ಮುಳ್ಳೇರಿಯ; ಪಿಂಚಣಿದಾರರ ಕುಟುಂಬ ಸಂಗಮ
0
ಡಿಸೆಂಬರ್ 16, 2018
ಮುಳ್ಳೇರಿಯ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಕಾರಡ್ಕ ಘಟಕದ ಕುಟುಂಬ ಸಂಗಮ ಶನಿವಾರ ಮುಳ್ಳೇರಿಯ ವ್ಯಾಪಾರಿ `Àವನದಲ್ಲಿ ನಡೆಯಿತು.
ರಾಜ್ಯ ಕೌನ್ಸಿಲರ್ ಪ್ರಭಾಕರ ಪೊದುವಾಳ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ದೇವಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಿದ್ಧ ಚಿತ್ರಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭದಲ್ಲಿ 80 ವರ್ಷಕ್ಕೆ ಮೇಲ್ಪಟ್ಟ ಘಟಕದ ಸದಸ್ಯರನ್ನು ಗೌರವಿಸಲಾಯಿತು. ಬ್ಲಾಕ್ ಸಮಿತಿ ಅಧ್ಯಕ್ಷ ಕೆ.ವಿ.ನಾರಾಯಣನ್, ಕಾರ್ಯದರ್ಶಿ ಇ.ಸಿ.ಕಣ್ಣನ್, ಉಪಾಧ್ಯಕ್ಷ ಎನ್.ದಾಮೋದರ ಮಾಸ್ತರ್ ಉಪಸ್ಥಿತರಿದ್ದರು. ಮುಳ್ಳೇರಿಯ ಆಯುರ್ವೇದಿಕ್ ಆಸ್ಪತ್ರೆಯ ಡಾ.ಆಸಿಯಾ ಆರೋಗ್ಯ ತರಗತಿ ನಡೆಸಿಕೊಟ್ಟರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಘಟಕ ಕಾರ್ಯದರ್ಶಿ ಎಂ.ಮಾಧವಿ ಸ್ವಾಗತಿಸಿ, ವಿಠಲ ಶೆಟ್ಟಿ ವಂದಿಸಿದರು.


