ಕಾಸರಗೋಡು: ಅಂತಾರಾಷ್ಠ್ರೀಯ ಮಕ್ಕಳ ಹಕ್ಕು ಸಪ್ತಾಹ ಅಂಗವಾಗಿ ಜಿಲ್ಲಾ ಶಿಶು ಸಂರಕ್ಷಣೆ ಘಟಕ ಮತ್ತು ರಾಜ್ಯ ಮಕ್ಕಳ ಹಕ್ಕು ಸಂರಕ್ಷಣೆ ಆಯೋಗ, ಕಾಸರಗೋಡು ಚೈಲ್ಡ್ ಲೈನ್ ಜಂಟಿ ವತಿಯಿಂದ ವಿವಿಧೆಡೆ ನಡೆದುಬರುತ್ತಿದ್ದ ಕಾರ್ಯಕ್ರಮಗಳ ಸಮಾರೋಪ ನಡೆಯಿತು. ಈ ಸಂಬಂಧ ನಗರಸಭೆ ಮಹಿಳಾ ಭವನದಲ್ಲಿ ನಡೆದ ಸಮಾರಂಭವನ್ನು ಮಕ್ಕಳ ಹಕ್ಕು ಆಯೋಗ ಸದಸ್ಯೆ ನ್ಯಾಯವಾದಿ ಶ್ರೀಲಾ ಮೆನನ್ ಉದ್ಘಾಟಿಸಿದರು. ವಿವಿಧ ಸ್ಪಧರ್?ಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಜಿಲ್ಲಾ ಮಟ್ಟದ ನಿರೀಕ್ಷಣೆ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಪಿ.ಪಿ.ಮರಿಯಮ್ಮ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದಶರ್? ಮಧು ಮುದಿಯಕ್ಕಾಲ್, ಎನ್.ರಂಜಿನಿ, ಎ.ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು. ಚೈಲ್ಡ್ಲೈನ್ ನೋಡೆಲ್ ಕೋ ಓಡರ್?ನೇಟರ್ ಅನೀಶ್ ಜೋಸ್ ಸ್ವಾಗತಿಸಿದರು. ಎ.ಜೆ.ಪೈಝಲ್ ವಂದಿಸಿದರು.
ಮಕ್ಕಳ ನ್ಯಾಯ ಸಂರಕ್ಷಣೆ ಸಂಸ್ಥೆಗಳ ನೌಕರರಿಗೆ ತರಬೇತಿ
ಜಿಲ್ಲೆಯ ವಿವಿಧ ಮಕ್ಕಳ ನ್ಯಾಯಸಂರಕ್ಷಣೆ ಸಂಸ್ಥೆಗಳ ನೌಕರರಿಗೆ ತರಬೇತಿ ನೀಡಲಾಯಿತು. ಜಿಲ್ಲಾ ಶಿಶು ಕಲ್ಯಾಣ ಸಂರಕ್ಷಣೆ ಘಟಕದ ನೇತೃತ್ವದಲ್ಲಿ ಈ ತರಬೇತಿ ಜರುಗಿತು. ಕಾಸರಗೋಡು ಸ್ಪೀಡ್ವೇಇನ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಲ್ಲಾಮಟ್ಟದ ನೀರಕ್ಷಣೆ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಪಿ.ಪಿ.ಮರಿಯಮ್ಮ ಉದ್ಘಾಟಿಸಿದರು. ಪಿ.ಎಸ್.ಶರತ್ಕುಮಾರ್, ಶುನೈಬ್ ಮೊದಲಾದವರು ಉಪಸ್ಥಿತರಿದ್ದರು. ಕಣ್ಣೂರು ಜಿಲ್ಲಾ ಪ್ರೊಬೇಷನರಿ ಅಧಿಕಾರಿ ಪಿ.ವಿ.ಶಂನಾದ್, ಎ.ಜೆ.ಫೈಝಲ್ ಮೊದಲಾದವರು ನೇತೃತ್ವ ವಹಿಸಿದರು.


