ಮಾ.23ರಂದು ಗೋವಿಂದ ಪೈ ಜನ್ಮದಿನಾಚರಣೆ
ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜನ್ಮ ದಿನಾಚರಣೆಯು ಮಾ.23ರಂದು ಮಂಜೇಶ್ವರದ ಗಿಳಿವಿಂಡು ಸಭಾಂಗಣದಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ಅಪರಾಹ್ನ 3 ಗಂಟೆಗೆ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ನಿವೃತ್ತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ ಅಧ್ಯಕ್ಷತೆ ವಹಿಸುವರು. ಬಿ.ವಿ.ಕಕ್ಕಿಲ್ಲಾಯ, ಡಾ.ಕೆ.ಕಮಲಾಕ್ಷ , ಡಾ.ರಮಾನಂದ ಬನಾರಿ, ಎಂ.ಜೆ.ಕಿಣಿ, ಡಿ.ಎಂ.ಕುಲಾಲ್, ಸುಪ್ರಿಯಾ ಶೆಣೈ, ಡಾ.ಸುನಿಲ್ ಜೋನ್, ಸುಭಾಶ್ಚಂದ್ರ ಕಣ್ವತೀರ್ಥ ಮೊದಲಾದವರು ಶುಭಹಾರೈಸುವರು.
ಕಾರ್ಯಕ್ರಮದ ಅಂಗವಾಗಿ ಡೊಳ್ಳುಕುಣಿತ, ವೀರಗಾಸೆ, ಜಾದೂ ನೃತ್ಯ, ಹುಲಿ ಕುಣಿತ ಸಹಿತ ಮಕ್ಕಳಿಂದ ಮನೋರಂಜನಾ ವೈವಿಧ್ಯ ನಡೆಯಲಿದೆ.