ಬಡ ಮಕ್ಕಳಿಗೆ ಸಹಾಯಕವಾದ "ಸಾಹಿತ್ಯದಿಂದ ಶಿಕ್ಷಣ" ಕಾರ್ಯಕ್ರಮ
ಬದಿಯಡ್ಕ: ಯಾವುದಾದರೂ ಸಹಾಯಾರ್ಥವಾಗಿ ಯಕ್ಷಗಾನ,ನಾಟಕದಂತಹ ಮನೋರಂಜನಾ ಕಾರ್ಯಕ್ರಮಗಳನ್ನೊ,ಕ್ರೀಡಾ ಪಂದ್ಯಾಟಗಳನ್ನೊ ಆಯೋಜಿಸುವುದು ಸವರ್ೆ ಸಾಮಾನ್ಯ. ಆದರೆ ಬಡ ವಿದ್ಯಾಥರ್ಿಗಳ ಶಿಕ್ಷಣದ ಸಹಾಯರ್ಥವಾಗಿ ಕವಿಗೋಷ್ಠಿಯೊಂದನ್ನು ಏರ್ಪಡಿಸಿ ಸಾಹಿತ್ಯಸಕ್ತರಿಂದ ಸಂಗ್ರಹವಾದ ಹಣವನ್ನು ಪದವಿ ಶಿಕ್ಷಣ ಸೇರುವ ಮಕ್ಕಳಿಗೆ ಹಂಚುವ ಮೂಲಕ ಇಲ್ಲೊಂದು ಸಮಾನಸಕ್ತರ ಸಾಹಿತ್ಯ ಸಂಘಟನೆಯೊಂದು ಮಾದರಿಯಾಗಿದೆ.
ಕಾಸರಗೋಡಿನ ವಿಶ್ವಕರ್ಮ ಸಾಹಿತ್ಯ ದರ್ಶನ ಎಂಬ ಸಂಘಟನೆಯು ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ "ಸಾಹಿತ್ಯದಿಂದ ಶಿಕ್ಷಣ" ಎಂಬ ಧ್ಯೇಯ ವಾಕ್ಯದಲ್ಲಿ ಬದಿಯಡ್ಕದ ರಾಮ್ ಲೀಲಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ನೆರೆದ ಸಾಹಿತ್ಯಾಸಕ್ತರಲ್ಲಿ ಸಹಾಯ ಧನ ಸಂಗ್ರಹಿಸಿ "ಶಿಕ್ಷಣ ದರ್ಶನ" ಎಂಬ ಯೋಜನೆಯನ್ನು ಕೈಗೊಂಡಿತ್ತು.
ಕಾರ್ಯಕ್ರಮದಲ್ಲಿ ವಿವಿಧೆಡೆಗಳಿಂದ ಆಗಮಿಸಿದ 20ರಷ್ಟು ಕವಿ,ಕವಯತ್ರಿಯರು ತಮ್ಮ ಸ್ವರಚಿತ ಕವನ ವಾಚಿಸಿದರು.ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಾಹಿತ್ಯಾಸಕ್ತರು ತಮ್ಮ ಕೈಲಾದ ಧನ ಸಹಾಯವನ್ನು ಶಿಕ್ಷಣ ನಿಧಿಯ ಹುಂಡಿಗೆ ಸಮಪರ್ಿಸಿದರು. ಜ್ಯೋತಿಷ್ಯರಾದ ಜನಾರ್ಧನ ಆಚಾರ್ಯ ಮವ್ವಾರು ಶಿಕ್ಷಣ ದರ್ಶನ ಯೋಜನೆಗೆ ಚಾಲನೆ ನೀಡಿದರು.
ಕಿರಣ ಆಚಾರ್ಯ ಮಧೂರು ಪ್ರಾರ್ಥನೆಗೈದರು.ಚಿತ್ರಕಲಾ ಆಚಾರ್ಯ "ಶಿಕ್ಷಣ ದರ್ಶನ" ಯೋಜನೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.ದೇವರಾಜ ಆಚಾರ್ಯ ಕೆ.ಎಸ್, ಜಯ ಮಣಿಯಂಪಾರೆ,ಮೌನೇಶ್ ಆಚಾರ್ಯ ಕಡಂಬಾರು,ಆಶೋಕ್ ಆಚಾರ್ಯ ಉದ್ಯಾವರ,ಮನೋಜ್ ಅಟ್ಟೆಗೋಳಿ,ಲತಾ ಆಚಾರ್ಯ ಬನಾರಿ ಮೊದಲಾದವರು ಉಪಸ್ಥಿತರಿದ್ದರು.
ಕವಿಗೋಷ್ಠಿಯ ಕೊನೆಯಲ್ಲಿ ಸಂಗ್ರಹವಾದ ಮೊತ್ತವನ್ನು ವಿಶ್ವಕರ್ಮ ಸಮಾಜದಿಂದ ಆಯ್ದ ಬಡ ಪ್ರತಿಭಾವಂತ ಮಕ್ಕಳಾದ ಅಡೂರಿನ ಮಮತಾ ಡಿ.ಆರ್, ಶ್ರೀಜ, ವೈಷ್ಣವಿ ಶೇಣಿ, ಅಮೃತಾಕ್ಷಿ ಮಾಯಿಪ್ಪಾಡಿ ಅವರಿಗೆ ಬ್ರಹ್ಮಶ್ರೀ ತಂತ್ರಿವರ್ಯ ಪುರೋಹಿತರತ್ನ ಕೇಶವ ಆಚಾರ್ಯ ಉಳಿಯತ್ತಡ್ಕ ವಿತರಿಸಿದರು. ಮಂಜುನಾಥ ಮಾಸ್ತರ್ ಪುತ್ತಿಗೆ ಸ್ವಾಗತಿಸಿ, ಜಯಲಕ್ಷ್ಮಿ ಕೂಡ್ಲು ವಂದಿಸಿದರು.