ಕುಂಬಳೆಯಲ್ಲಿ ಬಿಜೆಪಿಯಿಂದ ಮೆರವಣಿಗೆ
0
ಡಿಸೆಂಬರ್ 14, 2018
ಕುಂಬಳೆ: ಶಬರಿಮಲೆಯ ಆಚಾರ ಅನುಷ್ಠಾನಗಳಿಗೆ ಧಕ್ಕೆ ತರುವ ಯತ್ನದಲ್ಲಿರುವ ರಾಜ್ಯಾಡಳಿತ ನಡೆಸುತ್ತಿರುವ ಸಿಪಿಎಂ ಸರಕಾರದ ವಿರುದ್ಧ ಮನ ನೊಂದು ಗುರುವಾರ ಪ್ರಾಣ ತ್ಯಾಗ ಮಾಡಿದ ಸಿಪಿಎಂ ಕುಟುಂಬದ ಸದಸ್ಯರಾದ ವೇಣುಗೋಪಾಲ ನಾಯರ್ ಅವರ ನಿಧನಕ್ಕೆ ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಹರತಾಳದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನಾ ಜಾಥಾದಲ್ಲಿ ಕುಂಬ್ಳೆ ಬಿಜೆಪಿ ಪಂಚಾಯತಿ ಘಟಕದ ಅಧ್ಯಕ್ಷ ಕೆ.ಶಂಕರ ಆಳ್ವ, ಜಿಲ್ಲಾ ಸಮಿತಿ ಸದಸ್ಯ ಕೆ.ರಮೇಶ್ ಭಟ್, ಇತರ ಹಿಂದುಳಿದ ವರ್ಗ (ಒಬಿಸಿ)ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಶಶಿ ಕುಂಬ್ಳೆ, ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗಟ್ಟಿ ,ಕಾರ್ಯಕರ್ತರಾದ ಬಾಬು ಗಟ್ಟಿ,ಜಗದೀಶ್ ಪೇರಾಲ್,ಪ್ರದೀಪ್ ಬಂಬ್ರಾಣ, ಸುನಿಲ್ ದರ್ಬಾರ್‍ಕಟ್ಟೆ ಭಾಗವಹಿಸಿದರು.ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ಕೆ.ವಿನೋದನ್ ಅವರು ಮಾತನಾಡಿದರು. ಬಿಜೆಪಿ ಕುಂಬ್ಳೆ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಸುರೇಶ ಶಾಂತಿಪಳ್ಳ ವಂದಿಸಿದರು.


