ಮಾಂಗಾಲಮೂಲೆ : ಬ್ರಹ್ಮಕಲಶೋತ್ಸವ ಸಮಿತಿ ಸಭೆ
0
ಡಿಸೆಂಬರ್ 16, 2018
ಮಧೂರು: ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅನತಿ ದೂರದಲ್ಲಿರುವ ಮಾಂಗಾಲಮೂಲೆ ಶ್ರೀ ರಕ್ತೇಶ್ವರೀ, ನಾಗ, ಗುಳಿಗ ಸಾನ್ನಿಧ್ಯವು ಆಸ್ತಿಕ ಶ್ರದ್ಧಾಳುಗಳ ಅಭಯತಾಣವಾಗಿದೆ. ಇಲ್ಲಿ ನೆಲೆಸಿರುವ ಶ್ರೀ ರಕ್ತೇಶ್ವರಿ, ನಾಗ, ಗುಳಿಗ ದೈವಸ್ಥಾನವು ಶಿಥಿಲಾವಸ್ಥೆಯಲ್ಲಿದ್ದು ಇದೀಗ ನೂತನ ಕ್ಷೇತ್ರ ಮತ್ತು ನಾಗನಕಟ್ಟೆ, ಗುಳಿಗನ ಸಾನ್ನಿಧ್ಯ ನಿರ್ಮಾಣವು ಅಂತಿಮ ಹಂತದಲ್ಲಿದೆ. ಕ್ಷೇತ್ರ ಬ್ರಹ್ಮಕಲಶೋತ್ಸವವನ್ನು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ 2019 ಫೆ.12 ರಿಂದ 15 ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಜತೆಯಲ್ಲಿ ಶ್ರೀ ದೈವಗಳ ದೈವಂಕೆಟ್ಟು ಮಹೋತ್ಸವವು ನಡೆಯುವುದು.
ಕಾರ್ಯಕ್ರಮದ ಯಶಸ್ಸಿಗೆ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ಧನ ಶಿರಿಬಾಗಿಲು ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಸಭೆ ಶ್ರೀ ಕ್ಷೇತ್ರ ಪರಿಸರದಲ್ಲಿ ನಡೆಯಿತು. ಬ್ರಹ್ಮಶ್ರೀ ಕೇಶವ ಆಚಾರ್ ಉಳಿಯತ್ತಡ್ಕ, ತಾರಾನಾಥ ಮಧೂರು, ಬಿ.ಬಾಲಕೃಷ್ಣ ಅಗ್ಗಿತ್ತಾಯ, ದಿವಾಕರ ಆಚಾರ್, ಜಯರಾಮ ರೈ, ಉಮೇಶ ಗಟ್ಟಿ, ಸುಕುಮಾರ ಕುದ್ರೆಪ್ಪಾಡಿ, ಸೀತಾರಾಮಾ ಮಾಸ್ತರ್, ರವೀಂದ್ರ ರೈ, ಶಂಕರ ಟೈಲರ್, ಯೋಗೀಶ್ ಎಂ.ಆರ್, ಹರೀಶ್, ಮೋಹನ್‍ದಾಸ್ ಕೆ.ಪಿ, ಸುರೇಶ್ ಯು.ಆರ್. ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕೆ.ಆರ್, ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆ ನೀಡಿದರು. ಈ ಸಂದರ್ಭದಲ್ಲಿ ಯಶಸ್ಸಿಗೆ 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ(ಮುಖ್ಯ ರಕ್ಷಾಧಿಕಾರಿ), ಕೆ.ಜಿ.ಶ್ಯಾನುಭೋಗ್ (ರಕ್ಷಾಧಿಕಾರಿ), ಬಾಲಕೃಷ್ಣ ಅಗ್ಗಿತ್ತಾಯ, ಕೇಶವ ಆಚಾರ್(ಗೌರವಾಧ್ಯಕ್ಷ ) ತಾರಾನಾಥ ಮಧೂರು(ಅಧ್ಯಕ್ಷ), ದಿವಾಕರ ಆಚಾರ್, ರಾಘವ ಕಡಂಬಳ, ಜನಾರ್ಧನ ಪಿ, ನಾರಾಯಣ ಕಣ್ಣೂರು, ಧರ್ಮೇಂದ್ರ, ವಿಠಲ ಗಟ್ಟಿ, ಜಯರಾಮ ರೈ, ಪದ್ಮರಾಜ ಗಟ್ಟಿ(ಉಪಾಧ್ಯಕ್ಷರು), ಚಂದ್ರಶೇಖರ್ ಕೆ.ಆರ್.(ಪ್ರಧಾನ ಕಾರ್ಯದರ್ಶಿ), ಉಮೇಶ ಗಟ್ಟಿ, ಸುಕುಮಾರ ಕುದ್ರೆಪ್ಪಾಡಿ, ರವೀಂದ್ರ ರೈ, ಸಂತೋಷ್ ಗಟ್ಟಿ ಮನ್ನಿಪ್ಪಾಡಿ, ಶಂಕರ್ ಟೈಲರ್, ಮೋಹನನ್ ಟಿ.ಕೆ, ಸೀತಾರಾಮ ಮಾಸ್ತರ್, ಯೋಗೀಶ್ ಎಂ.ಆರ್, ಸತೀಶ, ಮಹೇಂದ್ರ, ಹರೀಶ್(ಕಾರ್ಯದರ್ಶಿ), ಮೋಹನ್‍ದಾಸ್ ಕೆ.ಪಿ(ಕೋಶಾಧಿಕಾರಿ), ಸುರೇಶ್ ಯು.ಆರ್(ಸಹ ಕೋಶಾಧಿಕಾರಿ) ಅವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಯಶಸ್ಸಿಗೆ ಮಹಿಳಾ ಸಮಿತಿಯನ್ನು ರಚಿಸಲಾಯಿತು. ಗೀತಾ (ಅಧ್ಯಕ್ಷೆ), ಶಾರದ ವಿಜಯ, ರಾಜೀವಿ ಶ್ರೀಧರ, ಹೇಮಾವತಿ, ಪುಷ್ಪ ಶ್ರೀಧರ(ಉಪಾಧ್ಯಕ್ಷೆಯರು), ರಾಧಾ ತುಳಸೀಧರನ್(ಪ್ರಧಾನ ಕಾರ್ಯದರ್ಶಿ), ಕಲಾವತಿ ಪೆರಿಯಡ್ಕ, ಶಾರದ, ನಿಶಾ ಚಂದ್ರಶೇಖರ, ನಳಿನಿ, ರೇಶ್ಮಾ (ಕಾರ್ಯದರ್ಶಿಗಳು) ಆಯ್ಕೆಯಾದರು.
ಶೀಘ್ರವೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಮನೆ ಮನೆ ಅಭಿಯಾನ ನಡೆಸಲು ತೀರ್ಮಾನಿಸಲಾಯಿತು. ಡಿ.20 ರಂದು ಸಂಜೆ 4 ಗಂಟೆಗೆ ನಡೆಯುವ ಮಹಾಸಭೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲು ತೀರ್ಮಾನಿಸಲಾಯಿತು.

