ಪತ್ತ್ ಪನಿ ತೀರ್ಥ ಕೃತಿ ಬಿಡುಗಡೆ ಭಾನುವಾರ
0
ಡಿಸೆಂಬರ್ 20, 2018
ಮಂಜೇಶ್ವರ: ಯುವ ಬರಹಗಾರ್ತಿ ಕುಶಾಲಾಕ್ಷಿ.ವಿ.ಕುಲಾಲ್ ಬರೆದಿರುವ ಕಿರು ತುಳು ಲೇಖನಗಳ ಸಂಕಲನ ಪತ್ತ್ ಪನಿ ತೀರ್ಥ ಕೃತಿಯ ಬಿಡುಗಡೆ ಸಮಾರಂಭ ಡಿ.25 ರಂದು ಮಂಗಳವಾರ ಬೆಳಿಗ್ಗೆ 10ಕ್ಕೆ ಕಣ್ವತೀರ್ಥ ಮಠದ ಸಮೀಪದ ಅಮೃತ ನಿಲಯದಲ್ಲಿ ಸಾಹಿತ್ಯ ಕೂಟ ಕುಂಜತ್ತೂರು ಇದರ ಆಶ್ರಯದಲ್ಲಿ ನಡೆಯಲಿದೆ.
ಸಾಹಿತ್ಯ ಕೂಟ ಕುಂಜತ್ತೂರು ಇದರ ಅಧ್ಯಕ್ಷ ಬಿ.ನಾರಾಯಣ ತೂಮಿನಾಡು ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಹಿತಿ, ಪತ್ರಕರ್ತ ಜಯ ಮಣಿಯಂಪಾರೆ ಕೃತಿ ಬಿಡುಗಡೆಗೊಳಿಸುವರು. ಸಾಹಿತಿ ಸತೀಶ್ ಸಾಲಿಯಾನ್ ನೆಲ್ಲಿಕುಂಜೆ, ಸಾಹಿತಿ ಶಂಕರ ಕುಂಜತ್ತೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ವಿದ್ಯಾಶ್ರೀ ಉಳ್ಳಾಲ್ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು.


