ಸಿಹಿ ಹಂಚುವಲ್ಲಿ ಸಂತೃಪ್ತ- ಜೇನು ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಇ.ವಿ.ಭಟ್ ಮಾಸ್ಟರ್
ಬದಿಯಡ್ಕ: ಚಿತ್ರ ಕಲಾವಿದ, ಫೋಟೋಗ್ರಾಫರ್, ನಾಟಕ ನಟ, ನಿದರ್ೇಶಕರ, ಪ್ರಸಾದನ ಕಲಾವಿದ, ಕಾರ್ಯಕ್ರಮ ನಿರೂಪಕ, ಭಾಷಣಗಾರ, ರೇಡಿಯೋ ಕಲಾವಿದ, ಮಾಸ ಪತ್ರಿಕೆಯ ಬರಹಗಾರ ಮೊದಲಾದ ಕ್ಷೇತ್ರಗಳಲ್ಲಿ ತನ್ನೇ ಆದ ಛಾಪನ್ನೊತ್ತಿರುವ ಇ.ವಿ.ಭಟ್ ಚಿತ್ರಾಂಜಲಿ ಜೇನು ನೊಣ ಕೃಷಿಕರಾಗಿ ಸಾಧನೆಯನ್ನು ಮಾಡುತ್ತಿದ್ದಾರೆ.
ಕಾಂಞಂಗಾಡ್ನ ಆನಂದಾಶ್ರಮದ ಸಮೀಪವಿರುವ ಕೋಟಪ್ಪಾರದ `ಚಿತ್ರಾಂಜಲಿ'ಯಲ್ಲಿ ಉದ್ಯೋಗದಿಂದ ವಿಶ್ರಾಂತಿ ಜೀವನ ನಡೆಸುತ್ತಿರುವಂತೆ ಜೇನುಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಸುಮಾರು 35 ವರ್ಷಗಳ ಕಾಲ ಕಾಂಞಂಗಾಡ್ನ ದುಗರ್ಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇ.ವಿ.ಭಟ್ ಮಾಸ್ಟರ್ ಕಳೆದ ವರ್ಷ ಸೇವೆಯಿಂದ ನಿವೃತ್ತಿ ಪಡೆದರು. ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆದರು ಜೇನು ಕೃಷಿಯಲ್ಲಿ ತೊಡಗಿಕೊಂಡು ನಿವೃತ್ತಿಯ ನಂತರವೂ ಸಕ್ರಿಯರಾಗಿದ್ದಾರೆ. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಕಾಸರಗೋಡಿನ ಸಿ.ಪಿ.ಸಿ.ಆರ್.ಐ. ಯಲ್ಲಿ 3 ದಿದಗಳ ವಿಚಾರಸಂಕಿರಣದಲ್ಲಿ ದೊರಕಿದ ಮಾಹಿತಿ ಹಾಗು ಅಲ್ಲಿ ನೆರೆದಿದ್ದ ಜೇನುನೊಣ ಕೃಷಿಕರ ಸಂಪರ್ಕದಿಂದ ಇ.ವಿ.ಭಟ್ ಜೇನು ಕೃಷಿಯಲ್ಲಿ ಆಸಕ್ತಿ ಬೆಳೆದು ಕೃಷಿಯನ್ನು ಆರಂಭಿಸಿದರು. ತನ್ನ ಜ್ಞಾನವನ್ನು ಒಗ್ಗೂಡಿಸಿ ಕನ್ನಡ ಭಾಷೆಯಲ್ಲಿ `ಮಧುವಾಹಿನಿ' ಎಂಬ ಶೀಷರ್ಿಕೆಯಲ್ಲಿ ಕೈಪಿಡಿಯನ್ನು ರಚಿಸಿದ್ದಾರೆ. ಕಣರ್ಾಟಕದ ವಿವಿದ ಭಾಗಗಳಲ್ಲಿ ಜೇನುನೊಣ ಕೃಷಿಕರು ಈ ಪುಸ್ತಕದಿಂದ ಮಾಹಿತಿ ಪಡೆದು ಜೇನು ಕೃಷಿಯಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ಹರ್ಷಚಿತ್ತರಾಗಿ ಹೇಳುತ್ತಾರೆ. ಚಿಕ್ಕಂದಿನಲ್ಲೇ ಜೇನುನೊಣಗಳ ಬಗ್ಗೆ ಆಸಕ್ತಿ ಹೊಂದಿದ್ದ ಮಾಸ್ಟರ್ ತನ್ನ ಮಾವ ಸುಬ್ರಾಯ ಭಟ್ ಅವರಿಂದ ಜೇನುನೊಣಗಳ ಬಾಲಪಾಠಗಳನ್ನು ತಿಳಿದುಕೊಂಡರು. ಬಳಿಕ ಹಲವು ಜೇನುನೊಣ ಕೃಷಿಕರನ್ನು ಸಂಪಕರ್ಿಸಿ ಅವರಿಂದ ಅನುಭವಗಳನ್ನು ಹಂಚಿಕೊಂಡು ಈಗ ಜೇನುನೊಣ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.
ಕೇವಲ ಒಂದು ಪೆಟ್ಟಿಗೆಯಿಂದ ಪ್ರಾರಂಭಿಸಿ ಈಗ 35ರಷ್ಟು ಕಾಲನಿಗಳನ್ನು ಸಂರಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಜೇನಿಗೆ ಬಹಳಷ್ಟು ಬೇಡಿಕೆಯಿದೆ. ದೇಶವಿದೇಶಗಳಲ್ಲೂ ಮಾಸ್ಟರ್ ತಯಾರಿಸುತ್ತಿರುವ `ಚಿತ್ರಾಂಜಲಿ ಹನಿ'ಗೆ ಒಳ್ಳೆ ಬೇಡಿಕೆಯಿದೆ. ಮಾಸ್ಟರ್ ಅವರ ಮಾಕರ್ೆಟಿಂಗ್ ತಂತ್ರ ಆಧುನಿಕ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಯುತ್ತಿದೆ.
ಮಾಸ್ಟರ್ ಅವರ ಪತ್ನಿ ಸರಸ್ವತಿ, ಮಕ್ಕಳು ಚಿತ್ರ ಹಾಗೂ ಅಂಜಲಿ ಅವರನ್ನು ಒಳಗೊಂಡಿರುವ ಸಂತೃಪ್ತ ಕುಟುಂಬ. ಆಸಕ್ತಿ, ಉತ್ಸಾಹ, ತಾಳ್ಮೆ, ಸಮಯವನ್ನು ಕೊಟ್ಟರೆ ಯಾರಿಗೂ ಜೇನು ಕೃಷಿಯನ್ನು ಮಾಡಬಹುದು ಎನ್ನುವ ಇ.ವಿ.ಭಟ್ ಇದೊಂದು ಗುಡಿಕೈಗಾರಿಕೆ ಎನ್ನುವ ಅಭಿಪ್ರಾಯಪಡುತ್ತಾರೆ.
ಜೇನುನೊಣ ಕಾಲನಿಗಳ ಪೆಟ್ಟಿಗೆಗಳು, ಕಾಲನಿಗಳು ಮೊದಲಾದವುಗಳನ್ನು ಮಾಸ್ಟರ್ ನಡೆಸುತ್ತಿದ್ದಾರೆ.
ಜೇನುಕೃಷಿಯೊಂದಿಗೆ ಚಿತ್ರಕಲೆಯಲ್ಲೂ ಕೂಡ ಮಾಸ್ಟರ ಶಿಷ್ಯರನೇಕರು ಹೆಸರುಮಾಡಿದ್ದಾರೆ. ಮಾಸ್ಟರ್ ಆವರು ಚಿತ್ರಾಂಜಲಿ ಸ್ಕೂಲ್ ಓಫ್ ಆಟ್ಸರ್್ ಎಂಬ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.
ದೂರದೂರಿನಿಂದ ಕೂಡ ಬಹಳಷ್ಟು ವಿದ್ಯಾಥರ್ಿಗಳು ಇಲ್ಲಿ ಚಿತ್ರರಚನೆ ಕಲಿಯಲು ಬರುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಹೆಮ್ಮೆ ಕೂಡ ಮಾಸ್ಟರರ ಶಿಷ್ಯರಿಗಿದೆ. ಈ ರಂಗದಲ್ಲಿ ಅನೇಕ ಚಿತ್ರಕಲಾವಿದರನ್ನು ಬೆಳೆಸಿದ್ದಾರೆ. ತಲಶ್ಶೇರಿ ಸ್ಕೂಲ್ ಓಫ್ ಆಟ್ಸರ್್ನಿಂದ ಚಿತ್ರಕಲೆಯಲ್ಲಿ ಪ್ರಾವೀಣ್ಯ ಗಳಿಸಿದ ನಂತರ ಭಟ್ ಮಾಸ್ಟರರು 1981ರಲ್ಲಿ ಚಿತ್ರಕಲಾ ಅಧ್ಯಾಪಕನಾಗಿ ಕಾಂಞಂಗಾಡಿನ ದುಗರ್ಾ ಹೈಯರ್ ಸೆಕಂಡರಿ ಶಾಲೆಯಲ್ಲಿ ತಮ್ಮ ಸೇವೆ ಆರಂಭಿಸಿದರು. 35 ವರ್ಷಗಳ ದೀರ್ಘ ಸೇವೆಯಿಂದ ಸಾಕಷ್ಟು ಚಿತ್ರ ಕಲಾವಿದರನ್ನು ಕೊಡುಗೆಯಾಗಿ ನೀಡಿದ್ದಾರೆ. ಚಿತ್ರಕಲೆಯೊಂದಿಗೆ ಫೋಟೋಗ್ರಾಫಿ ಕೂಡ ಮಾಸ್ಟರ್ ಅವರ ಹವ್ಯಾಸಗಳಲ್ಲೊಂದು. ಫೋಟೋಗ್ರಾಫಿ ಸ್ಪಧರ್ೆಗಳಲ್ಲಿ ಮಾಸ್ಟರ್ ಚಿತ್ರಗಳು ಬಹಳಷ್ಟು ಗಮನ ಸೆಳೆದಿದೆ. ಚಿತ್ರಕಲೆಯಲ್ಲಿರುವ ತಾಂತ್ರಿಕ ನೈಪುಣ್ಯತೆಯಿಂದ ಫೋಟೋಗ್ರಾಫಿಯಲ್ಲೂ ಸಾಕಷ್ಟು ಸಾಧನೆ ಮಾಡಲು ನೆರವಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಇದೀಗ ಜೇನು ಕೃಷಿಯ ಬಗ್ಗೆ ಆಸಕ್ತಿರಿಗೆ ತರಗತಿ ನಡೆಸಿ ಆ ಮೂಲಕ ಜೇನು ಕೃಷಿಯಲ್ಲಿ ತೊಡಗಲು ಪ್ರೋತ್ಸಾಹ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.