HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ವ್ಯರ್ಥವಾದ ಮಾನವೀಯ ಯತ್ನ-ಕಣ್ತೆರೆಯದ ಬಾಲಕಿ-ಕೊನೆಗೂ ವಿಧಿಯಾಟಕ್ಕೆ ಬಲಿ
  ಉಪ್ಪಳ: ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿ ರೋಗ ನಿರ್ಣಯದಲ್ಲಾದ ಅವಾಂತರದಿಂದ ದೇಹಾರಾಗ್ಯದಲ್ಲಿ ಏರುಪೆರಾಗಿ ಬಳಿಕ ಉನ್ನತ ಚಿಕಿತ್ಸೆಗೆ ಎನರ್ಾಕುಳಂ ನ ಲೇಕ್ಶೋರ್ ಆಸ್ಪತ್ರೆಗೆ ದಾಖಲಾಗಿದ್ದ ಉಪ್ಪಳ ಮಣಿಮುಂಡದ ವಿದ್ಯಾಥರ್ಿನಿ ಬುಧವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ವಿಧಿಯಾಟಕ್ಕೆ ಬಲಿಯಾದಳು.
   ಉಪ್ಪಳ ಮಣಿಮುಂಡ ನಿವಾಸಿ ಜುಲ್ಫಿಕರ್-ಮೈಮೂನಾ ದಂಪತಿಗಳ ಪುತ್ರಿ ಆಫಿಯತ್ ನುಸ್ರ(20) ಹರಸಾಹಸಗಳ ಬಳಿಕವೂ ಚೇತರಿಸದೆ ಮೃತಳಾದ ವಿದ್ಯಾಥರ್ಿನಿ.
   ಕಳೆದ ಶನಿವಾರ ಅನಾರೋಗ್ಯದ ಕಾರಣ ಮೊದಲು ಉಪ್ಪಳ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೂ  ದಾಖಲಿಸಲಾಗಿತ್ತು. ಆದರೆ ಮಂಗಳೂರಿನ ಖಾಸಗೀ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕಾರಣ ಯಾವ ಅನಾರೋಗ್ಯವೆಂದು ನಿಖರಗೊಳ್ಳುವ ಮೊದಲೇ ನೀಡಲಾದ ಔಷಧಿಯ ಪರಿಣಾಮ ತೀವ್ರಗೊಂಡ ಅನಾರೋಗ್ಯದ ಕಾರಣ ಬಳಿಕ ಶನಿವಾರ ರಾತ್ರಿ ಎನರ್ಾಕುಳಂ ನ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವಿರುವ ಲೇಕ್ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರ ನಿಗಾ ಘಟಕದಲ್ಲಿ ಶೋಚನೀಯಾವಸ್ಥೆಯಲ್ಲಿದ್ದ ಆಕೆಯ ಅನಾರೋಗ್ಯ ಪತ್ತೆಮಾಡಿದ ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆಗೆ ನಿಶ್ಚಯಿಸಿದ್ದರು. ಆದರೆ ಈ ಮಧ್ಯೆ ಮಂಗಳವಾರ ತೀವ್ರ ಕುಸಿತ ಕಂಡ ರಕ್ತದೋತ್ತಡದಿಂದ ಬಳಿಕ ಆಕೆ ಹೊರಬರಲಾರದಿದ್ದುದರಿಂದ ಮತ್ತಿನ ಯಾವ ಚಿಕಿತ್ಸೆಗೂ ಸ್ಪಂಧಿಸದೆ ಬುಧವಾರ ಮಧ್ಯಾಹ್ನ ಮೃತಳಾದಳು.
   ನೆರವಿನ ಮಹಾಪೂರ ಹರಿದಿತ್ತು:
   ಶನಿವಾರ ಸಂಜೆ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ವೈದ್ಯರು ಕೈಚೆಲ್ಲಿದಾಗ ಹಲವರ ಒತ್ತಾಸೆಯಂತೆ ಎನರ್ಾಕುಳಂ ಲೇಕ್ಶೋರ್ ಆಸ್ಪತ್ರೆಗೆ ಕರೆದೊಯ್ಯಲು ತೀಮರ್ಾನಿಸಲಾಯಿತು. ಆದರೆ ಅದು ಕೇವಲ 7 ಗಂಟೆಗಳೊಳಗೆ ತುತರ್ು ಆಗಬೇಕಿರುವ ಚಿಕಿತ್ಸೆಯಾದ್ದರಿಂದ ಚೈಲ್ಡ್ಲೈನ್ ಸಹಿತ ವಿವಿಧ ಸಂಘಟನೆಗಳ ನೆರವಿನ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಆಂಬಅಂದು  ಕೇವಲ 6 ಗಮಟೆಗಳೊಳಗೆ ಆಸ್ಪತ್ರೆಗೆ ತಲಪಿ ಹೊಸ ದಾಖಲೆ ಮೆರೆದಿತ್ತು. ಪೋಲೀಸರು, ವಿವಿಧ ಸಂಘಸಂಸ್ಥೆಗಳು ಚೈಲ್ಡ್ ಲೈನ್ ನೊಂದಿಗೆ ಕೈಜೋಡಿಸಿತ್ತು.
   ಆದರೆ ಯಾವ ಪ್ರಯತ್ನಗಳಿಗೂ ವಿಧಿ ಕಣ್ತೆರೆಯದ ತನ್ನ ನ್ಯಾಯವನ್ನು ಜಾರಿಗೊಳಿಸಿರುವುದು ತೀವ್ರ ಶೋಕಕ್ಕೆ ಕಾರಣವಾಗಿದೆ.
   ಮೃತಳು ತಂದೆ, ತಾಯಿ, ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾಳೆ. ಮೃತದೇಹವನ್ನು ಊರಿಗೆ ತರುವ ಯತ್ನಗಳು ಸಾಗುತ್ತಿವೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries