ನಾಳೆ ರಂಗ ಚಿನ್ನಾರಿಯಿಂದ ಸಾಹಿತ್ಯ ಸಂತೆ
0
ಡಿಸೆಂಬರ್ 22, 2018
ಕಾಸರಗೋಡು: ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಕರಂದಕ್ಕಾಡಿನ `ಪದ್ಮಗಿರಿ ಕಲಾಕುಟೀರ'ದಲ್ಲಿ ನಾಳೆ(ಡಿ.೨೩ ) ಬೆಳಿಗ್ಗೆ ೯.೩೦ ರಿಂದ ಸಂಜೆ ೪ ರ ವರೆಗೆ `ಸಾಹಿತ್ಯ ಸಂತೆ' ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ಡಾ.ಬಿ.ವಿವೇಕ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಂಜೆಯಲ್ಲಿ ಎಪ್ಪತ್ತು ಮಂದಿ ಸಾಹಿತಿ-ಕಲಾವಿದರು ಭಾಗವಹಿಸುವರು.
ಕಾಲದ ಹರಿವಿನಲ್ಲಿ ಕೊಚ್ಚಿಹೋದ, ಹತ್ತಿರವಿದ್ದರೂ ದೂರವಾದ, ತೆರೆಯಲೆತ್ನಿಸಿದರೂ ಮುಚ್ಚಿಹೋದ, ನಗಲೆತ್ನಿಸಿದರೂ ಅಳುವಾದ, ಅಳಲೆತ್ನಿಸಿದರೆ ಜೀವನವೇ ಆದ, ಎಷ್ಟೆಷ್ಟೊÃ ಪರಸ್ಪರ ಹಂಚ ಬೇಕಾಗಿದ್ದ ಸಿಹಿ ಕಹಿ ನೆನಪÅಗಳು, ಕಾಲಗರ್ಭದೊಳಗಿಂದ ಹೊರ ಜಿಗಿಯಲು ಇದೊಂದು ವಿಶಿಷ್ಟ, ವಿಭಿನ್ನ ಅವಕಾಶ ಎನ್ನುತ್ತಾರೆ ರಂಗಚಿನ್ನಾರಿಯ ಸಂಚಾಲಕರಾದ ಕಾಸರಗೋಡು ಚಿನ್ನಾ. ಜೊತೆಗೆ ರಂಗ ಚಿನ್ನಾರಿಯ ಸದಸ್ಯರಾದ ಸತ್ಯನಾರಾಯಣ ಕೆ, ಕೋಳಾರು ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ಸಂಯೋಜನೆಯಲ್ಲಿ ಸಹಕರಿಸುವರು.


