HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಕಾರಾಗೃಹಗಳಿಂದ ಹೊರಬಂದು ಯೋಗ್ಯ ಮಾನವರಾಗಿ ಬದುಕುವುದು ಲಕ್ಷ್ಯವಾಗಿರಲಿ-ಸಚಿವ ಕಡನ್ನಪ್ಪಳ್ಳಿ
  ಕಾಸರಗೊಡು: ಕಾರಾಗೃಹಗಳಲ್ಲಿರುವ ಖೈದಿಗಳು ಉತ್ತಮ ವ್ಯಕ್ತಿತ್ವದ ಮಾನವರಾಗಿ ಹೊರಬರುವುದು ಲಕ್ಷ್ಯವಾಗಿರಲಿ, ಇದು ಯಶಸ್ಸಿಗೆ ಕಾರಣವಾಗಿ ಬದುಕಿಗೆ ಅರ್ಥಪೂರ್ಣತೆ ಒದಗಿಸುತ್ತದೆ ಎಂದು ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಕರೆ ನೀಡಿದರು.
  ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದ ಕಾರಾಗೃಹ ದಿನಾಚರಣೆಯ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.
   ಜೀವನದ ದುರ್ಬಳ ಕ್ಷಣಗಳಲ್ಲಿ ಅಪರಾಧಿಯಾಗಿ ಮಾರ್ಪಡುವ ವ್ಯಕ್ತಿಗಳು ಜೀವನಪೂತರ್ಿ ಶಾಶ್ವತ ಅಪರಾಧ ಎಸಗುವ ಮನೋಸ್ಥಿತಿಯವರಾಗಿರುವುದಿಲ್ಲ. ಖಾಕಿ ಧರಿಸಿರುವ ಅರಕ್ಷಕರ ಮನಸ್ಸು ಹಾಗೂ ಕಾರಾಗೃಹದೊಳಗೆ ಕಳೆಯುವ ಅಪರಾಧಿಗಲ್ಲೂ ಒಂದೇ ಚೈತನ್ಯ ಉದ್ದೀಪನಗೊಮಡಿರುವುದು ಎಂದು ತಿಳಿಸಿದ ಅವರು, ಯಾರೂ ಯಶಸ್ವಿ ವ್ಯಕ್ತಿಗಳಾಗಿ ಜನಿಸುವಾಗಲೇ ಇರುವುದಿಲ್ಲ, ಅವರಿಗೆ ಲಭಿಸುವ ಸಂಸ್ಕಾರ, ಓರಗೆಯ ಮಿತ್ರರೇ ಮೊದಲಾದ ಕಾರಣಗಳಿಂದ ವಿವಿಧ ಮುಖಗಳನ್ನು ಹೊಂದುತ್ತಾರೆ ಎಂದು ತಿಳಿಸಿದರು.
  ಅಪರಾಧಿ ಮನೋವೃತ್ತಿಯನ್ನು ಮೆಟ್ಟನಿಂತು, ಬದಲಾಗುವುದು ಶ್ರೇಷ್ಠ ನಾಗರಿಕನನ್ನಾಗಿ ರೂಪಿಸುತ್ತದೆ ಎಂದವರು ತಿಳಿಸಿದರು. ಮಲೆಯಾಳದ ಶ್ರೇಷ್ಠ ಗಾನ ಸೂರ್ಯ ಕಿರೀಟವನ್ನು ಹಾಡುವ ಮೂಲಕ ಸಚಿವರು ನೆರೆದವರನ್ನು ಬೆರಗುಗೊಳಿಸಿದರು.
   ಕಣ್ಣೂರು ಕಾಪರ್ೋರೇಶನ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಸಿ.ಕೆ.ವಿನೋದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಎಂ.ಶಾಜಿ, ಉತ್ತರ ಮಲಬಾರ್ ಕಾರಾಗೃಹಗಳ ಡಿಐಜಿ ಶ್ಯಾಂ ತಂಗಯ್ಯನ್, ಚಿತ್ರ-ಧಾರಾವಾಹಿ ನಟ ಇಲ್ಲಿಕ್ಕೋಡ್ ನಂಬೂದಿರಿ, ಉತ್ತರ ವಲಯ ಕಾರಾಗೃಹಗಳ ಅಧಿಕಾರಿ ಕೆ.ವಿ.ಮುಖೇಶ್, ಕಣ್ಣೂರು ಕೇಂದ್ರ ಕಾರಾಗೃಹ ಪ್ರಧಾನ ಸೂಪರಿಟೆಂಡೆಂಟ್ ಎಂ.ವಿ.ರವೀಂದ್ರನ್, ಕೆ.ವಿನೋದನ್, ಕೆ.ವಿ.ಸಜೋಶ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
  ಬಳಿಕ ಕಾರಾಗೃಹದ ಅಪರಾಧಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries