HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಯಕ್ಷಗಾನದಂತಹ ಕಲೆಗಳಿಂದ ಸಂಸ್ಕೃತಿಗೆ ನೆಲೆ-ಬೆಲೆ-ಕುಂಟಾರು ರವೀಶ ತಂತ್ರಿ
                    ಯಕ್ಷದಶಾಹ ಸಮಾರೋಪಭಾಷಣ
   ಬದಿಯಡ್ಕ: ಸಂಸ್ಕೃತಿ, ಆಚಾರವಿಚಾರಗಳಿಗೆ ಸಂಬಂಧಿಸಿ ತೀವ್ರ ಧಕ್ಕೆ ಬರುವ ಇಂದಿನ ಕಾಲಘಟ್ಟದಲ್ಲಿ ಪರಂಪರೆಯ ಸಂವರ್ಧನೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಯಕ್ಷಗಾನೋಪಾಸನೆಯ ಮೂಲಕ ನಿರ್ವಹಿಸುತ್ತಿರುವ ಶ್ರೀಕ್ಷೇತ್ರ ಕೊಲ್ಲಂಗಾನದ ಪ್ರಯತ್ನ ಸ್ತುತ್ಯರ್ಹವಾದುದು. ಯಕ್ಷಗಾನ ಸಹಿತ ಭಾರತೀಯ ಮಣ್ಣಿನ ಸತ್ವದಲ್ಲಿ ಹುಟ್ಟಿಬಂದ ಕಲೆಗಳಿಗೆ ವ್ಯಕ್ತಿ, ವ್ಯಕ್ತಿತ್ವ, ಸಮಾಜ ಮತ್ತು ರಾಷ್ಟ್ರ ನಿಮರ್ಾಣದ ಶಕ್ತಿಹೊಂದಿದೆ ಎಂದು ಹಿರಿಯ ಧಾಮರ್ಿಕ, ರಾಜಕೀಯ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.
   ಕೊಲ್ಲಂಗಾನದಶ್ರೀನಿಲಯ ಶ್ರೀದುಗರ್ಾಪರಮೇಶ್ವರಿ ಸನ್ನಿಧಿಯಲ್ಲಿ ವಾಷರ್ಿಕ ನವರಾತ್ರಿ ಮಹೋತ್ಸವದ ಅಂಗವಾಗಿ ಕೊಲ್ಲಂಗಾನದ ಶ್ರೀಸುಬ್ರಹ್ಮಣ್ಯ ಕಲಾಸಂಘವು ತನ್ನ 30ನೇ ವಾಷರ್ಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಯಕ್ಷ ದಶ ವೈಭವದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
   ರಾಷ್ಟ್ರದ ಪರಮೋಚ್ಚ ನ್ಯಾಯಾಲಯದ ತೀಪರ್ಿನ ಮರೆಯಲ್ಲಿ ಶ್ರೀಶಬರಿಮಲೆ ಧರ್ಮಶಾಸ್ತಾ ಸನ್ನಿಧಿಗೆ ಪರಂಪರೆಯ ಆಚಾರ-ಅನುಷ್ಠಾನವನ್ನು ಹೊಸಕಿಹಾಕುವ ಯತ್ನಗಳನ್ನು  ರಾಜ್ಯ ಸರಕಾರವು ಸಮರೋಪಾದಿಯಲ್ಲಿ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೆ ಶ್ರೀಕ್ಷೇತ್ರದ ತಂತ್ರಿವರ್ಯರು ಗರ್ಭಗೃಹಕ್ಕೆ ಬೀಗಜಡಿದು ತೆರಳುವ ಸೂಚನೆ ನೀಡಿರುವದನ್ನೇ ಗುಲ್ಲಾಗಿಸಲು ರಾಜ್ಯ ಸರಕಾರ ಯತ್ನಿಸುತ್ತಿದೆ. ಆದರೆ ತಂತ್ರಿವರ್ಯರು ನೀಡಿರುವ ಅತ್ಯಂತ ಜವಾಬ್ದಾರಿಯುತ ಹೇಳಿಕೆಯು ಎಲ್ಲಾ ಧಮರ್ಾಭಿಮಾನಿಗಳ ಅಭಿಮಾನಕ್ಕೆ ಕಾರಣವಾಗಿ, ಸಂಸ್ಕೃತಿ ಸಂವರ್ಧನೆಯಲ್ಲಿ ಬಲ ನೀಡಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ನಂಬಿಕೆ, ಅನುಷ್ಠಾನಗಳ ಹಿಂದೆ ಬದುಕಿನ ಸಾಫಲ್ಯತೆಯ ಗುಡಾರ್ಥಗಳು ಅಡಗಿವೆ ಎಂಬುದನ್ನು ಸರಕಾರ ಸಹಿತ ಪ್ರಗತಿಪರರೆಂದು ಹಣೆಪಟ್ಟಿ ಕಟ್ಟಿಕೊಂಡವರು ಗ್ರಹಿಸಬೇಕು. ಯಕ್ಷಗಾನದಂತಹ ಶಾಸ್ತ್ರೀಯ, ಜಾನಪದ ಕಲೆಗಳಿರುವುದರಿಂದ ಜನಸಾಮಾನ್ಯರು ನೆಲೆ ಕಂಡುಕೊಂಡಿದ್ದಾರೆ. ನಂಬಿಕೆಗಳನ್ನು ಹಿಸುಕುವ ಯತ್ನಗಳು ಭಾರೀ ಅವಗಡಗಳಿಗೆ ನಾಂದಿಯಾಗುವುದೆಂದು ಅವರು ತಿಳಿಸಿದರು.
   ಯಕ್ಷಗಾನವನ್ನು ಕೇವಲ ಮನೋಲ್ಲಾಸದ ಕಲೆ ಮಾತ್ರಲ್ಲದೆ ಉಪಾಸನೆಯಾಗಿ ಅಳವಡಿಸಿ ಸಮಾಜದ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀಕ್ಷೇತ್ರ ಕೊಲ್ಲಂಗಾನ ನವೋತ್ಥಾನದ ಮುಕುಟದ ದ್ಯೋತಕ ಎಂದು ಅವರು ತಿಳಿಸಿದರು.
   ಉದ್ಯಮಿ ವೇಣುಗೋಪಾಲ ತತ್ವಮಸಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶ್ರೀಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ, ಕಲೋಪಾಸಕನಾಗುವುದು ಪುಣ್ಯದ ಕೆಲಸವಾಗಿದ್ದು, ತನ್ನ ಜೊತೆಗೆ ಸಮಾಜಕ್ಕೂ ನೆಮ್ಮದಿ ನೀಡುತ್ತದೆ. ಋಣಾತ್ಮಕತೆಯನ್ನು ಮೆಟ್ಟಿನಿಂತು ಧನಾತ್ಮಕತೆಯೆಡೆಗೆ ಸಾಗುವ ಶಕ್ತಿ ಸಂವೇದನೆ ಯಕ್ಷಗಾನ ಕಲೆಗಿದೆ ಎಂದು ತಿಳಿಸಿ, ಶ್ರೀಸುಬ್ರಹ್ಮಣ್ಯ ಕಲಾಸಂಘವು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
   ನ್ಯಾಯವಾದಿ ಸದಾನಂದ ರೈ, ಕೃಷ್ಣಪ್ರಸಾದ್ ಕೋಟೆಕಣಿ, ಧಾಮರ್ಿಕ ಮುಂದಾಳು ಜಗದೀಶ್ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮುಳಿಯಾರು ಶ್ರೀಸುಬ್ರಹ್ಮಣ್ಯ ಕ್ಷೇತ್ರದಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಉಪಸ್ಥಿತರಿದ್ದು ಶುಭಾಶಂಸನೆಗೈದರು.
   ಸಮಾರಂಭದಲ್ಲಿ ಪಣಂಬೂರು ಕುಳಾಯಿಯ ಯಕ್ಷನಂದನ ಬಳಗದ ಸಂಚಾಲಕ ನ್ಯಾಯವಾದಿ ಸಂತೋಷ್ ಐತಾಳ್, ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್, ಮದ್ದಳೆವಾದಕ ಅಪ್ಪಯ್ಯ ಮಣಿಯಾಣಿ ಮಲ್ಲ, ಗೋಪಾಲ ಸುವರ್ಣ ಬಜಪೆ, ಪ್ರಸಾಧನ ಕಲಾವಿದ ಶ್ರೀಧರ ಮಣಿಯಾಣಿ ಅಗಲ್ಪಾಡಿ ಅವರುಗಳಿಗೆ ಪ್ರಸಕ್ತ ಸಾಲಿನ ಪಟ್ಟಾಜೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಂತ ಪ್ರಜ್ವಲ್ ಉಪಾಧ್ಯಾಯ ಸ್ವಾಗತಿಸಿ, ಧೀಕ್ಷಾ ಕೊಲ್ಲಂಗಾನ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದಕ್ಷಿಣೋತ್ತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries