ಇಂದು ಕುಂಟಾರು ಭಜನ ಮಂದಿರದ ಪ್ರತಿಷ್ಠಾ ಮಹೋತ್ಸವ
0
ಡಿಸೆಂಬರ್ 14, 2018
ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವ ಇಂದು(ಡಿ.15ರಂದು) ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 8ಕ್ಕೆ ಗಣಪತಿಹೋಮ, 9ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ಕ್ಕೆ ಅಯ್ಯಪ್ಪ ವ್ರತಧಾರಿ ಸ್ವಾಮಿಯವರಿಗೆ ಭಿಕ್ಷೆ, ಅನ್ನದಾನ, 1.30ಕ್ಕೆ ಭಜನಾಮೃತ, ಸಂಜೆ 5ಕ್ಕೆ ತಾಯಂಬಕ, ಸಂಜೆ 6ಕ್ಕೆ ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ನಾಟ್ಯಗುರು ಸೂರ್ಯನಾರಾಯಣ ಪದಕ್ಕಣ್ಣಾಯ ಇವರ ಮಾರ್ಗದರ್ಶನದಲ್ಲಿ ಸ್ಥಳೀಯ ಮಕ್ಕಳಿಂದ ಯಕ್ಷಗಾನ ರಂಗಪ್ರವೇಶ-ನರಕಾಸುರ ವಧೆ, 7.30ಕ್ಕೆ ಭಜನೆ, ಕುಂಟಾರು ಶ್ರೀಕ್ಷೇತ್ರದಿಂದ ಉಲ್ಪೆ ಮೆರವಣಿಗೆ, ರಾತ್ರಿ 9ಕ್ಕೆ ಮಹಾಪೂಜೆ ಅನ್ನದಾನ ನಡೆಯಲಿದೆ.

