ಕಲ್ಲಡ್ಕ-ಚೆರ್ಕಳ ರಸ್ತೆ ಪುನರ್ನಿರ್ಮಾಣಕ್ಕೆ ಇಂದು ಚಾಲನೆ
0
ಡಿಸೆಂಬರ್ 16, 2018
ಕಾಸರಗೋಡು: ಕಲ್ಲಡ್ಕ-ಚೆರ್ಕಳ ರಸ್ತೆಯ ಪುನರ್ ನಿರ್ಮಾಣ ನಡೆಯಲಿದೆ. ಜಿಲ್ಲೆಯ ಪ್ರಧಾನ ಅಂತರ್ ರಾಜ್ಯ ಹೆದ್ದಾರಿಗಳಲ್ಲಿ ಒಂದಾಗಿರುವ ಈ ರಸ್ತೆ ಉಕ್ಕಿನಡ್ಕದಿಂದ ಚೆರ್ಕಳ ವರೆಗೆ ದುರಸ್ತಿಗೊಳ್ಳಲು2016-17 ವರ್ಷದ ಕಿಫ್ ಬಿ ಪ್ಯಾಕೇಜ್ ಮೂಲಕ 39.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ರಸ್ತೆ ನಿರ್ಮಾಣದ ಉದ್ಘಾಟನೆ ಇಂದು (ಡಿ.16) ಬೆಳಗ್ಗೆ 11 ಗಂಟೆಗೆ ಚೆರ್ಕಳದಲ್ಲಿ ನಡೆಯಲಿದೆ. ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಕುಂಞಿ ಚಾಯಿಂಡಡಿ, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷ ಶಾಹಿನಾ ಸಲೀಂ ಮೊದಲಾದವರು ಉಪಸ್ಥಿತರಿರುವರು.
ವರಿಷ್ಠ ಇಂಜಿನಿಯರ್ ಇ.ಜಿ.ವಿಶ್ವಪ್ರಕಾಶ್ ವರದಿ ವಾಚಿಸುವರು. ಕೇರಳ ರಸ್ತೆ ನಿಧಿ ಮಂಡಳಿ ಪ್ರಧಾನ ಇಂಜಿನಿಯರ್ ವಿ.ವಿ.ಬಿನು ಸ್ವಾಗತಿಸುವರು. ಕಾರ್ಯಕಾರಿ ಇಂಜಿನಿಯರ್ ಕೆ.ಪಿ.ವಿನೋದ್ ಕುಮಾರ್ ವಂದಿಸುವರು.


