HEALTH TIPS

ಪೈವಳಿಕೆಯಲ್ಲಿ ತ್ಯಾಜ್ಯ ಸಮಸ್ಯೆ: ಡಿವೈಎಫ್‍ಐಯಿಂದ 29 ರಂದು ಪಂಚಾಯತಿ ಧರಣಿ

ಉಪ್ಪಳ: ಪೈವಳಿಕೆ ಪಂಚಾಯತಿಯ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕ್ರಮದ ವಿರುದ್ಧ, ವಿಲೇವಾರಿ ಕೇಂದ್ರಗಳಲ್ಲಿ ತಿಂಗಳುಗಳಿಂದ ಶೇಖರಣೆಗೊಂಡಿರುವ ತ್ಯಾಜ್ಯವನ್ನು ತುರ್ತಾಗಿ ತೆರವುಗೊಳಿಸಬೇಕು, ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಗಳಲ್ಲಿ ಅಧಿಕಾರಿಗಳು ತೋರಿದ ತೀವ್ರ ನಿರ್ಲಕ್ಷ್ಯವನ್ನು ಖಂಡಿಸಿ ಡಿಪಿs ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಪಂಚಾಯತಿ ಕಚೇರಿ ಧರಣಿ ಹಮ್ಮಿಕೊಳ್ಳಲಾಗಿದೆ. ಜೂನ್ 29 ರಂದು ಬೆಳಗ್ಗೆ 10ಕ್ಕೆ ಪೈವಳಿಕೆ ಗ್ರಾಮ ಕಚೇರಿ ಆವರಣದಿಂದ ಯುವಜನ ಮೆರವಣಿಗೆ ಆರಂಭವಾಗಲಿದೆ.

ಹಸಿರು ಕ್ರಿಯÁ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾವುದೇ ಸಂಸ್ಕರಣೆ ಯಿಲ್ಲದೆ ವಿಲೇವಾರಿ ಕೇಂದ್ರಗಳಲ್ಲಿ ರಾಶಿ ಹಾಕಲಾಗುತ್ತಿದೆ. ಮಳೆ ಜೋರಾದ ಕಾರಣ ಈ ಕೇಂದ್ರಗಳು ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನಗಳಾಗಿ ಬದಲಾಗಿವೆ. ಡೆಂಗ್ಯೂ, ಇಲಿಜ್ವರ ಸೇರಿದಂತೆ ವಿವಿಧ ರೋಗಗಳು ಪಂಚಾಯತಿಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದರೂ ಆಡಳಿತ ಸಮಿತಿ ಕಣ್ಣುಮುಚ್ಚಿ ಕುಳಿತಿದೆ. ಎಂಸಿಎಪ್s ಕೇಂದ್ರಗಳನ್ನು ಸ್ವಚ್ಛಗೊಳಿಸುವುದು, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವುದು, ಹಸಿರು ಕ್ರಿಯÁ ಸೇನೆಗೆ ಕನಿಷ್ಠ ವೇತನ ಮತ್ತು ಸುರಕ್ಷಾ ಸಾಮಗ್ರಿಗಳನ್ನು ಖಚಿತಪಡಿಸುವುದು, ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳನ್ನು ಸಕ್ರಿಯಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಬಲವಾದ ಜನಾಂ ದೋಲನ ಕಾರ್ಯಕ್ರಮಗಳೊಂದಿಗೆ ಮುಂದುವರಿಯುವುದಾಗಿ ಡಿಪಿs ಮಂಜೇಶ್ವರ ಬ್ಲಾಕ್ ಸಮಿತಿ ಎಚ್ಚರಿಕೆ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries