ಆದೂರು; ಡಿ.17ರಿಂದ ಧನುಪೂಜೆ
0
ಡಿಸೆಂಬರ್ 14, 2018
ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಧನುಪೂಜೆ ಡಿ.17ರಿಂದ ಜ.14ರ ತನಕ (ಧನುಮಾಸ ಒಂದರಿಂದ ಮಕರ ಸಂಕ್ರಮಣದ ವರೆಗೆ) ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಧನುಪೂಜೆ ಮಾಡಲಿಚ್ಛಿಸುವವರು ಬೆಳಿಗ್ಗೆ 7.45 ಮುಂಚಿತವಾಗಿ ರಶೀದಿ ಮಾಡಿಸಿಕೊಳ್ಳಬೇಕೆಂದು ದೇಗುಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

