ಭಾರತ- ಚೀನಾ ಮಧ್ಯೆ ಶುಕ್ರವಾರ ಉನ್ನತ ಮಟ್ಟದ ಗಡಿ ಮಾತುಕತೆ
ಭಾರತ-?ಚೀನಾ ಗಡಿ ವಿಷಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಮಾತುಕತೆ ಶುಕ್ರವಾರ ನಿಗದಿಯಾಗಿದೆ. ಕಳೆದ ಜೂನ್ನಲ್ಲಿ ಉಭಯ ದೇಶಗಳ ನಡುವೆ 73 ದಿನ ಉಂಟಾಗಿದ್ದ ದೋಕಲಾ ಗಡಿ ಬಿಕ್ಕಟ್ಟಿನ ಬಳಿಕ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ.
ನವದೆಹಲಿ: ಭಾರತ-ಚೀನಾ ಗಡಿ ವಿಷಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಮಾತುಕತೆ ಶುಕ್ರವಾರ ನಿಗದಿಯಾಗಿದೆ.
ಕಳೆದ ಜೂನ್ನಲ್ಲಿ ಉಭಯ ದೇಶಗಳ ನಡುವೆ 73 ದಿನ ಉಂಟಾಗಿದ್ದ ದೋಕಲಾ ಗಡಿ ಬಿಕ್ಕಟ್ಟಿನ ಬಳಿಕ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಗಡಿ ವಿಷಯ ಕುರಿತ ಭಾರತದ ವಿಶೇಷ ಪ್ರತಿನಿಧಿ ಅಜಿತ್ ಡೊಭಾಲ್ ಅವರ ಆಹ್ವಾನದ ಮೇರೆಗೆ ಚೀನಾದ ಸ್ಟೇಟ್ ಕೌನ್ಸಿಲರ್ ಹಾಗೂ ವಿಶೇಷ ಪ್ರತಿನಿಧಿ ಯಾಂಗ್ ಜಿಯೆಚಿ ಅವರು ಶುಕ್ರವಾರ ಭಾರತದಲ್ಲಿ ನಡೆಯುವ ವಿಶೇಷ ಪ್ರತಿನಿಧಿ ಮಟ್ಟದ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಹು ಚುನ್ಯಿಂಗ್ ಅವರು, ಇದು ಉನ್ನತ ಮಟ್ಟದ ಮಾತುಕತೆಯಷ್ಟೇ ಆಗಿರದೆ, ಉಭಯ ದೇಶಗಳ ಕಾರ್ಯತಂತ್ರ ಸಂವಹನಕ್ಕೆ ವೇದಿಕೆಯಾಗಲಿದೆ ಎಂದು ಹೇಳಿದ್ದಾರೆ.