ಡಿ.27ರಿಂದ ಅಡೂರಿನಲ್ಲಿ ಮೇಧಾ ಸರಸ್ವತಿ ಯಾಗ
0
ಡಿಸೆಂಬರ್ 16, 2018
ಮುಳ್ಳೇರಿಯ: ಅಡೂರು ವಿದ್ಯಾಭಾರತಿ ವಿದ್ಯಾಲಯದ ಆಶ್ರಯದಲ್ಲಿ ಮೇಧಾ ಸರಸ್ವತಿ ಯಾಗ ಮತ್ತು ನೂತನ ಶಿಶು ಮಂದಿರದ ಲೋಕಾರ್ಪಣೆ ಕಾರ್ಯಕ್ರಮಗಳು ಡಿ.27 ಮತ್ತು 28ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.27ರಂದು ಬೆಳಿಗ್ಗೆ 10ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಮಧ್ಯಾಹ್ನ 3ರಿಂದ ವಿದ್ಯಾಲಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯ, ಸಂಜೆ 6ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.28ರಂದು ಬೆಳಿಗ್ಗೆ 7ಕ್ಕೆ ಧ್ವಜಾರೋಹಣ, ಗಣಪತಿ ಹವನ, ಮೇಧಾ ಸರಸ್ವತಿ ಯಾಗ ಆರಂಭ, 10.30ಕ್ಕೆ ಪೂರ್ಣಾಹುತಿ, 11ಕ್ಕೆ ಶಿಶು ಮಂದಿರ ಲೋಕಾರ್ಪಣೆ, 11.15ಕ್ಕೆ ಧಾರ್ಮಿಕ ಸಭೆ, ಯಾಗಸಮಿತಿ ಅಧ್ಯಕ್ಷ ಚಂದ್ರಶೇಖರ ಪೆರಿಯಡ್ಕ ಅಧ್ಯಕ್ಷತೆ ವಹಿಸುವರು. ಭಾರತೀಯ ವಿದ್ಯಾನಿಕೇತನ್ ಜಿಲ್ಲಾ ಅಧ್ಯಕ್ಷ ಶಿವಶಂಕರನ್, ಮುಳ್ಳೇರಿಯ ವಿದ್ಯಾಶ್ರೀ ವಿದ್ಯಾಲಯ ಕಾರ್ಯದರ್ಶಿ ರಂಗನಾಥ ಶೆಣೈ, ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆಯ ಸಂಚಾಲಕ ಯು.ಜಿ.ರಾಧಾ, ಜಾಲ್ಸೂರು ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕ ಸುಧಾಕರ ಕಾಮತ್, ಸುಳ್ಯ ಆಗ್ರೋ ಸಂಸ್ಥೆಯ ರಾಮಚಂದ್ರ, ಯಾಗ ಸಮಿತಿ ಅಧ್ಯಕ್ಷ ಗಂಗಾಧರ ಕಾಂತಡ್ಕ, ಪ್ರಧಾನ ಕಾರ್ಯದರ್ಶಿ ಡಿ.ವೆಂಕಟ್ರಾಮ್, ಜೊತೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಳ್ಳಕ್ಕಾನ ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ, 2.30ರಿಂದ ಗಾನ-ನೃತ್ಯ ಸಂಗಮ ನಡೆಯಲಿದೆ.

