ಕಾಸರಗೋಡು: ಕಾಸರಗೋಡು ಕೇಂದ್ರೀಯ ವಿದ್ಯಾಲಯ ನಂ.2ರ ಹಳೆವಿದ್ಯಾತ್ಥಿ ಗಳ ಸಂಘಟನೆ ರಚನೆಗೊಳ್ಳಲಿದೆ. ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾಥರ್ಗಳ ಏಳಿಗೆಯ ಉದ್ದೇಶದೊಂದಿಗೆ ಈ ಸಂಘಟನೆ ರಚನೆಗೊಳ್ಳಲಿದೆ ಎಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ನಿರ್ಧರಿಸಿದೆ.
ಹೆಚ್ಚುವರಿ ದಂಡಣದೀಖಋಈ ಏನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ವಗರ್?ವಣೆಗೊಂಡು ತೆರಳಿದ ದೈಹಿಕ ಶಿಕ್ಷಕರ ಬದಲಿಗೆ ಇನ್ನೊಬ್ಬ ಶಿಕ್ಷಕರ ನೇಮಕಕಕ್ಕೆ ತೀಮರ್?ನಕೈಗೊಳ್ಳಲಾಯಿತು. ಶಾಲಾ ಆವರಣದಲ್ಲಿ ಈಗ ಬಳಕೆಯಲ್ಲಿರುವ ಕೊಳ್ಳವೆಬಾವಿಯಲ್ಲಿ ನೋರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಳ ಹೆಚ್ಚಿಸಿ, ನೀರನ್ನು ಇನ್ನಷ್ಟು ಶುದ್ದೀಕರಿಸಿ ಬಳಸಲು, ಶಾಲೆಯ ಕಟ್ಟಡ ಬಣ್ಣ ಬಳಿಯುವ ಮತ್ತು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಲಾಯಿತು.
ಪ್ರಾಂಶುಪಾಲ ಕೆ.ಶಾಂತಪ್ಪ, ಪೆರಿಯ ನವೋದಯ ವಿದ್ಯಾಲಯದ ಪ್ರಾಂಶುಪಾಲ ಕೆ.ವಿಜಯಕೃಷ್ಣನ್, ಕಾಸರಗೋಡು ಸರಕಾರಿ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಎಂ.ರೀಮಾ, ಸಹಾಯಕ ಪ್ರಾಚಾರ್ಯ ಡಾ.ಪಿ.ಯು.ಜಿಜೋ, ಅಂಗಿಡಿಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಸಿ.ಎಚ್.ಗೋಪಾಲಕೃಷ್ಣನ್, ಬಿ ಎಸ್ ಎನ್.ಎಲ್ ಕಿರಿಯ ದೂರವಾಣಿ ಅಧಿಕಾರಿ ಬಿ.ಎಸ್.ವಿಶ್ವನಾಥ್, ಕೇಂದ್ರೀಯ ವಿದ್ಯಾಲಯ ನಂ.2ರ ಅಧ್ಯಾಪಕ ಎಂ.ಎಂ.ಶಾಜು, ಡಾ.ನೀತಾ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು.

