HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಧ್ವಜ ನಾಶಗೈದುದಕ್ಕೆ ಪ್ರತೀಕಾರವಾಗಿ ಬಹಿರಂಗವಾಗಿ ಇನ್ನೊಂದು ವಿಭಾಗದಿಂದ ಧ್ವಜ ನಾಶ: ಹಲವು ಮಂದಿವಿರುದ್ದ ಕೇಸು:                          ಸ್ಥಳದಲ್ಲಿ ಸಂಘಷರ್ಾವಸ್ಥೆ

   ಮಂಜೇಶ್ವರ:  ಸಮಾಜ ದ್ರೋಹಿಗಳು ತಡ ರಾತ್ರಿಯಲ್ಲಿ ಧ್ವಜವನ್ನು ನಾಶಗೈದುದರ ಪ್ರತೀಕಾರವಾಗಿ ಬಹಿರಂಗವಾಗಿ ಇನ್ನೊಂದು ವಿಭಾಗ ಹಾಡು ಹಗಲೇ ಧ್ವಜವನ್ನು ಪೆಟ್ರೋಲ್ ಹಾಕಿ ಬೆಂಕಿ ಇಟ್ಟು ನಾಶಗೈದಿದೆ. ಸ್ಥಳದಲ್ಲಿ ಸಂಘಷರ್ಾವಸ್ಥೆ ಇರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
   ಬುಧವಾರ ಬೆಳಿಗ್ಗೆ ಕುಂಜತ್ತೂರು ಜಂಕ್ಷನಿನಲ್ಲಿ ಘಟನೆ ನಡೆದಿದೆ. ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಉತ್ಸವದ ಭಾಗವಾಗಿ ಕುಂಜತ್ತೂರಿನಲ್ಲಿ ಸ್ಥಾಪಿಸಲಾಗಿದ್ದ ಧ್ವಜವನ್ನು ಹೊತ್ತಿಸಿ ನಾಶಗೈಯಲಾಗಿತ್ತು. ಇದರಿಂದ ಆಕ್ರೋಶಿತಗೊಂಡು ಮಹಾಲಿಂಗೇಶ್ವರದಿಂದ ಆಗಮಿಸಿದ ಸುಮಾರು 20 ಮಂದಿಯ ತಂಡ ಬೈಕುಗಳಲ್ಲಿ ಆಗಮಿಸಿ ಕುಂಜತ್ತೂರು ಜಂಕ್ಷನಿನಲ್ಲಿ ಈದ್ ಮಿಲಾದ್ ಗೆ ಸಂಬಂಧಿಸಿ  ಸ್ಥಾಪಿಸಲಾಗಿದ್ದ ಧ್ವಜ ಸ್ತಂಭವನ್ನು ಹಾಗೂ ಧ್ವಜವನ್ನು ಬಹಿರಂಗವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಶಗೈದಿದ್ದಾರೆ.
  ಈ ಸಂದರ್ಭ ಅಲ್ಲಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರೆಂಬ ಆರೋಪ ಕೂಡಾ ಕೇಳಿ ಬಂದಿದೆ. ಧ್ವಜಕ್ಕೆ ಬೆಂಕಿ ಹಚ್ಚುವುದು ಪೊಲೀಸರು ಇದನ್ನು ನೋಡುತ್ತಿರುವ ದೃಶ್ಯಗಳ ವೀಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
  ಧ್ವಜಕ್ಕೆ ಬೆಂಕಿ ಹಚ್ಚಿದ ಬಳಿಕ ತಂಡ ಸಾರ್ವಜನಿಕ ಸ್ಥಳದಲ್ಲಿ ಅಟ್ಟಹಾಸ ಮಾಡುತ್ತಿರುವಾಗ ಪೊಲೀಸರು ಇವರನ್ನು ಸೆರೆ ಹಿಡಿಯಲು ಮುಂದಾಗದೇ ಇರುವುದು ವಿವಾದವಾಗುತ್ತಿದೆ.
  ಕುಂಜತ್ತೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಕಂಡರೆ ಪತ್ತೆ ಹಚ್ಚಬಹುದಾದಂತಹ ಒಂದು ತಂಡದ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.ಸ್ಥಳದಲ್ಲಿ ಸಂಘಷರ್ಾವಸ್ಥೆ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಕುಂಜತ್ತೂರು ಪೊಲೀಸರ ಕಣ್ಣೆದುರಿನಲ್ಲಿಯೇ ಸಂಘಿಗಳ ಗೂಂಡಾಯಿಸಂ: ಕೋಮು ಗಲಭೆ ಸೃಷ್ಟಿಸಲು ಯತ್ನವೆಂಬುದಾಗಿ ಯೂತ್ ಲೀಗ್ ಆರೋಪ
   ಕುಂಜತ್ತೂರಿನಲ್ಲಿ ಪೊಲೀಸರ ಕಣ್ಣೆದುರಿನಲ್ಲೇ ಸಂಘಪರಿವಾರ ಕಾರ್ಯಕರ್ತರಾದ ಆರು ಮಂದಿ ಬುಧವಾರದಂದು ಬೆಳಿಗ್ಗೆ ಹಾಡು ಹಗಲೇ ಸಿದ್ದೀಖ್ ಮಸೀದಿ ಸಮೀಪದಲ್ಲಿ ನೆಬಿ ದಿನದ ಭಾಗವಾಗಿ ಸ್ಥಾಪಿಸಲಾಗಿದ್ದ ಧ್ವಜ ಸ್ತಂಭಗಳನ್ನು ಪುಡಿಗೈದು ಪೆಟ್ರೋಲ್ ಹಾಕಿ ಹೊತ್ತಿಸಿ ನಾಡಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನ ನಡೆಸಿರುವುದಾಗಿ ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದ್ದಾರೆ
  ಬೈಕ್ ಹಾಗೂ ಓಮ್ನಿ ವ್ಯಾನಿನಲ್ಲಿ ಮಾರಕಾಯುಧಗಳಿಂದ ಆಗಮಿಸಿದ ಸಂಘಿಗಳನ್ನು ನೋಡಿ ಪೊಲೀಸರು ಹೆದರಿ ಹಿಂಜರಿದಿರಬೇಕು. ಇಂತಹ ಕೆಲವು ಸನ್ನಿವೇಷಗಳು ಸಂಘಿ ಗೂಂಡಾಗಳಿಗೆ ವರದಾನವಾಗುತ್ತಿದೆ. ಸಂಘಪರಿವಾರ ವ್ಯಾಪಕವಾಗಿ ಗಲಭೆಯನ್ನು ಸೃಷ್ಟಿಸಲು ಸಂಚು ನಡೆಸುತ್ತಿದೆ. ಇದನ್ನು ತಡೆಯಲು ಪೊಲೀಸರು ಮುಂದಾಗಬೇಕೆಂಬುದಾಗಿ ಯೂತ್ ಲೀಗ್ ಆಗ್ರಹಿಸಿದೆ.
  ರಾತ್ರಿ ತೆರೆಮರೆಯಲ್ಲಿ ಸ್ವಂತ ಖಾದಿ ಧ್ವಜವನ್ನು ಹೊತ್ತಿಸಿ ಮುಸಲ್ಮಾನರ ಮೇಲೆ ಆರೋಪವನ್ನು ಹೊರಿಸಿ  ಹಗಲು ಹೊತ್ತಿನಲ್ಲಿ ಗಲಭೆಯನ್ನು ನಡೆಸಿ  ಸಂಘಿ ಪಡೆ ಭೀಕರತೆಯನ್ನು  ಸೃಷ್ಟಿಸುತ್ತಿದೆ. ಇದನ್ನು ಕಂಡೂ ಕಾಣದಂತೆ ನಟಿಸುತ್ತಿರುವ ಪೊಲೀಸರು ಇನ್ನು ಮುಂದಕ್ಕಾದರೂ ನಿಜ ಸ್ಥಿತಿಯನ್ನು ಅರಿತು. ತಪ್ಪಿಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂಬುದಾಗಿ ಯೂತ್ ಲೀಗ್ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಸೈಫುಲ್ಲ ತಂಘಲ್ ಹಾಗೂ ಕಾರ್ಯದಶರ್ಿ ಗೋಲ್ಡನ್ ರಹ್ಮಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries