ಡಿ.21ರಿಂದ ಎರಿಂಜೇರಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ
0
ಡಿಸೆಂಬರ್ 16, 2018
ಮುಳ್ಳೇರಿಯ: ಇಲ್ಲಿಗೆ ಸಮೀಪದ ಎರಿಂಜೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ ಡಿ.21 ಮತ್ತು 22ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಡಿ.21ರಂದು ಸಂಜೆ 5ಕ್ಕೆ ತಂತ್ರಿಗಳಿಗೆ ಸ್ವಾಗತ, 6ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು, 6.45ಕ್ಕೆ ಪ್ರಾರ್ಥನೆ, ಸಾಂಸ್ಕøತಿಕ ಸಮ್ಮೇಳನದಲ್ಲಿ ಉದುಮ ಶಾಸಕ ಕೆ.ಕುಂಞÂರಾಮನ್ ಅಧ್ಯಕ್ಷತೆ ವಹಿಸುವರು. ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಶ್ರೀಕಾಂತ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೋದನ್ ನಂಬ್ಯಾರ್, ಮುಳಿಯಾರು ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಗೋಪಾಲನ್, ಕಾರಡ್ಕ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್, ಮುಳಿಯಾರು ಪಂಚಾಯಿತಿ ಸದಸ್ಯರಾದ ಪಿ.ಬಾಲಕೃಷ್ಣ, ಮಿನಿ, ತಂಬಾನ್, ಗಣೇಶನ್, ಮುಂಡೋಳ್ ಕ್ಷೇತ್ರ ಟ್ರಸ್ಟಿ ಅಧ್ಯಕ್ಷ ರಘುರಾಮ ಬಲ್ಲಾಳ್, ಮುಳಿಯಾರು ಕ್ಷೇತ್ರ ಟ್ರಸ್ಟಿ ಸೀತಾರಾಮ ಬಳ್ಳುಳ್ಳಾಯ, ಮಲ್ಲ ಕ್ಷೇತ್ರದ ಟ್ರಸ್ಟಿ ವಿಷ್ಣು ಭಟ್, ಇ.ಮೋಹನನ್, ವಸಂತ ರೈ, ಬಲರಾಮನ್ ನಾಯರ್, ಪಾತನಡ್ಕ ಕಾಮಲೋನ್ ಕುಂಞಂಬು ಗುರುಸ್ವಾಮಿ, ಭಜನಾ ಮಂದಿರದ ಅಧ್ಯಕ್ಷ ಇ.ಪ್ರಭಾಕರನ್ ನಾಯರ್, ಕೆ.ನೀಲಕಂಠನ್, ಕೆ.ವಾರಿಜಾಕ್ಷನ್, ಕಮಲಾಕ್ಷನ್ ಪಾತನಡ್ಕ ಭಾಗವಹಿಸುವರು. ರಾತ್ರಿ 7.30ಕ್ಕೆ ವೆಳ್ಳಿಕ್ಕೋತ್ ವಿಷ್ಣು ಭಟ್ ಅವರಿಂದ ಸಂಗೀತ ಕಛೇರಿ, ಸ್ಥಳೀಯರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಡಿ.22ರಂದು ಬೆಳಿಗ್ಗೆ 8ಕ್ಕೆ ಗಣಪತಿಹೋಮ, 10ರಿಂದ ಭಜನೆ, 11.30ಕ್ಕೆ ತಾಯಂಬಕ, ಮಧ್ಯಾಹ್ನ 12.41ಕ್ಕೆ ಕಾಮಲೋನ್ ಕುಂಞಂಬು ಗುರುಸ್ವಾಮಿಯವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಚಿತ್ರ ಪ್ರತಿಷ್ಠೆ, ಮಹಾಪೂಜೆ, ಅನ್ನದಾನ, ರಾತ್ರಿ 7.30ಕ್ಕೆ ಅನ್ನದಾನ ನಡೆಯಲಿದೆ.

