ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಜೂ. 28ರಂದು ಮಧ್ಯಾಃನ 2.30ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದ ಶ್ರೀ ಕೇಶವಾನಂದ ಭಾರತೀ ಸ್ಮøತಿ ಮಂದಿರದಲ್ಲಿ ಜರುಗಲಿದೆ.
ಪೆರ್ಲದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಶಿಬಿರ ಆಯೋಜಿಸಲಾಗಿದೆ. ತಜ್ಞ ವೈದ್ಯರಾದ ಪೆರ್ಲ ಚಿನ್ಮಯ ಕ್ಲಿನಿಕ್‍ನ ಡಾ. ಕೃಷ್ಣ ಮೋಹನ ಬಿ. ಆರ್. ಹಾಗೂ ಬಾಯಾರುಪದವು ಪ್ರಶಾಂತಿ ಕ್ಲಿನಿಕ್‍ನ ಡಾ. ಸತ್ಯನಾರಾಯಣ ಬಿ. ಶಿಬಿರಾರ್ಥಿಗಳ ತಪಾಸಣೆ ನಡೆಸುವರು. ಎಲ್ಲಾ ರೋಗದ ತಪಾಸಣೆಯ ಜತೆಗೆ ರೋಗಿಗಳಿಗೆ ಉಚಿತವಾಗಿ ಔಷಧ ವಿತರಿಸಲಾಗುವುದು. ಕುಂಬಳೆಯ ಶ್ರೀ ಗೋಪಾಲಕೃಷ್ಣ ಫಾರ್ಮಸಿ, ಡಾಕ್ಟರ್ ರವಿ ನಾರಾಯಣ, ಪುತ್ತೂರು ನೆಹರೂನಗರದ ಸಂಜೀವಿನಿ ಕ್ಲಿನಿಕ್, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟಸ್ರ್ಲ ಸುಮತಿ ಕಾಂಪ್ಲೆಕ್ಸ್ ಕಬಕ, ಸಿ. ಕೆಎಮ್. ಫಾರ್ಮಸಿ ಬೆಂಗಳೂರು ಉಚಿತ ಆರೋಗ್ಯ ಶಿಬಿರಕ್ಕೆ ಸಹಕಾರ ನೀಡಲಿದ್ದಾರೆ.

