ಕುಂಬಳೆ: ಕುಂಬಳೆ ಪೆÇಲೀಸ್ ಠಾಣಾ ವ್ಯಾಪ್ತಿಯ ಸೀತಂಗೋಳಿಯಿಂದ ನಾಪತ್ತೆಯಾಗಿದ್ದ ಗೃಹಿಣಿಯನ್ನು ಪಾಲಕ್ಕಾಡ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. ಅಸ್ಸಾಂ ಮೂಲದ ನಿವಾಸಿ, ಸೀತಾಂಗೋಳಿ ಬೀವರೇಜಸ್ ಶಾಪ್ ಬಳಿ ವಾಸಿಸುತ್ತಿದ್ದ 23 ವರ್ಷದ ಮಹಿಳೆ ಪತ್ತೆಯಾದವಳು. ಪಾಲಕ್ಕಾಡ್ ರೈಲ್ವೆ ಪೆÇಲೀಸರು ಪತ್ತೆಹಚ್ಚಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದರು. ಪಾಲಕ್ಕಾಡ್‍ಗೆ ತೆರಳಿದ ಕುಂಬಳೆ ಠಾಣೆ ಪೆÇಲೀಸರು ಮಹಿಳೆಯನ್ನು ಕರೆತಂದಿದ್ದಾರೆ.
ಮಹಿಳೆಯಿಂದ ಸಮಗ್ರ ಹೇಳಿಕೆ ದಾಖಲಿಸಿಕೊಂಡ ನಂತರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮಂಗಳವಾರ ಬೆಳಿಗ್ಗೆ ಮಹಿಳೆ, ತಾನು ವಾಸಿಸುತ್ತಿದ್ದ ಕ್ವಾರ್ಟರ್ಸ್‍ನಿಂದ ಹೊರಗೆ ಹೋಗಿದ್ದು, ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಪೆÇಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕುಂಬಳೆ ಠಾನೆ ಪೋಲೀಸರು, ನಾಪತ್ತೆಯಾದ ಯುವತಿಯ ಪತ್ತೆಗಾಗಿ ರಾಜ್ಯದ ಎಲ್ಲಾ ಪೋಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಿದ್ದರು.

