HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ದೀಪಿಕಾ ಬಳಿಕ ಸಲ್ಮಾನ್ ಖಾನ್ ಸರದಿ: `ಟೈಗರ್ ಜಿಂದಾ ಹೈ' ಸಿನಿಮಾ ಬಿಡುಗಡೆಗೆ ವಿರೋಧ
    ನಾವು ಎಲ್ಲಾ ಸಿನಿಮಾಗಳನ್ನು ವಿರೋಧಿಸುತ್ತಿಲ್ಲ. ಅದಕ್ಕೆ ಟೈಗರ್ ಜಿಂದಾ ಹೈ ಹೊರತಲ್ಲ. ಆದರೆ, ಪ್ರದರ್ಶನದ ಎಲ್ಲಾ ಅವಧಿಗಳನ್ನು  ಒಂದೇ ಒಂದು ಸಿನಿಮಾಕ್ಕಾಗಿ ಏಕೆ ಮೀಸಲಿರಿಸಬೇಕು. ಉಳಿದ ಸಿನಿಮಾ ಪ್ರದರ್ಶನಕ್ಕೆ ಅವಕಾಶವಿಲ್ಲದಂತೆ ಏಕೆ ಮಾಡಬೇಕು ಎಂಬುದಷ್ಟೇ ನಮ್ಮ ಪ್ರಶ್ನೆ ಎಂದು ಎಮ್ಎನ್ಸಿಎಸ್ ಅಧ್ಯಕ್ಷ ಅಮೇ ಖೋಪ್ಕರ್ ಹೇಳಿದ್ದಾರೆ.
   ಮುಂಬೈ: ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಟೈಗರ್ ಜಿಂದಾ ಹೈ ಬಿಡುಗಡೆಗೆ (ಡಿಸೆಂಬರ್ 22)ದಿನಾಂಕ ನಿಗದಿಯಾಗಿದೆ. ಆದರೆ, ಇನ್ನೆರಡು ದಿನ ಬಾಕಿ ಇರುವಾಗಲೇ ಚಿತ್ರ ಬಿಡುಗಡೆಗೆ ಅಡ್ಡಿಪಡಿಸುವುದಾಗಿ ಮಹಾರಾಷ್ಟ್ರ ನವನಿಮರ್ಾಣ ಚಿತ್ರಪಟ ಸೇನೆ(ಎಮ್ಎನ್ಸಿಎಸ್) ಎಚ್ಚರಿಕೆ ನೀಡಿದೆ.
  `...ಜಿಂದಾ ಹೈ' ಸಿನಿಮಾಕ್ಕೆ ಥಿಯೇಟರ್ ಬಿಟ್ಟುಕೊಡುವ ಸಲುವಾಗಿ ಎರಡು ಮರಾಠಿ ಸಿನಿಮಾಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಚಿತ್ರ ನಿಮರ್ಾಪಕರಿಗೆ ಬೆದರಿಕೆ ಹಾಕಲಾಗಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ಶೀವಸೇನಾ ಪಕ್ಷಗಳು ಬೆಂಬಲ ನೀಡುವುದಾಗಿ ತಿಳಿಸಿವೆ.
  ಸುದ್ದಿಗಾರರೊಂದಿಗೆ ಮಾತನಾಡಿದ ಎಮ್ಎನ್ಸಿಎಸ್ ಅಧ್ಯಕ್ಷ ಅಮೇ ಖೋಪ್ಕರ್ ಅವರು, ಮರಾಠಿಯ ದೆವಾ ಹಾಗೂ ಗಚ್ಚಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಈಗಾಗಲೇ ನಿಗದಿಯಾಗಿರುವ ಸಮಯದಲ್ಲೇ ಪ್ರದರ್ಶನವಾಗಬೇಕು ಎಂದು ಆಗ್ರಹಿಸಿದ್ದಾರೆ.
  `ನಾವು ಎಲ್ಲಾ ಸಿನಿಮಾಗಳನ್ನು ವಿರೋಧಿಸುತ್ತಿಲ್ಲ. ಅದಕ್ಕೆ ಟೈಗರ್ ಜಿಂದಾ ಹೈ ಹೊರತಲ್ಲ. ಆದರೆ, ಪ್ರದರ್ಶನದ ಎಲ್ಲಾ ಅವಧಿಗಳನ್ನು  ಒಂದೇ ಒಂದು ಸಿನಿಮಾಕ್ಕಾಗಿ ಏಕೆ ಮೀಸಲಿರಿಸಬೇಕು. ಉಳಿದ ಸಿನಿಮಾ ಪ್ರದರ್ಶನಕ್ಕೆ ಅವಕಾಶವಿಲ್ಲದಂತೆ ಏಕೆ ಮಾಡಬೇಕು ಎಂಬುದಷ್ಟೇ ನಮ್ಮ ಪ್ರಶ್ನೆ' ಎಂದು ಖೋಪ್ಕರ್ ಹೇಳಿದ್ದಾರೆ.
  ಎಮ್ಎನ್ಸಿಎಸ್ ಪ್ರಕಾರ ರಾಜ್ಯದಲ್ಲಿರುವ ಎಲ್ಲಾ ಚಿತ್ರಮಂದಿರಗಳ ಶೇ. 95 ಪ್ರದರ್ಶನ ಅವಧಿಗಳು ಟೈಗರ್ ಜಿಂದಾ ಹೈಗಾಗಿ ಬುಕ್ ಆಗಿವೆ.  ಶುಕ್ರವಾರ ಈ ಚಿತ್ರ ತೆರೆ ಕಾಣಲಿದ್ದು, ಉಳಿದ ಚಿತ್ರಗಳಿಗೆ ಮುಂಜಾನೆ ಅಥವಾ ತಡರಾತ್ರಿಯಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
  ಹಲವು ತಿಂಗಳುಗಳ ನಂತರ ಹಾಗೂ ವಷರ್ಾಂತ್ಯದಲ್ಲಿ ಬಿಡುಗಡೆಯಾಗುತ್ತಿರುವ ಬಹುಕೋಟಿ ವೆಚ್ಚದ ಸಿನಿಮಾ ಇದಾಗಿರುವುದರಿಂದ ಚಿತ್ರಮಂದಿರಗಳ ಮಾಲೀಕರೂ ಇಕ್ಕಟ್ಟಿಗೆ ಸಿಲುಕಿದ್ದಾರೆ.
   ಇತ್ತೀಚೆಗೆ ದೀಪಿಕಾ ಪಡುಕೋಣೆ ಅಭಿನಯದ ಹಾಗೂ ಸಂಜಯ್ಲೀಲಾ ಬನ್ಸಾಲಿ ನಿದರ್ೇಶನದ ಪದ್ಮಾವತಿ ಸಿನಿಮಾಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಪದ್ಮಾವತಿ ತಂಡ ಬಿಡುಗಡೆ ದಿನಾಂಕವನ್ನು 2018ಕ್ಕೆ ಮುಂದೂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries