವಾಲಯಗಳಲ್ಲಿ ಧನುಪೂಜೆ ಆರಂಭಗೊಮಡಿದ್ದು ಈ ಪ್ರಯುಕ್ತ ಹಿರಿಯ ರಂಗಕಮರ್ಿ, ಆಧ್ಯಾತ್ಮಿಕ ಚಿಂತಕ ಕಿರಣ್ ಕಲಾಂಜಲಿ ಯವರು ಸಮರಸಕ್ಕಾಗಿ ಈ ವಿಶೇಷ ಲೇಖನ ಬರೆದಿದ್ದಾರೆ.......ಸಂಪಾದಕ)
ಧನುಮರ್ಾಸದಲ್ಲಿ ಒಂದು ಪೂಜೆ ಮಾಡಿದರೂ, ಸಾವಿರಾರು ದಿನಗಳ ಕಾಲ ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ . ಇದೀಗ ಧನುರ್ ಮಾಸ ಡಿ.15 ರಿಂದ ಪ್ರಾರಂಭವಾಗಿದೆ.
ಸೂರ್ಯನು ಧನುರಾಶಿಯನ್ನು ಪ್ರವೇಶಿಸುವ ದಿನದಿಂದ ಆರಂಭಿಸಿ ಮಕರ ರಾಶಿಯವರಿಗೆ ಬರುವ ಒಂದು ತಿಂಗಳ ಕಾಲವೇ ಧನುಮರ್ಾಸ. ಈ ಧನುಮರ್ಾಸಕ್ಕೆ ಚಾಪಮಾಸ, ಕೋಂದಡ ಮಾಸ, ಕಾಮರ್ುಕ ಮಾಸ ಎಂದೂ ಹೆಸರಿದೆ. ಸೂರ್ಯ ಧನು ರಾಶಿಗೆ ಪ್ರವೇಶಿಸುವ ಕಾಲವನ್ನು ಧನುರ್ ಸಂಕ್ರಮಣ ಎನ್ನುತ್ತಾರೆ. ಹಾಗಾಗಿ ಧನುಮರ್ಾಸವು ಧನುರ್ ಸಂಕ್ರಮಣ ಕಾಲದಿಂದ ಮಕರ ಸಂಕ್ರಮಣ ಕಾಲದ ಮಧ್ಯಭಾಗದಲ್ಲಿ ಬರುತ್ತದೆ.
ನಮ್ಮ ಶಾಸ್ತ್ರಗಳಲ್ಲಿ ಈ ಮಾಸವನ್ನು ದೇವತಾ ಕಾರ್ಯಗಳಿಗಷ್ಟೇ ಮೀಸಲಿರಿಸುತ್ತಾರೆ. ಸಂಪ್ರದಾಯದ ಪ್ರಕಾರ ಈ ಮಾಸದ ಬ್ರಾಹ್ಮೀ ಮೂಹೂರ್ತದಲ್ಲಿ ದೇವಾನುದೇವತೆಗಳು, ಋ?ಷಿಮುನಿಗಳು ಶ್ರೀಮನ್ನಾರಾಯಣನ್ನು ಪ್ರಾಥರ್ಿಸುತ್ತಾರೆ. ಹಾಗಾಗಿ ವಿಷ್ಣು ಪೂಜೆಯ ನಂತರ ದೇವರಿಗೆ ಮುಗ್ಗಲವನ್ನು ನೈವೇದ್ಯ ಮಾಡುತ್ತಾರೆ.
ಧನುಮರ್ಾಸ ವಿಶೇಷ
ಧನುಮರ್ಾಸ ಮಹಾತ್ಮೆಯನ್ನು ಪಾಂಚರಾತ್ರಾಗಮ, ಆಗ್ನೇಯ ಪುರಾಣ ಮತ್ತು ಸ್ಮೃತಿ ಮುಕ್ತಾವಳಿಗಳಲ್ಲಿ ಹೇಳಲಾಗಿದೆ. ಪಾಂಚರಾತ್ರಾಗಮದಲ್ಲಿ ಧನುಮರ್ಾಸದ ಮಹಾತ್ಮೆಯನ್ನು ನಾಲ್ಕು ಆಧ್ಯಾಯಗಳಲ್ಲಿ ಹಂಸ ಮತ್ತು ಚತುಮರ್ುಖ ಬ್ರಹ್ಮನ ನಡುವೆ ಸಂವಾದ ನಡೆಯುತ್ತಿದೆ. ಮೊದಲ ಅಧ್ಯಾಯದಲ್ಲಿ ಧನುಮರ್ಾಸದ ಮಹತ್ವವನ್ನು ಸೂತ ಮಹಷರ್ಿಗಳು ವಿವರಿಸುತ್ತಾರೆ. ಎರಡನೇ ಅಧ್ಯಾಯದಲ್ಲಿ ರಾಜ ಸತ್ಯ ಅಧ್ಯಾಯದಲ್ಲಿ ಭಕ್ತ ತನ್ನ ಶಕ್ತ್ಯಾನುಸಾರ ನಡೆದುಕೊಳ್ಳಬೇಕಾದ ರೀತಿ ನೀತಿಗಳಿವೆ.
ನಾಲ್ಕನೇ ಅಧ್ಯಾಯದಲ್ಲಿ ವಿಪ್ರರಿಗೆ ಭೋಜನ ನೀಡಿ ಸತ್ಕರಿಸುವ ಬಗ್ಗೆ ವಿವರಣೆಯಿದೆ. ಮಹಾಭಾರತದಲ್ಲಿ ತನ್ನ ಆಹಾರ ತಾನೇ ಸಿದ್ಧ ಪಡಿಸಿಕೊಳ್ಳುವ ಬ್ರಾಹ್ಮಣನಿಗೆ ಪಾಂಡವರು ಉಪಚರಿಸಿದ ಪ್ರಸಂಗವನ್ನು ನೋಡಬಹುದು.
ಧನುಮರ್ಾಸದಲ್ಲಿ ಒಂದು ಪೂಜೆ ಮಾಡಿದರೂ, ಸಾವಿರಾರು ದಿನಗಳ ಕಾಲ ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ. ಈ ಮಾಸದಲ್ಲಿ ನಾರಾಯಣ ಸ್ಮರಣೆಯ ಜೊತೆಗೆ ಮಹಾಲಕ್ಷ್ಮಿಯ ಪ್ರೀತ್ಯರ್ಥವಾಗಿ ಶ್ರೀದೇವಿಯ ಸ್ತೋತ್ರವನ್ನೂ ಪಠಿಸಬೇಕು.
ಧನುವ್ರ್ಯತೀಪಾತಯೋಗ
ಧನುಮರ್ಾಸದಲ್ಲಿ ವ್ಯತೀಪಾತ ಯೋಗವು ಸಹಸ್ತ ಅಧರ್ೋದಯಕ್ಕೆ ಸಮಾನ. ಈ ದಿನ ಶ್ರಾದ್ಧ, ಪಿತೃ ತರ್ಪಣ ನೀಡಬೇಕು. ನೈವೇದ್ಯ ಮಾಡಿ ಭಗವಂತನಿಗೆ ಆಘ್ರ್ಯವನ್ನು ನೀಡಬೇಕು.
ಪುರಾಣಗಳಲ್ಲಿ:
ದೇವತೆಗಳ ರಾಜನಾದ ಇಂದ್ರ ಅಸುರರಿಂದ ಪರಾಜಿತನಾಗಿ ರಾಜ್ಯ ಭ್ರಷ್ಟನಾಗುತ್ತಾನೆ. ಆಗ ತನ್ನ ಪತಿದೇವನ ಕಲ್ಯಾಣಕ್ಕಾಗಿ ಶಚೀದೇವಿ ಶ್ರೀಹರಿಯನ್ನು ಪೂಜಿಸುತ್ತಾಳೆ. ಅದರಿಂದ ಸಂತುಷ್ಟನಾದ ಶ್ರೀಮನ್ನಾರಾಯಣನ ಕೃಪೆಯಿಂದ ಮತ್ತೆ ಇಂದ್ರ ಪದವಿ ಗಳಿಸುತ್ತಾನೆ.
ಮತ್ತೊಂದು ಕಥೆ ಪ್ರಕಾರ ಒಮ್ಮೆ ಪಾಂಡವರು ಯಜ್ಞವನ್ನು ಮಾಡುವ ಕಾಲಕ್ಕೆ ವಿಪ್ರನೊಬ್ಬ ಅನ್ನಾಥರ್ಿಯಾಗಿ ಬರುತ್ತಾನೆ. ಸ್ವಯಂಪಾಕ ಮಾಡಿಕೊಳ್ಳುವ ದೀಕ್ಷೆ ಪಡೆದ ಬ್ರಾಹ್ಮಣನನ್ನು ಉದ್ದೇಶಿಸಿ ಧರ್ಮರಾಯ, ಇಲ್ಲಿ ನೀವೇ ಅಡುಗೆ ಮಾಡಿಕೊಳ್ಳಲು ಸ್ಥಳವಿಲ್ಲ. ಹಾಗಾಗಿ ದ್ರೌಪದಿ ಅಡುಗೆ ಮಾಡುತ್ತಾಳೆ.
ಭೀಮ ಬಡಿಸುತ್ತಾನೆ. ನಾನು ಆಫೋಷನ ಹಾಕುತ್ತೇನೆ. ನೀವು ನಿಸ್ಸಂಕೋಚವಾಗಿ ಊಟ ಮಾಡಬಹುದು ಎಂದು ಧರ್ಮರಾಯ ಬ್ರಾಹ್ಮಣನಲ್ಲಿ ನಿವೇದಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಭಗವಾನ್ ಕೃಷ್ಣ ಅಲ್ಲಿಗೆ ಬರುತ್ತಾನೆ.
ಕೃಷ್ಣ ಹೇಳುತ್ತಾನೆ. ಅನ್ಯಾಯವಾಗಿ ಬ್ರಾಹ್ಮಣನ ವ್ರತ ನಿಯಮ ಮುರಿಯಬೇಡ. ಅವನಿಗೆ ಅಡುಗೆ ಮಾಡಿಕೊಳ್ಳಲು ಸ್ಥಳಾವಕಾಶ ಮಾಡಿಕೊಡು ಎನ್ನುತ್ತಾನೆ. ಕೃಷ್ಣನ ಮಾತಿನಂತೆಯೇ ಬ್ರಾಹ್ಮಣನಿಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಬ್ರಾಹ್ಮಣನ ಜೊತೆ ಉಳಿದವರೂ ಭೋಜನ ಮಾಡುತ್ತಾರೆ. ಬೇರೆಲ್ಲಾ ಎಂಜಲ ಎಲೆಗಳನ್ನು ತೆಗೆದ ಧರ್ಮರಾಯ ಬ್ರಾಹ್ಮಣನ ಎಲೆಯನ್ನು ತೆಗೆಯಲು ಮರೆಯುತ್ತಾನೆ. ಕೃಷ್ಣ ನಸುನಕ್ಕು ಅದೊಂದು ಎಲೆಯನ್ನೇಕೆ ಬಿಟ್ಟೆ ಎಂದು ವ್ಯಂಗ್ಯವಾಡುತ್ತಾನೆ.
ಕೃಷ್ಣನ ಮಾತಿನಂದ ಸಂಕೋಚಕ್ಕೆ ಈಡಾದ ಧರ್ಮರಾಯ ಎಲೆ ತೆಗೆಯಲು ಪ್ರಯತ್ನಿಸಿದಷ್ಚು ಹೊಸ ಎಲೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆ ಕಾಲ ಧನುಮರ್ಾಸವಾಗಿರುತ್ತದೆ. ಹಾಗೆಂದೇ ಧನುಮರ್ಾಸದಲ್ಲಿ ದೇವರಿಗೆ ನಿವೇದನೆ ಮಾಡಿ, ಬ್ರಾಹ್ಮಣರಿಗೆ ದಾನ ಮಾಡುವ ಪದ್ಧತಿ ಜಾರಿಗೆ ಬಂದಿತ್ತೆನ್ನುತ್ತಾರೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಧರ್ಮ ಒಡೆದು ರೂಕ್ಷಗೊಳ್ಳುತ್ತದೆ. ಮುದ್ಗಾನ್ನವು ಧರ್ಮವನ್ನು ಸ್ನಿಗ್ಧಗೊಳಿಸುವ ಗುಣ ಹೊಂದಿದೆ ಮೇಲಾಗಿ ಚಳಿಗಾಲದಲ್ಲಿ ದೇಹದಲ್ಲಿನ ಕೊಬ್ಬಿನಂಶ ಕಡಿಮೆಯಾಗುವ ಕಾರಣ ಹುಗ್ಗಿಯ ಸೇವನೆಯಿಂದ ಸಮತೋಲನ ಕಾಪಾಡಿಕೊಳ್ಳಬಹುದು. ಪಾಂಚರಾತ್ರಾಗಮ ಶಾಸ್ತ್ರದಲ್ಲಿ ಮುದ್ಗಲ ನೇವೇದ್ಯವನ್ನು (ಅಕ್ಕಿ ಮತ್ತು ಹೆಸರುಬೇಳೆ) ಸಮ ಪ್ರಮಾಣದಲ್ಲಿ ಬೇಯಿಸಿ ತಯಾರಿಸಿದರೆ ಉತ್ತಮ ಫಲ ನೀಡುತ್ತದೆ ಎಂದು ಹೇಳಲಾಗಿದೆ. ಇದೀಗ ಡಿ.15ರಿಂದ ಪ್ರಾರಂಭವಾಗಿ ತಿಂಗಳ ಪರ್ಯಂತ ಇರುತ್ತದೆ.
ಕೋದಂಡಸ್ತೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾಷರ್ೀಕೀಪೂಜಾ ದಿನೇನೈಕೇನ ಸಿದ್ಧ್ಯತಿ || ಆಗ್ನಿ ಪುರಾಣ
ಧನುರಾಶಿಯಲ್ಲಿ ಸೂರ್ಯನಿರುವಾಗ ಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮಪರ್ಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆಮಾಡಿದ ಫಲವನ್ನು ಪಡೆಯುವನು ಎನ್ನುವ ಅಗ್ನಿ ಪುರಾಣದ ವಚನವಿದೆ. ಆದುದರಿಂದ ಧನುಮರ್ಾಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆಮುದ್ಗಾನ್ನವನ್ನು (ಹುಗ್ಗಿಯನ್ನು) ವಿಷ್ಣುವಿಗೆ ಸಮಪರ್ಿಸಿ ಸಂತರ್ಪಣೆಮಾಡುವುದರಿಂದ ಶ್ರೀಹರಿಯು ಪ್ರೀತನಾಗುವನು.
ಧನುಮರ್ಾಸಪೂಜೆಯ ಕಾಲ :-
ಮುಖ್ಯಾರುಣೋದಯೇ ಪೂಜಾ ಮಧ್ಯಮಾ ಲುಪ್ತತಾರಕಾ |
ಅಧಮಾ ಸೂರ್ಯಸಹಿತಾ ಮಧ್ಯಾಹ್ನೇ ನಿಷ್ಫಲಾ ಭವೇತ್ ||
ಇಂತಹ ಪೂಜೆಗೆ ಮುಖ್ಯಕಾಲಅರುಣೋದಯ ಕಾಲವು ಉತ್ತಮ, ನಕ್ಷತ್ರಗಳು ಕಾಣದಿರುವಾಗ ಮಾಡುವುದುಮಧ್ಯಮ, ಸೂರ್ಯನು ಉದಯಿಸಿದ ಮೇಲೆ ಮಾಡುವುದು ಅಧಮ.ಮಧ್ಯಾಹ್ನಕಾಲದಲ್ಲಿ ಮಾಡುವುದು ನಿಷ್ಫಲ. ಆದುದರಿಂದ ಈ ಧನುಮರ್ಾಸದಲ್ಲಿ ಭಗವಂತನ ಪೂಜೆಯನ್ನು ಉಷಃಕಾಲದಲ್ಲಿಯೇ ಮಾಡಬೇಕು.
ಹೇಗೆನಿತ್ಯದಲ್ಲಿಯೂ ಭಗವಂತನಿಗೆ ಷೋಡೋಶೋಪಚಾರ ಪೂಜೆಯನ್ನು ಸಲ್ಲಿಸಿ, ಭಗವಂತನಿಗೆನೈವೇದ್ಯಾದಿಗಳನ್ನು ಸಮಪರ್ಿಸುತ್ತೇವೆಯೋ ಹಾಗೆಯೇ ಧನುಮರ್ಾದಲ್ಲಿ ವಿಶೇಷವಾಗಿ ಅರುಣೋದಯಕಾಲದಲ್ಲಿಯೇ ಹುಗ್ಗಿಯನ್ನು ಮಾಡಿ ಭಗವಂತನಿಗೆ ಸಮಪರ್ಿಸಬೇಕು.ಹುಗ್ಗಿಯನ್ನು ಹೇಗೆ ಮಾಡಬೇಕೆಂಬುದನ್ನೂ ಪುರಾಣವೇ ತಿಳಿಸುತ್ತಿದೆ, ಹೀಗೆ -
ಮುದ್ಗಂ ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಯತೇ |
ಮಧ್ಯಮಂ ತಂಡುಲಾದರ್ಧಂ ತದರ್ಧಮಧಮಂ ಭವತ್ ||
ಮುದ್ಗಂದ್ವಿಗುಣಂ ಕೇಚಿತ್ ಪ್ರಶಂಸಂತಿ ಮುನೀಶ್ವರಾಃ |
ಯಥಾ ಬಲಂಪ್ರಕುವರ್ೀತ ನ ಹೀಯೇತ್ತಂಡುಲಾರ್ಧತಃ ||
ಅಂದರೆ - ಅಕ್ಕಿಯಷ್ಟೇ ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸಿ ಮಾಡುವ ಹುಗ್ಗಿಯು ಉತ್ತಮೋತ್ತಮ. ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರುಬೇಳೆಯನ್ನು ಸೇರಿಸಿದರೆ ಮಧ್ಯಮ. ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹಸರುಬೇಳೆಯನ್ನು ಸೇರಿಸಿದರೆ ಅಧಮ, ಅಕ್ಕಿಯ ಎರಡರಷ್ಟು ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸುವುದು ಇನ್ನೂ ಶ್ರೇಷ್ಠ ಎಂದು ಕೆಲವು ಮುನಿಗಳ ಅಭಿಪ್ರಾಯವಿದೆ. ಆದುದರಿಂದ ತನ್ನ ಶಕ್ತಿಯಿರುವಷ್ಟು ಶ್ರೇಷ್ಠ ರೀತಿಯಲ್ಲಿ ಹುಗ್ಗಿಯನ್ನು ತಯಾರಿಸಿ ಪರಮಾತ್ಮನಿಗೆ ನೈವೇದ್ಯವನ್ನು ಮಾಡಬೇಕು. ಎಂತಹ ಪ್ರಸಂಗದಲ್ಲಿಯೂ ಹೆಸರುಬೇಳೆಯ ಪ್ರಮಾಣವನ್ನು ಅಕ್ಕಿಯ ಪ್ರಮಾಣದ ಅರ್ಧಕ್ಕಿಂತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಹೀಗೆ ಪರಮಾತ್ಮನನ್ನು ಪೂಜಿಸಬೇಕು ಎಂದು ಹೇಳುತ್ತಾ ಧನುಮರ್ಾಸದಲ್ಲಿ ಮತ್ತೇನೇನು ಮಾಡಬೇಕು ಎಂದು ಹೇಳುತ್ತಾರೆ. ಹೀಗೆ-
ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೇ ದಿನೇ |
ಉಷಃಕಾಲೇ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ದನಂ ||
ಉಪಚಾರೈಃಷೋಡಶೀಭಿಮರ್ುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀ ದಿನೇ ||
ತಥಾಪ್ರಾತರ್ಧನುಮರ್ಾಸೇ ತ್ಯಕ್ತ್ವಾ ಕಮರ್ಾಣ್ಯರ್ಚಯೇಚ್ಚ ಮಾಂ ||
ಆದುದರಿಂದ ಸರ್ವಪ್ರಯತ್ನದಿಂದ ಧನುಮರ್ಾಸದಲ್ಲಿ ಪ್ರತಿದಿನವೂ ಉಷಃಕಾಲದಲ್ಲಿ ಪರಮಾತ್ಮನನ್ನುಷೋಡಶೋಪಚಾರಗಳಿಂದ ಪೂಜಿಸಿ ಹುಗ್ಗಿಯನ್ನು ಸಮಪರ್ಿಸಬೇಕು ಹೇಗೆ ಸಾಧನಾ ದ್ವಾದಶೀಯಂದು ಪ್ರಯತ್ನಪೂರ್ವಕವಾಗಿ ಜಪ-ತಪಾದಿಗಳನ್ನು ಸಂಕೋಚಗೊಳಿಸಿಪಾರಣೆಯನ್ನು ಮಾಡುತ್ತೇವೆಯೋ ಹಾಗೆಯೇ ಈ ಧನುಮರ್ಾಸದಲ್ಲಿಯೂ ಪ್ರತಿನಿತ್ಯ ಆಚರಿಸಬೇಕು. ಈ ರೀತಿಯಾಗಿ ಪೂಜೆ ಸಲ್ಲಿಸಿರುವುದರಿಂದ ಏನು ಫಲ ಬರುವುದೆಂದು ತಿಳಿಸುತ್ತಿದೆ ಪುರಾಣವು -
ದಧ್ಯಾದ್ರ್ರಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ವಲಂ |
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್ ||
ದೃಷ್ಟ್ವಾ ತಚ್ಛುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲಃ |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಜಗದೀಶ್ವರಃ||
ಮೊಸರು, ಹಸಿಶುಂಠಿ, ಹೆಸರುಬೇಳೆ, ಬೆಲ್ಲ, ಕಂದಮೂಲ ಫಲಗಳಿಂದ ಕೂಡಿದ ಹುಗ್ಗಿಯನ್ನು ಪರಮಾತ್ಮನಿಗೆ ಸಮಪರ್ಿಸಿದರೆ ಭಕ್ತವತ್ಸಲನಾದ ಪರಮಾತ್ಮನು ತನ್ನ ಭಕ್ತರಿಗೆ ಸಕಲವಿಧವಾದ ಭೋಗಗಳನ್ನು, ಕೊನೆಗ ಮೋಕ್ಷವನ್ನೂ ಕೊಡುತ್ತಾನೆ.
ಹೀಗೆಪರಮಾತ್ಮನನ್ನು ಪೂಜಿಸಿದ ನಂತರ ಅವಶ್ಯವಾಗಿ ಶ್ರೀ ಲಕ್ಷ್ಮೀ ಸ್ತೋತ್ರವನ್ನು ಪಠಿಸಬೇಕು -
1) ಆದಿಲಕ್ಷ್ಮೀ
ಸುಮನಸ ವ0ದಿತ ಸು0ದರಿ ಮಾಧವಿ ಚ0ದ್ರ ಸಹೋದರಿ ಹೇಮಮಯೇ|
ಮುನಿಗಣ ಮ0ಡಿತ ಮೋಕ್ಷಪ್ರದಾಯಿನಿ ಮ0ಜುಳ ಭಾಷಿಣಿ ವೇದನುತೇ|
ಪ0ಕಜವಾಸಿನಿ ದೇವಸುಪೂಜಿತೆ ಸದ್ಗುಣವಷರ್ಿಣಿ ಶಾ0ತಿಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾ0||1||
2) ಧಾನ್ಯಲಕ್ಷ್ಮೀ
ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|
ಕ್ಷೀರ ಸಮುದ್ಭವ ಮ0ಗಳರೂಪಿಣಿ ಮ0ತ್ರನಿವಾಸಿನಿ ಮ0ತ್ರನುತೇ|
ಮಗಳದಾಯಿನಿ ಅ0ಬುಜವಾಸಿನಿ ದೇವಗಣಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾ0||2|
3) ಐಶ್ವರ್ಯಲಕ್ಷ್ಮೀ
ಧಿಮಿ ಧಿಮಿ ಧಿ0ಧಿಮಿ ಧಿ0ಧಿಮಿ ಧಿ0ಧಿಮಿ ದು0ದುಭಿನಾದ ಸ0ಪೂರ್ಣಮಯೇ|
ಘಮಘಮ ಘ0ಘಮ ಘ0ಘಮ ಘ0ಘಮ ಶ0ಖನಿನಾದ ಸುವಾದ್ಯನುತೇ|
ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾ0||3||
4) ವಿದ್ಯಾಲಕ್ಷ್ಮೀ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|
ಮಣಿಮಯಭೂಷಿತ ಕರ್ಣವಿಭೂಷಿಣಿ ಶಾ0ತಿ ಸಮಾವೃತೆ ಹಾಸ್ಯಮುಖೇ|
ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾ0||4||
5) ವೀರಲಕ್ಷ್ಮೀ(ಧೈರ್ಯಲಕ್ಷ್ಮೀ)
ಜಯವರವಷರ್ಿಣಿ ವೈಷ್ಣವಿ ಭಾರ್ಗವಿ ಮ0ತ್ರಸ್ವರೂಪಿಣಿ ಮ0ತ್ರಮಯೇ|
ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಜಾನವಿಕಾಸಿನಿ ಶಾಸ್ತ್ರನುತೇ|
ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾ0||5||
6) ವಿಜಯ ಲಕ್ಷ್ಮೀ
ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಜಾನವಿಕಾಸಿನಿ ಗಾನಮಯೇ|
ಅನುದಿನಮಚರ್ಿತ ಕು0ಕುಮನೂಪುರ ಭೂಷಿತವಾಸಿತ ವಾದ್ಯನುತೇ|
ಕನಕಧಾರಾಸ್ತುತಿ ವೈಭವ ವ0ದಿತೆ ಶ0ಕರ ದೇಶಿಕ ಮಾನ್ಯಪದೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾ0||6||
7) ಗಜಲಕ್ಷ್ಮೀ
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ|
ರಥಗಜತುರಗಪಾದಾತಿ ಸಮಾವೃತ ಪರಿಜನ ಮ0ಡಿತ ಲೋಕನುತೇ|
ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾ0||7||
8) ಸ0ತಾನಲಕ್ಷ್ಮೀ
ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವಧರ್ಿನಿ ಜ್ಜಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವಮುನೀಶ್ವರ ಮಾನಸ ವ0ದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸ0ತಾನಲಕ್ಷ್ಮೀ ಸದಾ ಪಾಲಯಮಾ0||8||