ಕಾಸರಗೋಡು: ವಿವಾಹಿತ ಮಹಿಳೆಯ ಮೃತದೇಹ ಸ್ನಾನ ಗೃಹದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೈಕ ಚಾಂಡಿಮೂಲೆ ನಿವಾಸಿ ಶಂಕರ ಎಂಬವರ ಪತ್ನಿ ಚಿತ್ರಕಲಾ (41) ಮೃತಪಟ್ಟ ಮಹಿಳೆ.
ಮನೆ ಸಮೀಪದ ಸ್ನಾನದ ಗೃಹದಲ್ಲಿ ಗುರುವಾರ, ಚಿತ್ರಕಲಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಇವರನ್ನು ನೇಣಿನಿಂದ ಕೆಳಗಿಳಿಸಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


