HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮಿಜೊರಾಂ: ಈಶಾನ್ಯ ರಾಜ್ಯದಲ್ಲಿನ ಮೂರನೇ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಮೋದಿ
   1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಕರ್ಾರವು ಈ ಯೋಜನೆಯನ್ನು ಘೋಷಿಸಿತ್ತು. ಇದು ಮಿಜೊರಾಂನಲ್ಲಿ ಆರಂಭವಾದ ಕೇಂದ್ರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯು ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿನ ನಮ್ಮ ಬದ್ಧತೆಯ ಪ್ರತಿಫಲನವಾಗಿದೆ ಎಂದು ಮೋದಿ ಹೇಳಿದರು.
  ಐಜ್ವಾಲಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಿಜೊರಾಂನಲ್ಲಿ ತುಯಿರಿಯಾಲ್ ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, `ಸಿಕ್ಕಿಂ, ತ್ರಿಪುರ ರಾಜ್ಯಗಳ ಬಳಿಕ ಇದೀಗ ಮಿಜೋರಾಂ ಜಲವಿದ್ಯುತ್ ಯೋಜನೆಯನ್ನು ಹೊಂದಿದ ಈಶಾನ್ಯದ ಮೂರನೇ ಹೆಚ್ಚುವರಿ ರಾಜ್ಯವಾಯಿತು' ಎಂದು ಹೇಳಿದರು.
  ಈಶಾನ್ಯ ರಾಜ್ಯಗಳಲ್ಲಿ ಕೇಂದ್ರದ ಯೋಜನೆಗಳು ಆವೇಗ ಪಡೆದುಕೊಳ್ಳುತ್ತಿದ್ದು, ಈ ಭಾಗದ ಅಭಿವೃದ್ಧಿಗಾಗಿ ತಮ್ಮ ಸಕರ್ಾರ ಬದ್ಧವಾಗಿದೆ ಎಂದರು.
  `ಈ ದಿನ ನಾವು ಮಿಜೋರಾಂನಲ್ಲಿ 60 ಮೆಗಾವ್ಯಾಟ್ ಸಾಮಥ್ರ್ಯದ ಐತಿಹಾಸಿಕ ತುಯಿರಿಯಾಲ್ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಯೋಜನೆಯ ಮೂಲಕ ಪ್ರತಿವರ್ಷ 251 ದಶಲಕ್ಷ ಯೂನಿಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಇದರಿಂದ ರಾಜ್ಯದ ಆಥರ್ಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ' ಎಂದು ಅವರು ಅಭಿಪ್ರಾಯಪಟ್ಟರು.
  1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಕರ್ಾರವು ಈ ಯೋಜನೆಯನ್ನು ಘೋಷಿಸಿತ್ತು. ಇದು ಮೀಜೋರಾಂನಲ್ಲಿ ಆರಂಭವಾದ ಕೇಂದ್ರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯು ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿನ ನಮ್ಮ ಬದ್ಧತೆಯ ಪ್ರತಿಫಲನವಾಗಿದೆ ಎಂದೂ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries