HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಎಲ್ಲರನ್ನು ಗೌರವಿಸುವುದೇ ಭಾರತೀಯ ಸಂಸ್ಕೃತಿಯ ಜೀವಾಳ : ರಾಜೇಶ್ ಪದ್ಮಾರ್
    ಪೆರ್ಲ: ಪ್ರತಿಯೊಂದು ವಸುವಿನಲ್ಲಿ ದೇವರನ್ನು ಕಾಣುವ ಮತ್ತು ಎಲ್ಲರನ್ನು ಗೌರವಿಸುವುದೇ ಭಾರತೀಯ ಸಂಸ್ಕೃತಿಯ ಜೀವಾಳ ಎಂದು ತಿಪಟೂರು ಸರಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ  ರಾಜೇಶ್ ಪದ್ಮಾರ್ ಹೇಳಿದರು.
   ಪೆರ್ಲ ನಾಲಂದ ಕಾಲೇಜಿನಲ್ಲಿ ಭಾರತೀಯ ಚಿಂತನೆಗಳು ಮತ್ತು ರಾಷ್ಟ್ರೀಯತೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ ಅವರು ಮಾತನಾಡಿದರು.
   ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಒಂದು ಉಳಿಯುವುದು ಮತ್ತೊಂದು ಅಳಿಯುವುದು. ಭಾರತೀಯ ಸಂಸ್ಕೃತಿಯ ಮೇಲೆ ಎಷ್ಟೇ ಪ್ರಹಾರಗಳು ನಡೆದಿದ್ದರೂ ಅದನ್ನು ಉಳಿಸಿಕೊಂಡು ಬರಲಾಗಿದೆ. ಅದನ್ನು ಬೆಳೆಸುವುದು ನಮ್ಮ ಅದ್ಯ ಕರ್ತವ್ಯ. ಭೂಮಿಯನ್ನು ಮಾತೆಯಾಗಿ ಕಾಣುವ ಚರಾಚರಗಳಲ್ಲಿ ದೇವರನ್ನು ಕಾಣುವ, ಮಾನವರನ್ನು ಮತ್ತು ಇತರ ಮತಧರ್ಮಗಳನ್ನು ಸಮಾನವಾಗಿ ಗೌರವಿಸುವ ಏಕಮೇವ ಸಂಸ್ಕೃತಿ ಭಾರತೀಯ ಸಂಸ್ಕೃತಿ. ಅದರಲ್ಲೇ ರಾಷ್ಟ್ರೀಯತೆ ಅಡಗಿದೆ. ಭಾರತೀಯ ಸಂಸ್ಕೃತಿಯು ಋಷಿ ಸಂಸ್ಕೃತಿಯಾದರೂ ಕಾಲಕ್ಕೆ ಹೊಂದುವಂತೆ ಮೂಲ ಸತ್ವವನ್ನು ಉಳಿಸಿಕೊಂಡು ಅದರ ಬಗ್ಗೆ ಹಲವು ಚಿಂತನೆಗಳು ಬೆಳೆದು ಬಂದಿವೆ ಎಂದರು.
     ಕಾಲೇಜಿನ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ವಿದ್ಯಾಥರ್ಿಗಳಲ್ಲಿ ಇತರರನ್ನು ಗೌರವಿಸುವ ಮನೋಭಾವ ಮತ್ತು ರಾಷ್ಟ್ರೀಯತೆಯ ಅರಿವಿನ ಕೊರತೆ ಎದ್ದು ಕಾಣುತ್ತದೆ. ಅದನ್ನು ತುಂಬಲು ಇಂತಹ ಉಪನ್ಯಾಸಗಳು ಅಗತ್ಯ. ಭಾರತೀಯ ಆಥರ್ಿಕ ಚಿಂತನೆಗಳಿಗೆ ಕೌಟಿಲ್ಯನ ಅರ್ಥಶಾಸ್ತ್ರವೇ ಮೂಲ ಎಂದರು.
   ಕಾಲೇಜಿನ ಕಾರ್ಯ ನಿರ್ವಹಣಾಧಿಕಾರಿ ಕೆ.ಶಿವಕುಮಾರ್ ಸ್ವಾಗತಿಸಿ, ಉಪನ್ಯಾಸಕ ಕೆ.ಕೇಶವ ಶರ್ಮ ವಂದಿಸಿದರು. ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿನಿ ಭವ್ಯಶ್ರೀ ವೈಯಕ್ತಿಕ ಗೀತೆಯನ್ನು ಹಾಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries