HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ತಾಯಿ ಮಗಳಿಗೆ ಆಸರೆಯಾದ ಉದ್ಯಮಿ
    ಬದಿಯಡ್ಕ: ಬದಿಯಡ್ಕ ಗ್ರಾಮ ಕಚೇರಿಯ ವಠಾರದಲ್ಲಿ ಮೂರು ರಾತ್ರಿ ಕಳೆದ ತಾಯಿ ಹಾಗೂ ಮಗಳಿಗೆ ಕೊನೆಗೂ ಮನೆಯನ್ನು ನಿಮರ್ಿಸಿಕೊಡುವ ಮೂಲಕ ಆಸರೆಯಾದವರು ಕೊಲ್ಲಂನ ಅಸೀಸಿಯ ಮೆಡಿಕಲ್ ಸಂಸ್ಥೆಗಳ ಚೇರ್ಮ್ಯಾನ್ ಹಾಗೂ ಉದ್ಯಮಿ ಎಂ.ಅಬ್ದುಲ್ ಅಸೀಸ್ ಮಾನವೀಯತೆಗೆ ಸಾಕ್ಷಿಯಾದರು.
   ಕೆಲಸ ಮಾಡಿಕೊಂಡಿದ್ದ ಮನೆಯಿಂದ ಹೊರನಡೆಯಬೇಕಾಗಿ ಬಂದು ಬೇಳ ಗ್ರಾಮ ಕಚೇರಿಯ ವಠಾರದಲ್ಲಿ 3 ದಿನಗಳ ಕಾಲ ತಂಗಿದ್ದ ನೀಚರ್ಾಲು ನಿವಾಸಿ ಸರಸ್ವತಿ ಹಾಗೂ 18 ವರ್ಷ ಪ್ರಾಯದ ಪುತ್ರಿ ಶೃತಿ ಮನೆಯಿಲ್ಲದೆ ವಾಸಕ್ಕೆ ಕಷ್ಟ ಪಡುತ್ತಿದ್ದರು. 15 ವರ್ಷಗಳ ಹಿಂದೆ ತನ್ನ ಗಂಡನಿಂದ ಉಪೇಕ್ಷಿಸಲ್ಪಟ್ಟು ಬೇರೆ ಬೇರೆ ಮನೆಗಳಲ್ಲಿ ಕೆಲಸಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ಕೆಲವು ಸಮಯಗಳಿಂದ ಶಾರೀರಿಕವಾಗಿ ಕೆಲಸ ಮಾಡಲು ಅಸಾಧ್ಯವಾದುದರಿಂದ ಪರವನಡ್ಕ ಮಹಿಳಾ ಮಂದಿರವನ್ನು ಆಶ್ರಯಿಸಬೇಕಾಗಿ ಬಂತು. ಮಾನಸಿಕವಾಗಿ ಅಲ್ಲಿ ಹೊಂದಿಕೊಳ್ಳಲಾಗದೇ ತಾಯಿ ಮತ್ತು ಮಗಳು ಅಲ್ಲಿಂದ ಹೊರನಡೆದರು. ಕಾಸರಗೋಡು ಚೌಕಿಯಲ್ಲಿರುವ ಒಂದು ಮನೆಯಲ್ಲಿ ಕೆಲಸಮಾಡಿಕೊಂಡಿದ್ದು ಅಲ್ಲಿಂದಲೂ ಬಿಟ್ಟು ಬಂದು ಬೇಳ ಗ್ರಾಮ ಕಚೇರಿ ವಠಾರದಲ್ಲಿ ಆಶ್ರಯವನ್ನು ಪಡೆದರು. ಪರಿಶಿಷ್ಟ ಜಾತಿ ಅಭಿವೃದ್ದಿ ವಿಭಾಗದಿಂದ ಬೇಳ ಗ್ರಾಮ ವ್ಯಾಪ್ತಿಯಲ್ಲಿ ಇವರು ಒಂಭತ್ತು ಸೆಂಟ್ಸ್ ಸ್ಥಳವನ್ನು ಪಡೆದುಕೊಂಡಿದ್ದರು.
   ಮಾಧ್ಯಮಗಳ ಮೂಲಕ ಇವರ ಕಷ್ಟವನ್ನರಿತು ಉದ್ಯಮಿ ಎಂ. ಅಬ್ದುಲ್ ಅಸೀಸ್ ಇವರಿಗೆ ನೆರವಾಗಲು ಧಾವಿಸಿಬಂದರು. ಕೊಲ್ಲಂನ ಅಸೀಸಿಯಾ ಮೆಡಿಕಲ್ ಕಾಲೇಜು ವತಿಯಿಂದ ನಿಮರ್ಾಣಗೊಳ್ಳುತ್ತಿರುವ ಅಂದಾಜು 9 ಲಕ್ಷ ರೂ ವೆಚ್ಚದ ಮನೆ ನಿಮರ್ಾಣಕ್ಕೆ ಬುಧವಾರ ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಬೀರ್ ಖಾನ್ ಅಸೀಸಿಯಾ, ನಿವೃತ್ತ ತಹಶೀಲ್ದಾರ್ ಶೇಖರ, ಗ್ರಾಮ ಪಂಚಾಯತು ಸದಸ್ಯ ಸಿರಾಜ್ ಮುಹಮ್ಮದ್ ಮೊದಲಾದವರು ಪಾಲ್ಗೊಂಡಿದ್ದರು. ಜಿಲ್ಲಾ ಆಡಳಿತದಿಂದ ಎಲ್ಲಾ ಸಹಾಯವನ್ನು ನೀಡಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಭರವಸೆ ನೀಡಿರುತ್ತಾರೆ.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries