ಕುಂಟಾರು ಭಜನಾ ಮಂದಿರದ ಅಯ್ಯಪ್ಪ ದೀಪೋತ್ಸವ ಸಂಪನ್ನ
0
ಡಿಸೆಂಬರ್ 16, 2018
ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವ ಶನಿವಾರ ಕೊನೆಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಗಣಪತಿಹೋಮ, ಭಜನಾಮೃತ, ತಾಯಂಬಕ, ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ನಾಟ್ಯಗುರು ಸೂರ್ಯನಾರಾಯಣ ಪದಕ್ಕಣ್ಣಾಯ ಇವರ ಮಾರ್ಗದರ್ಶನದಲ್ಲಿ ಸ್ಥಳೀಯ ಮಕ್ಕಳಿಂದ ಯಕ್ಷಗಾನ ರಂಗಪ್ರವೇಶ-ನರಕಾಸುರ ವಧೆ, ಕುಂಟಾರು ಶ್ರೀಕ್ಷೇತ್ರದಿಂದ ಉಲ್ಪೆ ಮೆರವಣಿಗೆ ನಡೆಯಿತು.


