ಕಾಸರಗೋಡಿಗೆ ತುಳು ಡಿಪ್ಲೊಮಾ ಕೋಸರ್್ !
ಕಾಸರಗೋಡು: ಒಂದೆಡೆ ಗಡಿನಾಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ವಿಶೇಷಾಧಿಕಾರವನ್ನು ಕಸಿದು ರಾಜ್ಯ ಸರಕಾರವು ಕಡ್ಡಾಯ ಮಲೆಯಾಳ ಹೇರಿಕೆಯ ಯತ್ನದ ನಡುವೆ ಕೇರಳದ ಪ್ರಥಮ ತುಳು ಡಿಪ್ಲೊಮಾ ಕೋಸರ್್ ಈ ಶೈಕ್ಷಣಿಕ ವರ್ಷದಿಂದ ಕಾಸರಗೋಡಿನಲ್ಲಿ ಆರಂಭಿಸುವ ಸೂಚನೆ ಲಭಿಸಿದೆ.
ಮಂಗಳೂರು ವಿವಿಯ ಬಳಿಕ ಹೊರ ರಾಜ್ಯವೊಂದು ತುಳು ಭಾಷೆಗೆ ಮಾನ್ಯತೆ ನೀಡಿ ಡಿಪ್ಲೊಮಾ ಅಧ್ಯಯನಕ್ಕೆ ಅವಕಾಶ ನೀಡಿರುವುದು ಅಚ್ಚರಿಯಾಗಿದ್ದು, ತುಳುವಿನ ಬೆಳವಣಿಗೆಗೆ ಬಲ ನೀಡಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ನ್ಯಾಯ ಒದಗಿಸಲು ಕಾಸರಗೋಡು-ದಕ್ಷಿಣ ಕನ್ನಡವನ್ನೊಳಗೊಂಡ ತುಳುನಾಡು ಎಂಬ ನೂತನ ರಾಜ್ಯವನ್ನು ರಚಿಸಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿರುವಾಗ ತುಳು ಡಿಪ್ಲೊಮಾ ಕೋಸರ್್ ಆರಂಭಿಸಿರುವುದು ತುಳುನಾಡಿಗರಿಗೆ ಭರವಸೆಯ ಹೊಸ ಕನಸಿಗೆ ಕಾರಣವಾಗಿದೆ.
ಅಕಾಡೆಮಿಯ ನಿವರ್ೀಯತೆ:
ಏಳು ವರ್ಷಗಳ ಹಿಂದೆ ಅಂದು ಅಧಿಕಾರದಲ್ಲಿದ್ದ ಅಚ್ಯುತ್ತಾನಂದನ್ ನೇತೃತ್ವದ ಎಡರಂಗ ಮಂಜೇಶ್ವರ ಕೇಂದ್ರೀಕರಿಸಿ ಕೇರಳ ತುಳು ಅಕಾಡೆಮಿ ಆರಂಭಿಸಿತ್ತು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ ಎಡರಂಗ ಸೋಲುಂಡು, ಅಧಿಕಾರ ಹಿಡಿದಿದ್ದ ಯುಡಿಎಫ್ ಸರಕಾರ ತುಳು ಅಕಾಡೆಮಿಯನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಆ ಬಳಿಕ ಮತ್ತೆ ಕಳೆದ ಎರಡು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಎಡರಂಗ ತುಳು ಅಕಾಡೆಮಿಯನ್ನು ಮೇಲೆತ್ತಲು ಪ್ರಯತ್ನಿಸದಿರುವುದರ ಮಧ್ಯೆ ಇದೀಗ ತುಳು ಡಿಪ್ಲೋಮಾ ತರಗತಿಗೆ ಮುಂದಡಿಯಿಡುತ್ತಿರುವುದು ಆಶ್ಚರ್ಯ ಮೂಡಿಸಿದೆ. ಆದರೆ ವಿವಿ ಮಟ್ಟದಲ್ಲಿ ಅಕಾಡೆಮಿಕ್ ಆಗಿ, ರಾಜಕಾರಣಿಗಳ ಸೋಂಕಿಲ್ಲದೆ ಕಾಲೇಜು ಚಟುವಟಿಕೆಗಳು ನಡೆಯುತ್ತಿರುವುದರಿಂದ ಉದ್ದೇಶಿತ ಡಿಪ್ಲೊಮ ತರಗತಿ ಯಶಸ್ವಿಯಾಗಿ ಮುನ್ನಡೆಯುವ ಸಾಧ್ಯತೆಯಿದೆ