ರಾಜ್ಯಸಭೆಯಲ್ಲಿ ಸಚಿನ್ ಭಾಷಣಕ್ಕೆ ವಿಪಕ್ಷಗಳ ಅಡ್ಡಿ: ಜಯಾ ಬಚ್ಚನ್ ಅಸಮಾಧಾನ
ನವದೆಹಲಿ: ರಾಜ್ಯ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳ ನಡುವೆ ರಾಜ್ಯಸಭಾ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗೆ ಮಾತನಾಡಲು ಅವಕಾಶ ಮಾಡಿಕೊಡದಿರುವುದಕ್ಕೆ ಸಂಸದೆ ಜಯಾ ಬಚ್ಚನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಭಾರತಕ್ಕೆ ವಿಶ್ವ ಮಟ್ಟದಲ್ಲಿ ಹೆಸರು ತಂದುಕೊಟ್ಟವರು. ಆದರೂ ಕೂಡ ರಾಜ್ಯಸಭೆಯಲ್ಲಿ ಅವರಿಗೆ ಮಾತನಾಡಲು ಬಿಡದೆ ಗದ್ದಲ, ಕೋಲಾಹಲ ಮುಂದುವರಿಸಿದ್ದು ನಾಚಿಕೆಗೇಡಿನ ವಿಚಾರ. ರಾಜಕೀಯ ವ್ಯಕ್ತಿಗಳಿಗೆ ಮಾತ್ರ ಸದನದಲ್ಲಿ ಮಾತನಾಡಲು ಅವಕಾಶವಿದೆಯೇ ಎಂದು ಸಮಾಜವಾದಿ ಸಂಸದೆಯಾಗಿರುವ ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಇತ್ತೀಚೆಗೆ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸುತ್ತಿದ್ದಾರೆ.
ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಸಲ ಸಚಿನ್ ತೆಂಡೂಲ್ಕರ್ ಸದನದಲ್ಲಿ ಮಾತನಾಡಲು ಪ್ರಯತ್ನಿಸಿದ್ದು ಕೂಡ. ಆಡಲು ಇರುವ ಹಕ್ಕಿನ ಬಗ್ಗೆ ಅವರು ಇಂದು ರಾಜ್ಯಸಭೆಯಲ್ಲಿ ಮಾತನಾಡಲು ಎದ್ದು ನಿಂತರು. ಆದರೆ ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲಗಳಿಂದಾಗಿ ಸಚಿನ್ ತೆಂಡೂಲ್ಕರ್ ಗೆ ಮಾತನಾಡಲು ಸಾಧ್ಯವಾಗಲೇ ಇಲ್ಲ. ಸಭಾಪತಿಗಳಾದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸದನವನ್ನು ಮುಂದೂಡಿದರು.
ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗವರ್ಾಲ್, ಸದನದಲ್ಲಿ ಸೆಲೆಬ್ರಿಟಿ ಸದಸ್ಯರಾದ ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ನಟಿ ರೇಖಾ ಅವರು ನಿರಂತರವಾಗಿ ಗೈರುಹಾಜರಾಗುವುದನ್ನು ಪ್ರಶ್ನಿಸಿದ್ದರು.
ಸದನ ಕಲಾಪದಲ್ಲಿ ಅವರಿಗೆ ಆಸಕ್ತಿಯಿಲ್ಲವೆಂದಾದರೆ ಅವರನ್ನು ಅನರ್ಹಗೊಳಿಸಿ ಎಂದು ಕೂಡ ನರೇಶ್ ಅಗವರ್ಾಲ್ ಒತ್ತಾಯಿಸಿದ್ದರು. ರಾಜ್ಯಸಭೆಯ 12 ನಾಮಾಂಕಿತ ಸದಸ್ಯರಲ್ಲಿ ಅತಿ ಕಡಿಮೆ ಸಲ ಹಾಜರಾದವರು ಮತ್ತು ಸಕ್ರಿಯವಾಗಿ ಭಾಗವಹಿಸಿದವರಲ್ಲಿ ಕೊನೆಯ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರೇಖಾ ಇದ್ದಾರೆ.