ವೈಷ್ಣೋದೇವಿ ಯಾತ್ರೆ ಇನ್ನು ಸುಲಭ - ಬೈರೋನ್ ಗೆ ಬಂತು ರೋಪ್ ವೇ!
0
ಡಿಸೆಂಬರ್ 24, 2018
ಶಿಲ್ಲಾಂಗ್: ಪವಿತ್ರ ಯಾತ್ರಾ ಕೇಂದ್ರ ವೈಷ್ಣೋದೇವಿ ಮಂದಿರ-ಬೈರೋನ್ ನಾಥ್ ಮಂದಿರಕ್ಕೆ ರೋಪ್ ವೇ ಸಂಪರ್ಕ ಇಂದು ಉದ್ಘಾಟನೆಯಾಗಿದ್ದು, ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳು ಇನ್ನು ಮುಂದಿನ ದಿನಗಳಲ್ಲಿ ಭೈರೋನ್ ನಾಥ್ ಮಂದಿರಕ್ಕೂ ಸುಲಭವಾಗಿ ಭೇಟಿ ನೀಡಬಹುದಾಗಿದೆ.
ವೈಷ್ಣೋದೇವಿ ಮಂದಿರದಿಂದ ಭೈರೋನ್ ನಾಥ್ ದೇವಾಲಯ ಕೇವಲ 1.5 ಕಿಮೀ ದೂರದಲ್ಲಿದ್ದರೂ ಕಡಿದಾದ ಪ್ರದೇಶದ ಹಿನ್ನೆಲೆಯಲ್ಲಿ ಪ್ರಯಾಣ ಕೈಗೊಳ್ಳುವುದು ದುಸ್ತರವಾಗಿತ್ತು. ಕೆಲವು ವರದಿಗಳ ಪ್ರಕಾರ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಶೇ.30-40 ರಷ್ಟು ಮಂದಿ ಭೈರೋನ್ ನಾಥ್ ದೇವಾಲಯಕ್ಕೂ ಭೇಟಿ ನೀಡುತ್ತಾರೆ. ರೋಪ್ ವೇ ಬಂದಿರುವುದರಿಂದ 3 ಗಂಟೆ ಕ್ರಮಿಸಬೇಕಾದ ಹಾದಿಯನ್ನು ಕೇವಲ 5 ನಿಮಿಷಗಳಲ್ಲಿ ಕ್ರಮಿಸಬಹುದಾಗಿದ್ದು, ತಲಾ 100 ರೂಪಾಯಿ ಖರ್ಚಾಗಲಿದೆ.
ನಿನ್ನೆಯೇ ರೋಪ್ ವೇ ಪರೀಕ್ಷಾರ್ಥ ಪ್ರಯಾಣ ನಡೆದಿದ್ದು, ರೋಪ್ ವೇ ಯಿಂದಾಗಿ ಸರಾಸರಿ 3000 ಜನರು ಹೆಚ್ಚುವರಿಯಾಗಿ ವೈಷ್ಣೋದೇವಿಯಿಂದ ಆಗಮಿಸುವ ನಿರೀಕ್ಷೆ ಇದೆ.


