HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಕನ್ನಡಿಗರನ್ನು ಮತ್ತೆ ಅವಮಾನಿಸುವ ಹುನ್ನಾರ-ನಿರಂತರ ನಡೆಯುತ್ತಲೇ ಇದೆ ದ್ರೋಹ
             ಮಂಜೇಶ್ವರದಲ್ಲಿ ಹೊಸ "ಮಲೆಕನ್ನಡ" ಭಾಷೆಯ ಅವಿಷ್ಕಾರ!
    ಮಂಜೇಶ್ವರ: ಗಡಿನಾಡು ಕಾಸರಗೊಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ತಾಳ್ಮೆ ಪರೀಕ್ಷಿಸಲೋ ಎಂಬಂತೆ ಕನ್ನಡ ಮೇಲಿನ ಗಧಾಪ್ರಹಾರ ನಿರಂತರವಾಗಿ ಮುಂದುವರಿಯುತ್ತಿದ್ದು, ಇದೀಗ ಕನರ್ಾಟತಕ್ಕೆ ತಾಗಿಕೊಂಡಿರುವ ಉತ್ತರದ ತುತ್ತತುದಿ ಮಂಜೇಶ್ವರ ಬ್ಲಾಕ್ ಪಂಚಾಯತು ಪ್ರಕಟಿಸಿರುವ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಅತ್ತ ಕನ್ನಡವೂ-ಇತ್ತ ಮಲೆಯಾಳವೂ ಅಲ್ಲದೆ ಮಲೆ ಕನ್ನಡ ಎಂಬ ಹೊಸ ರೂಪಾಂತರದೊಂದಿಗೆ(?) ಕನ್ನಡಿಗರ ಭಾವನೆಗಳನ್ನು ಮತ್ತೆ ಕೆರಳಿಸಿದೆ.
   ಮಂಜೇಶ್ವರ ಬ್ಲಾಕ್ ಪಂಚಾಯತು ಡಿ. 23 ರಂದು ವಿಶೇಷ ಚೇತನರಿಗಾಗಿ ಆಯೋಜಿಸಿರುವ ಆಮಂತ್ರಣ ಪತ್ರಿಕೆ ಬಹುತೇಕ ಕನ್ನಡವೂ-ಮಲೆಯಾಳವೂ ಅಲ್ಲದ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಮೂಲ ಮಲೆಯಾಳ ಪ್ರತಿಯನ್ನು ವ್ಯಾಪಕ ಪ್ರಮಾಣದಲ್ಲಿ ಕನ್ನಡಿಗರಿಗೆ ಅವಮಾನವಾಗುವಂತೆ ಮುದ್ರಿಸಲಾಗಿರುವ ಈ ಆಹ್ವಾನ ಪತ್ರಿಕೆಯನ್ನು ಓದಿದಲ್ಲಿ ವಿಷಯಗಳು ಏನೆಂಬುದೇ ಅರ್ಥವಾಗದ ಸ್ಥಿತಿ ಇದೆ.
   ಸಾಂತ್ವನ ಸ್ಪರ್ಶ 2017 ಎಂಬ ಈ ಕಾರ್ಯಕ್ರಮವನ್ನು ಸಾಂದ್ವಣ ಸ್ಪರ್ಶ 2017 ಎಂದು ಮುದ್ರಿಸಲಾಗಿದೆ. ಉಳಿದಂತೆ ಆರಂಭದಿಂದಲೇ ಕಾತ್ಯಾಕ್ಕೆ(ಕಾರ್ಯಕ್ಕೆ), ಆವಾಶ್ಯವಾಗಿರುವ(ಆವಶ್ಯವಾಗಿರುವ), ಮಳಗಿದ್ದಲ್ಲೇ(ಮಲಗಿದಲ್ಲೇ), ಕಾಳದಲ್ಲಿ(ಕಾಲದಲ್ಲಿ), ತೆಗೆಯಿಳಿಕೆ(ತೆಗೆಯಲಿಕೆ), ಹೋಡಿ ನಡೆದು(ಓಡಿ ನಡೆದು), ಅಶೃದ್ದೆಯಲ್ಲಿ(ಅಶ್ರದ್ದೆಯಲ್ಲಿ), ಬಳ ಇಲ್ಲದೆ(ಬಲವಿಲ್ಲದೆ) ಎಂಬ ರೀತಿಯಲ್ಲಿ ಮುದ್ರಿಸಲಾಗಿದೆ. ಭಾಷಾಂತರಿಸುವಾಗ ಬಳಸಬೇಕಾದ ವ್ಯಾಕರಣ ರೂಪವಾಗಲಿ, ಅರ್ಥವಾಗುವ ರೀತಿಯ ವಿಷಯ ಮಂಡನೆಯಾಗಲಿ ಇಲ್ಲದೆ ಕನ್ನಡಿಗರನ್ನು ಅವಮಾನಿಸುವ ಪ್ರಯತ್ನವಾಗಿ ಈ ಪ್ರಕಟನಾ ಪತ್ರ ಮುದ್ರಿಸಲಾಗಿದೆ. ಇದರ ಜೊತೆಗೆ ಶಾಸಕರ ಹೆಸರಿನ ಮೊದಲಿಗೆ ಕನ್ನಡದಲ್ಲಿ "ಸನ್ಮಾನ್ಯ" ಎಂಬ ವಿಶೇಷಣದ ಬದಲಿಗೆ ಮಲೆಯಾಳದಲ್ಲಿ ಬಳಸುವ "ಬಹುಮಾನಪಟ್ಟ" ಎಂಬ ವಾಚಿಕವನ್ನು ಈ ಪತ್ರಿಕೆಯಲ್ಲಿ "ಬಹು:" ಎಂದು ಬರೆದಿರುವುದು ಭಾಷಾಂತರಕಾರನ ಜ್ಞಾನ ಸಂಪತ್ತಿನ ಮಾನದಂಡವಾಗಿ ಪರಿಗಣಿಸಬಹುದಾಗಿದೆ.
   ಕನ್ನಡ ಉದ್ಯೋಗಿಗಳಿಲ್ಲ!
   ಅತ್ಯಂತ ಹೆಚ್ಚು ಕನ್ನಡಿಗರಿರುವ ಮಂಜೇಶ್ವರ ಬ್ಲಾಕ್ ಪಂಚಾಯತು ವ್ಯಾಪ್ತಿಯ ಕನ್ನಡ ಭಾಷೆ, ಸಂಸ್ಕೃತಿಯ ಸಂವರ್ಧನೆಗೆ ಬೊಗಳೆ ಬಿಡುವ ಜನನಾಯಕರು, ಅಧಿಕಾರಿಗಳು ಅದನ್ನು ಜಾರಿಗೊಳಿಸುವಲ್ಲಿ ದಿವ್ಯ ನಿರ್ಲಕ್ಷ್ಯಗೊಳಿಸುವುದು ದಶಕಗಳಿಂದ ಮುಂದುವರಿದಿದೆ.  ಗಡಿನಾಡಿನ ಸರಕಾರಿ ಕಚೇರಿಗಳಿಗೆ ಕನ್ನಡಿಗ ಉದ್ಯೋಗಾಥರ್ಿಗಳನ್ನೇ ನೇಮಕಗೊಳಿಸಬೇಕೆಂಬ ಅದೇಶಗಳಿದ್ದರೂ ಅದು ಪಾಲನೆಯಾಗದೆ ಮಲೆಯಾಳಿ ಉದ್ಯೋಗಿಗಳ ಕಪಟತನಗಳಿಂದ ಇಂತಹ ಅವಾಂತರಗಳು ನಡೆಯುತ್ತಲೇ ಇವೆ. ಮಂಜೇಶ್ವರ ಬ್ಲಾಕ್ ಪಂಚಾಯತಿಯ ಹೆಸರಿಗೆ ಮಾತ್ರ ಕನ್ನಡ ಬಲ್ಲ ನೌಕರರಿಂದ ಇಂತಹ ಪಿತೂರಿಗಳು ಎಸೆಯಲ್ಪಡುತ್ತದೆ.
   ಜಡ ಭರತ ಕನ್ನಡಿಗರು:
   ಇಷ್ಟೆಲ್ಲ ಭಾಷಾ ಸವಾರಿಗಳು ನಿತ್ಯವೆಂಬಂತೆ ಆಗುತ್ತಿದ್ದರೂ ಈ ಬಗ್ಗೆ ಗಟ್ಟಿ ಧ್ವನಿಯೆತ್ತುವ ಕನ್ನಡಿಗರು ಇಲ್ಲದಿರುವುದೂ ದುರಂತವಾಗಿದೆ. ಗ್ರಾ.ಪಂ., ಬ್ಲಾಕ್ ಪಂಚಾಯತುಗಳಲ್ಲಿ ಕನ್ನಡ ಬಲ್ಲವರಿದ್ದರೂ ಅವರ್ಯಾರೂ ಈ ಬಗ್ಗೆ ನಿದರ್ೇಶನ ನೀಡುವುದಾಗಲಿ, ತಾವೇ ಮುತುವಜರ್ಿ ವಹಿಸಿ ಕನ್ನಡಕ್ಕಾಗಿ ಏನಾದರೂ ಮಾಡುವ ಮನೋಭಾವನೆಯನ್ನಾಗಲಿ ವಹಿಸದಿರುವುದು ಆಕ್ರೋಶಗಳಿಗೆ ಕಾರಣವಾಗುತ್ತಿದೆ. ಜೊತೆಗೆ ಇರುವ ಕನ್ನಡಿಗರಿಗೆ ಭಾಷಾ ಶುದ್ದತೆಯ ಬಗ್ಗೆ ಅರಿವಿನ ಕೊರತೆಯೂ ಇಲ್ಲದಿಲ್ಲ.
    ಏನಂತಾರೆ:
    ಜನಪ್ರತಿನಿಧಿಗಳಿಗೆ ಇರುವ ಇತರ ಆಡಳಿತಾತ್ಮಕ ಜರೂರಿನ ಮಧ್ಯೆ ಕರಪತ್ರಗಳಂತಹ ವಿಷಯಗಳಲ್ಲಿ ಖುದ್ದು ಇದ್ದು ಮಾಡಿಸುವಲ್ಲಿ ಸಮಯಾವಕಾಶಗಳ ಕೊರತೆ ಇದೆ. ಇದೀಗ ಮುದ್ರಿಸಿ ಕನ್ನಡದ ಕೊಲೆ ಮಾಡಿರುವ ವಿಷಯದ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು. ಜೊತೆಗೆ ತಪ್ಪನ್ನು ಸರಿಪಡಿಸಿ ಶುಕ್ರವಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
                  ಎ.ಕೆ.ಎಂ. ಅಶ್ರಫ್
                ಅಧ್ಯಕ್ಷರು, ಮಂಜೇಶ್ವರ ಬ್ಲಾಕ್ ಪಂಚಾಯತು. ಮಂಜೇಶ್ವರ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries