HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಸಂಸ್ಕೃತವನ್ನು ಎಲ್ಲೆಡೆ ಪ್ರಚುರಪಡಿಸುವ ಕಾರ್ಯಯೋಜನೆಗಳು ವಿಸ್ತರಿಸಬೇಕು-ಶಿಕ್ಷಕ ವಿಜಯ ಕೆ.
                          ಪಲ್ಲವಂ ಸಂಸ್ಕೃತ ವಿಶೇಷ ತ್ರಿದಿನ ಶಿಬಿರದಲ್ಲಿ ಆಶಯ. 
    ಪೆರ್ಲ: ಸುಮಧುರ ಭಾಷೆಯಾದ ಸಂಸ್ಕೃತವನ್ನು ವ್ಯಾಪಕವಾಗಿ ಪ್ರಚುರಪಡಿಸುವ ಅಗತ್ಯವಿದೆ. ರುದ್ರನ ಡಮರುಗಳ ನಾದದಿಂದ ಪ್ರಭಾವಿತಗೊಂಡು 14 ಸೂತ್ರಗಳ ಮೂಲಕ ವಯ್ಯಾಕರಣಿ ಪಾಣಿನಿ ಮಹಷರ್ಿ ಸಂಸ್ಕೃತಕ್ಕೆ ಒದಗಿಸಿರುವ ಕೊಡುಗೆ ಅತ್ಯದ್ಬುತವಾಗಿದ್ದು, ಆ ಬಗೆಗಿನ ಅರಿವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಯತ್ನಗಳು ವಿಫುಲಗೊಳ್ಳಬೇಕು ಎಂದು ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಸ್ಕೃತ ಶಿಕ್ಷಕ ವಿಜಯ ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
  ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಶೇಣಿ ಶ್ರೀಶಾರದಾಂಬ ಶಾಲೆಯಲ್ಲಿ ಗುರುವಾರ ಸಂಜೆ ಆರಂಭಗೊಂಡ ಮೂರು ದಿನಗಳ ವಿಶೇಷ ಸಂಸ್ಕೃತ ಶಿಬಿರ "ಪಲ್ಲವಂ"  ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ, ಭಾರತೀಯ ಭಾಷೆಗಳ ಮಾತೃ ಸ್ವರೂಪವಾದ ಸಂಸ್ಕೃತ ಭಾಷೆಯ ಸಮಗ್ರ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಇತರ ಎಲ್ಲಾ ಭಾಷೆಗಳ ಅಧ್ಯಯನ, ಅರಿವಿಗೆ ಸುಲಲಿತತೆಯೊದಗಿಸುವ ಸಂಸ್ಕೃತ ವ್ಯಾಕರಣ ಸಹಿತವಾದ ವಿಸ್ತಾರಯುತ ಸಾಹಿತ್ಯ ಸಂಪತ್ತು ಎಲ್ಲೆಡೆ ಎಲ್ಲರಿಗೂ ಲಭ್ಯಗೊಳಿಸುವ ಮತ್ತುಹೆಚ್ಚು ತಿಳುವಳಿಕೆ ಮೂಡಿಸುವಲ್ಲಿ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
   ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಪುಷ್ಪ ಅವರು ಮಾತನಾಡಿ, ಭಾಷೆಗಳ ಅಧ್ಯಯನ ಹೆಚ್ಚು ಪಕ್ವತೆಯೊದಗಿಸುತ್ತದೆ. ವಿದ್ಯಾಭ್ಯಾಸ ಸುಧಾರಣೆಗಳಿಗೆ ಸರಕಾರ ಒದಗಿಸುವ ನೆರವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಸುದೃಢ ಸಮಾಜ ನಿಮರ್ಾಣದಲ್ಲಿ ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.
   ಅಧ್ಯಕ್ಷತೆ ವಹಿಸಿದ್ದ ಶೇಣಿ ಶಾರದಾಂಬ ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ಸೋಮಶೇಖರ ಜೆ.ಎಸ್.ಮಾತನಾಡಿ ಅರಿವಿನ, ವಿಸ್ತಾರತೆಗೆ ಸಾಕಷ್ಟು ಅವಕಾಶಗಳಿರುವ ಸಂಸ್ಕೃತದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ವಿವಿಧ ಮಜಲುಗಳಲ್ಲಿ ಬೆಳವಣಿಗೆಗೆ ಸಾಧ್ಯತೆಗಳಿರುವ ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳು ಮುಂದುವರಿಯುತ್ತರಲಿ ಎಂದು ಹಾರೈಸಿದರು.
  ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂತರ್ಿ, ಶಾರದಾಂಬ ಹಿರಿಯ ಪ್ರಾಥಮಿಕ ಶಾಲಾ ಪ್ರಬಂಧಕಿ ಶಾರದಾ ವೈ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ.ಎಸ್, ಹೈಯರ್ ಸೆಕೆಂಡರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಪೆರ್ದನೆ, ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಎಸ್ ಉಪಸ್ಥಿತರಿದ್ದು ಶುಭಹಾರೈಸಿದರು.
   ಮುಖ್ಯೋಪಾಧ್ಯಾಯ ಗಣಪತಿ ರಮಣ ಪಿ. ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಸಂಸ್ಕೃತ ಅಕಾಡೆಮಿಕ್ ಕೌನ್ಸಿಲ್ನ ಪ್ರಧಾನ ಕಾರ್ಯದಶರ್ಿ ಮಧುಶ್ಯಾಮ ವಿ ವಂದಿಸಿದರು. ಕುಂಬಳೆ ಉಪಜಿಲ್ಲೆಯ ಆಯ್ದ 23 ಶಾಲೆಗಳ 228 ಶಿಬಿರಾಥರ್ಿ ವಿದ್ಯಾಥರ್ಿಗಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದು, ವಿಶೇಷ ಉಪನ್ಯಾಸ, ಅಧ್ಯಯನಗಳ ಸಹಿತ ವಿವಿಧ ಚಟುವಟಿಕೆಗಳು ಶಿಬಿರದಲ್ಲಿ ಆಯೋಜಿಸಲಾಗಿದೆ. ಶನಿವಾರ ಸಂಜೆ ಮೂರು ದಿನಗಳ ಶಿಬಿರ ಸಮಾರೋಪಗೊಳ್ಳಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries